ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆನಡಾದಲ್ಲಿ ಮೋದಿ ಭಾಷಣದ ಮುಖ್ಯಾಂಶಗಳು

|
Google Oneindia Kannada News

ಟೊರೆಂಟೋ, ಏ. 16 : ಮೂರು ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕೆನಡಾದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು. ಭಾರತ ಮತ್ತು ಕೆನಡಾದ ಹೊಸ ಯುಗ ಆರಂಭವಾಗಿದೆ, ಅಭಿವೃದ್ಧಿಯ ವಿಚಾರದಲ್ಲಿ ಎರಡೂ ದೇಶಗಳು ಒಟ್ಟಿಗೆ ಸಾಗಲಿವೆ ಎಂದು ಮೋದಿ ಘೋಷಿಸಿದರು.

ಟೊರೆಂಟೋದಲ್ಲಿ 'ಆಪ್‌ ಸಪ್‌ ಸಬ್‌ ಕೋ ನಮಸ್ಕಾರ್' ಎಂದು ಭಾಷಣ ಆರಂಭಿಸಿದ ಮೋದಿ, 2003ರಿಂದಲೂ ಗುಜರಾತ್ ಜೊತೆ ಸಂಪರ್ಕ ಹೊಂದಿರುವ ದೇಶವಿದು ಎಂದು ಕೆನಡಾವನ್ನು ಹೊಗಳಿದರು. ಕೆನಡಾದ ಪ್ರಧಾನಿಗೆ ಧನ್ಯವಾದ ಅರ್ಪಿಸಿದ ಮೋದಿ, ದೇಶದ ಜನತೆಗೆ ನಾನು ಅಭಾರಿಯಾಗಿದ್ದೇನೆ ಎಂದರು. [ಪ್ಯಾರಿಸ್ ನಲ್ಲಿ ಮೋದಿ ಹೇಳಿದ್ದೇನು?]

Narendra Modi

ಭಾರತ ಮತ್ತು ಕೆನಡಾದ ಸಂಬಂಧ ಹಳೆಯದು. ಇಲ್ಲಿ ಭಾರತದ ಪರಿಚಯವನ್ನು ಮೋದಿ ಮಾಡಿಕೊಟ್ಟಿಲ್ಲ, ನೀವು ಮಾಡಿಕೊಟ್ಟಿದ್ದೀರಿ ಎಂದರು. ಲೋಕಸಭೆ ಚುನಾವಣೆಯಲ್ಲಿ ನಾನು ಜಯಗಳಿಸಿದಾಗಲೂ ಕೆನಡಾದಲ್ಲಿ ಜಯಘೋಷ ಮೊಳಗಿತ್ತು ಎಂದು ಮೋದಿ ಹೇಳಿದರು. [ಜರ್ಮನಿಯಲ್ಲೂ ಮೋದಿ ಮೇಕ್ ಇನ್ ಇಂಡಿಯಾ ಮ್ಯಾಜಿಕ್]

ಮೋದಿ ಭಾಷಣದ ಮುಖ್ಯಾಂಶಗಳು

* ಅಮೆರಿಕ, ಬ್ರಿಟನ್ ನನಗೆ ವೀಸಾ ನಿರಾಕರಿಸಿದಾಗ ಕೆನಡಾ ವೀಸಾ ನೀಡಿತ್ತು. ಇನ್ನು ಮುಂದೆ ಅಭಿವೃದ್ಧಿ ವಿಚಾರದಲ್ಲಿ ಭಾರತ-ಕೆನಡಾ ಒಟ್ಟಿಗೆ ಸಾಗಲಿವೆ. ಕೆನಡಾದ ಜನತೆಗೆ ನಾನು ಅಭಾರಿಯಾಗಿದ್ದೇನೆ.

* 2003ರಿಂದಲೂ ಕೈಗಾರಿಕಾ ಅಭಿವೃದ್ಧಿಯಲ್ಲಿ ಕೆನಡಾ ಗುಜರಾತ್‌ನೊಂದಿಗೆ ಸಂಬಂಧ ಹೊಂದಿದೆ. ಭಾರತ ಕೆನಡಾದ ಸಂಬಂಧ ತುಂಬಾ ಹಳೆಯದು. ಇನ್ನು ಮುಂದೆಯೂ ಎರಡೂ ದೇಶಗಳು ಒಟ್ಟಾಗಿ ಸಾಗಲಿವೆ.

* ಅಡುಗೆ ಅನಿಲಕ್ಕೆ ಸರ್ಕಾರ ನೀಡುವ ಸಬ್ಸಿಡಿಯನ್ನು ವಾಪಸ್ ನೀಡುವಂತೆ ಭಾರತೀಯರಿಗೆ ಕರೆ ಕೊಟ್ಟಿದ್ದೆ. 4 ಲಕ್ಷ ಜನರು ಸಬ್ಸಿಡಿ ವಾಪಸ್ ನೀಡಿದ್ದು, ಇದರಿಂದ ಬಡವರಿಗೆ ಅನುಕೂಲವಾಗಿದೆ. ಸಬ್ಸಿಡಿ ಹಣ ಬಡಜನರಿಗೆ ತಲುಪುತ್ತಿದೆ.

* ಕೆನಡಾದಲ್ಲಿ ಭಾರತದ ಪರಿಚಯವನ್ನು ನೀವು ಮಾಡಿಕೊಟ್ಟಿದ್ದೀರಿ. ನೀವು ಮಾಡಿದ ಸನ್ಮಾನ ನರೇಂದ್ರ ಮೋದಿಗೆ ಮಾತ್ರ ಸೀಮಿತವಲ್ಲ. ಭಾರತದ ಎಲ್ಲಾ ದೇಶವಾಸಿಗಳಿಗೆ ಅದು ಸೇರುತ್ತದೆ.

* ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ, ಸಣ್ಣ-ಸಣ್ಣ ಯೋಜನೆಗಳ ಮೂಲಕ ನಾವು ಅಭಿವೃದ್ಧಿ ಸಾಧಿಸುತ್ತಾ ಸಾಗುತ್ತಿದ್ದೇವೆ. 42 ವರ್ಷಗಳಲ್ಲಿ ಸಾಧ್ಯವಾಗದ್ದು 10 ತಿಂಗಳಿನಲ್ಲಿ ಆಗುತ್ತಿದೆ.

English summary
Prime Minister Narendra Modi addressed the Indian diaspora at the Ricoh Coliseum in Toronto. Here is highlights of the speech.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X