ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನಾಶ್ವರ್ಯ! ಎಲಿಜಬೆತ್ ರಾಣಿ ವಿರುದ್ಧ ನಿಂತ ಸೇವಕರು

By Mahesh
|
Google Oneindia Kannada News

ಲಂಡನ್, ಮಾ.31: ಎಂದೂ ಮುಳುಗದ ಸಾಮ್ರಾಜ್ಯ ನಮ್ಮದು ಎಂದು ಬೀಗುವ ಬ್ರಿಟಿಷರ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬ್ರಿಟನ್ನಿನ ಎಲಿಜಬೆತ್ ರಾಣಿ ವಿಂಡ್ಸರ್ ಕೋಟೆಯ ಮುಂದೆ 'ಕೆಂಪು ಬಾವುಟ' ಕಾಣಿಸಿಕೊಳ್ಳುವ ಭೀತಿ ಎದುರಾಗಿದೆ.

ವಿಂಡ್ಸರ್ ಕೋಟೆಯ ಸಿಬ್ಬಂದಿಗಳಿಗೆ ತಾವು ಪಡೆಯುತ್ತಿರುವ ಸಂಬಳ ದಿನಕೂಲಿ ನೌಕರರಿಗಿಂತಲೂ ಕಡಿಮೆ ಎಂಬ ಸತ್ಯ ತಡವಾಗಿ ಅರಿವಾಗಿದೆ. ಸುಮಾರು 14,400 ಪೌಂಡ್( 21,000 USD ಅಥವಾ 13.35 ಲಕ್ಷ ರು) ಪ್ರತಿ ವರ್ಷ ಎಣಿಸುವ ಸಿಬ್ಬಂದಿಗೆ ಸಂಬಳ ಏರಿಕೆ ಹಾಗಿರಲಿ ಸಿಗುವ ಸಂಬಳಕ್ಕೆ ಹೆಚ್ಚಿನ ಡ್ಯೂಟಿ ಮಾಡುವ ಪ್ರಸಂಗ ಎದುರಾಗಿದೆ. [ಒಂದೇ ವೀಸಾದಡಿ ಇಂಗ್ಲೆಂಡ್-ಐರ್ಲೆಂಡ್ ಪ್ರವಾಸ ಭಾಗ್ಯ]

ವಿಂಡ್ಸರ್ ಕೋಟೆ, ಬ್ರಿಟಿಷರ ಆಳ್ವಿಕೆಯ ವೈಭೋಗ ನೋಡಲು ಬರುವ ಪ್ರವಾಸಿಗರು, ಅತಿಥಿಗಳ ಯೋಗಕ್ಷೇಮ ಅಲ್ಲದೆ ಹಲವಾರು ಮಂದಿ ದ್ವಿಭಾಷಾ ತಜ್ಞರು, ಪ್ರಾಥಮಿಕ ಚಿಕಿತ್ಸೆ ನೀಡುವ ಸಿಬ್ಬಂದಿಗಳು ಇಲ್ಲಿದ್ದಾರೆ.

Queen Elizabeth faces first ever staff strike over 'appalling' low pay

ಓವರ್ ಟೈಂ ಮಾಡಿದರೆ ಕೈತುಂಬ ಸಂಬಳ ಎಂಬ ಗಿಲಾಟು ಮತಿಗೆ ಸೋತು ಕಾರ್ಯ ನಿರ್ವಹಿಸಿದ ಸಿಬ್ಬಂದಿ ಈಗ ಬೆಸ್ತು ಬಿದ್ದಿದ್ದಾರೆ. ಪಬ್ಲಿಕ್ ಹಾಗೂ ಕಮರ್ಷಿಯಲ್ ಸರ್ವೀಸಸ್(ಪಿಸಿಎಸ್)ಯೂನಿಯನ್ ಗೆ ಇಲ್ಲಿನ 200 ಸಿಬ್ಬಂದಿಗಳ ಪೈಕಿ 120ಸಿಬ್ಬಂದಿ ಸೇರಿದ್ದು, ರಾಯಲ್ ಫ್ಯಾಮಿಲಿಯಿಂದ ನಷ್ಟವಾಗಿದೆ ಎಂದಿದ್ದಾರೆ. [ಇಂಗ್ಲೆಂಡಿನಲ್ಲಿ ಬೆಳಗಿದ ಬೆಂಗಳೂರಿನ ಬಾಲಕ]

ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲ ಎಂಬ ವಿಷಯ ಮಾಧ್ಯಮಗಳಲ್ಲಿ ವರದಿಯಾಗಿ ಸುದ್ದಿಯಾಗಿರುವುದು ರಾಯಲ್ ಫ್ಯಾಮಿಲಿಗೆ ಅಪಮಾನಕರ ಸಂಗತಿ. ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸುತ್ತಾರೆ ಎಂಬ ನಂಬಿಕೆಯಿದೆ. [ಏನು ಸಾಧನೆ ಮಾಡಿದ್ದಾರಂತ ಇವರಿಗೆ ಸ್ಯಾಲರಿ ಹೈಕು?]

ಮಾ.31ರಿಂದ ಏ.14ರ ತನಕ ಈ ಬಗ್ಗೆ ಅಭಿಪ್ರಾಯ ಸಂಗ್ರಹ ಕಾರ್ಯ ನಡೆಯಲಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಸಿಬ್ಬಂದಿಗಳು ಮುಷ್ಕರ ಹೂಡಬೇಕಾಗುತ್ತದೆ ಎಂದು ನೌಕರರ ಯೂನಿಯನ್ ಪ್ರಧಾನ ಕಾರ್ಯದರ್ಶಿ ಮಾರ್ಕ್ ಸೆವೋಟ್ಕಾ ಹೇಳಿದ್ದಾರೆ. [ಸ್ಕಾಟ್ಲೆಂಡ್ ಒಂದು ಸ್ವತಂತ್ರ ದೇಶವಾಗಬೇಕೆ? NO]

ವಿಶ್ವದ ಅತ್ಯಂತ ಪುರಾತನ ಹಾಗೂ ವಿಶಾಲವಾದ ಕೋಟೆಯಾಗಿರುವ ವಿಂಡ್ಸರ್ ಕ್ಯಾಸಲ್ ವಾರ್ಷಿಕವಾಗಿ 1.1 ಮಿಲಿಯನ್ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸುಮಾರು 17 ಮಿಲಿಯನ್ ಪೌಂಡ್ ನಿರ್ವಹಣಾ ವೆಚ್ಚ ತಗುಲುತ್ತದೆ. ಇದನ್ನು ರಾಯಲ್ ಕಲೆಕ್ಷನ್ ಟ್ರಸ್ಟ್ ಚಾರಿಟಿ ನೀಡುತ್ತಿದ್ದು, ಬ್ರಿಟನ್ನಿನ ಐತಿಹಾಸಿಕ ಸ್ಮಾರಕ, ಕೋಟೆಗಳ ನಿರ್ವಹಣೆ ಹೊಣೆ ಹೊತ್ತಿದೆ. (ಐಎಎನ್ಎಸ್)

English summary
Britain's Queen Elizabeth II is facing the first ever strike threat by her staff, when workers at Windsor Castle vote over "appalling" low pay and allowances.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X