ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ 45ನೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಕ್ತಿಚಿತ್ರ

By Prasad
|
Google Oneindia Kannada News

ಬೆಂಗಳೂರು, ನವೆಂಬರ್ 10 : ರಿಯಲ್ ಎಸ್ಟೇಟ್ ರಾಜ, ಶ್ರೀಮಂತಾತಿ ಶ್ರೀಮಂತ ವ್ಯಾಪಾರಿ, ಕಟ್ಟಡ ನಿರ್ಮಾತೃ, ವಿಶ್ವ ಸೌಂದರ್ಯ ಸ್ಪರ್ಧೆಯ ಆಯೋಜಕ, ಟಿವಿ ರಿಯಾಲಿಟಿ ಶೋ ಸ್ಟಾರ್, ಸಿನೆಮಾ ನಟ, ರಾಜಕಾರಣಿ, ಮಹಾನ್ ರಸಿಕ.... ಇವು ಸಕಲ ಕಲಾವಲ್ಲಭ, ಅಮೆರಿಕದ 45ನೇ ಅಧ್ಯಕ್ಷನಾಗಿ ಆಯ್ಕೆಯಾಗಿರುವ 70ರ ಹರೆಯದ ಡೊನಾಲ್ಡ್ ಟ್ರಂಪ್ ಸಂಕ್ಷಿಪ್ತ ವ್ಯಕ್ತಿಪರಿಚಯ.

ಬಹುತೇಕ ಚುನಾವಣಾ ಸಮೀಕ್ಷೆಗಳನ್ನು ಸುಳ್ಳು ಮಾಡಿ, ಕೋಟ್ಯಂತರ ಜನರ ನಿರೀಕ್ಷೆಗಳನ್ನು ಬುಡಮೇಲು ಮಾಡಿ, ರಾಜಕೀಯದ ಗಂಧಗಾಳಿ ಅಷ್ಟಾಗಿ ಇಲ್ಲದಿದ್ದರೂ ತನ್ನ ವರ್ಚಸ್ಸಿನಿಂದಲೇ ಹಿಲರಿ ಕ್ಲಿಂಟನ್ ನಂಥ ಘಟಾನುಘಟಿ ರಾಜಕಾರಣಿಯನ್ನು ಸದೆಬಡಿದು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ 'ಡಾನ್' ಡೊನಾಲ್ಡ್ ಟ್ರಂಪ್.

2016ರಲ್ಲಿ ಫೋರ್ಬ್ಸ್ ಬಿಡುಗಡೆ ಮಾಡಿದ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ 324ನೇ ಸ್ಥಾನ ಪಡೆದಿರುವ ಮತ್ತು ಅಮೆರಿಕದ ಧನಿಕರ ಪಟ್ಟಿಯಲ್ಲಿ 156ನೇ ಸ್ಥಾನ ಅಲಂಕರಿಸಿರುವ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷನಾಗುವುದು ಸಾಧ್ಯವೇ ಇಲ್ಲ ಹಲವಾರು ಅಮೆರಿಕದ ಪತ್ರಿಕೆಗಳು ಷರಾ ಬರೆದಿದ್ದವು. ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗು ಮಾಡಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲಿದ್ದಾರೆ ಡೊನಾಲ್ಡ್.

ನ್ಯೂ ಯಾರ್ಕ್ ಸಿಟಿಯಲ್ಲಿ ಜನನ

ನ್ಯೂ ಯಾರ್ಕ್ ಸಿಟಿಯಲ್ಲಿ ಜನನ

1946ರ ಜೂನ್ 14ರಂದು ನ್ಯೂ ಯಾರ್ಕ್ ಸಿಟಿಯಲ್ಲಿ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಮಹಾನ್ ಶೋಕಿಲಾಲ ಡೋನಾಲ್ಡ್ ಟ್ರಂಪ್ ಅವರ ವ್ಯಕ್ತಿಚಿಕ್ರವನ್ನು ಪಿಟಿಐ ಈ ಇನ್ಫೋಗ್ರಾಫಿಕ್ಸ್ ನಲ್ಲಿ ಹಿಡಿದಿಟ್ಟಿದೆ.

ಹಿಲರಿ ವಿರುದ್ಧ ಅಚ್ಚರಿ ಜಯ

ಹಿಲರಿ ವಿರುದ್ಧ ಅಚ್ಚರಿ ಜಯ

ನವೆಂಬರ್ 8ರಂದು ನಡೆದ ಪಾಪ್ಯುಲರ್ ವೋಟ್ ನಲ್ಲಿ ಗೆಲ್ಲಲು ಬೇಕಿದ್ದು 270 ಮತಗಳು. ಹಲವಾರು ಅಮೆರಿಕ ಪತ್ರಿಕೆಗಳ ಸಮೀಕ್ಷೆಯನ್ನು ತಿರುಗುಮುರುಗು ಮಾಡಿ ಡೊನಾಲ್ಡ್ ಟ್ರಂಪ್ ಗಳಿಸಿದ್ದು 289 ಮತಗಳು. ಹಿಲರಿಗೆ ಸಿಕ್ಕಿದ್ದು ಕೇವಲ 218 ಮತಗಳು.

ಯಾವ ರಾಜ್ಯದಲ್ಲಿ ಎಷ್ಟೆಷ್ಟು ಮತಗಳು

ಯಾವ ರಾಜ್ಯದಲ್ಲಿ ಎಷ್ಟೆಷ್ಟು ಮತಗಳು

ಅಮೆರಿಕದಲ್ಲಿ ಇರುವ 50 ರಾಜ್ಯಗಳಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್‌ಗೆ ಸಿಕ್ಕಿದ್ದು ಎಷ್ಟು ಮತಗಳು ಮತ್ತು ಡೆಮೊಕ್ರೆಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಅವರಿಗೆ ಸಿಕ್ಕಿದ್ದು ಎಷ್ಟು ಮತಗಳು ಎಂಬುದು ಈ ಇನ್ಫೋಗ್ರಾಫಿಕ್ಸ್ ನಲ್ಲಿದೆ.

ವಿವಾದಗಳ ಸರದಾರ

ವಿವಾದಗಳ ಸರದಾರ

ಮುಸ್ಲಿಂನರನ್ನು ಅಮೆರಿಕದಿಂದ ಕಿತ್ತೊಗೆಯುತ್ತೇನೆ, ಮೆಕ್ಸಿಕೋ ವಲಸೆಗಾರರು ಅತ್ಯಾಚಾರಿಗಳು ಅಂದಿದ್ದ, ಇರಾಕ್ ನಲ್ಲಿ ಹತ್ಯೆಗೀಡಾದ ಅಮೆರಿಕದ ಯೋಧನ ಕುಟುಂಬದ ಮೇಲೆ ವಾಗ್ದಾಳಿ, ನ್ಯೂಯಾರ್ಕ್ ಟೈಮ್ಸ್‌ನ ವಿಕಲಾಂಗ ವರದಿಗಾರನನ್ನು ಅವಹೇಳನ ಮಾಡಿದ್ದ, ಡೊನಾಲ್ಡ್ ಇಂದು ಅಮೆರಿಕದ ಅಧ್ಯಕ್ಷ

English summary
Profile : USA president-elect Donald Trump. Rich businessman, builder, real estate mogul, reality tv star, actor, pageant owner and what not? Donald Trump is the 45th president of United States of America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X