ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಿಕಾರ ಹಸ್ತಾಂತರಕ್ಕಾಗಿ ಪ್ರಧಾನಿ ಹುದ್ದೆ ತೊರೆದ ಪ್ರಚಂಡ!

ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ತಮ್ಮ ಹುದ್ದೆಗೆ ಬುಧವಾರ ರಾಜೀನಾಮೆ ನೀಡಿದ್ದಾರೆ. ಮಾವೋವಾದಿ ಬಂಡುಕೋರ ಮುಖ್ಯಸ್ಥ ಪ್ರಚಂಡ ಅವರು ಆಡಳಿತಾರೂಢ ಮಿತ್ರಪಕ್ಷ ನೇಪಾಳಿ ಕಾಂಗ್ರೆಸ್ಸಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ

By Mahesh
|
Google Oneindia Kannada News

ಕಠ್ಮಂಡು, ಮೇ 24: ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ತಮ್ಮ ಹುದ್ದೆಗೆ ಬುಧವಾರ ರಾಜೀನಾಮೆ ನೀಡಿದ್ದಾರೆ. ಮಾವೋವಾದಿ ಬಂಡುಕೋರ ಮುಖ್ಯಸ್ಥ ಪ್ರಚಂಡ ಅವರು ಆಡಳಿತಾರೂಢ ಮಿತ್ರಪಕ್ಷ ನೇಪಾಳಿ ಕಾಂಗ್ರೆಸ್‌ ಜತೆ ಮಾಡಿಕೊಂಡ ಒಪ್ಪಂದದ ಅನ್ವಯ ಕಾಂಗ್ರೆಸ್ಸಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ.

ಕಮ್ಯೂನಿಸ್ಟ್ ಪಾರ್ಟಿ ಆಫ್ ನೇಪಾಳ (ಸಿಪಿಎನ್) ಮುಖ್ಯಸ್ಥರಾಗಿದ್ದ ಪುಷ್ಪ ಕಮಲ್ ದಹಲ್ ಪ್ರಚಂಡ ಅವರು 2016ರ ಆಗಸ್ಟ್ 3ರಂದು ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೆರ್ ಬಹಾದುರ್ ದೇವುಬಾ ಅವರ ಜತೆ ಮೈತ್ರಿ ಸಾಧಿಸಿ ಅಧಿಕಾರ ಸ್ಥಾಪಿಸಿದ್ದರು.

Prachanda quits as Nepal PM

ನೇಪಾಳದ 39ನೇ ಪ್ರಧಾನಿಯಾಗಿ ಆಯ್ಕೆಯಾಗಿದ್ದ 62 ವರ್ಷದ ಪ್ರಚಂಡ ಅವರು ಕಳೆದ 9 ತಿಂಗಳಿನಿಂದ ನೇಪಾಳದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು. 2018ರ ಫೆಬ್ರುವರಿಯಲ್ಲಿ ನಡೆಯಲಿರುವ ಚುನಾವಣೆವರೆಗೂ ಅಧಿಕಾರ ಹಸ್ತಾಂತರಿಸುವ ಮೂಲಕ ಸರದಿಯಲ್ಲಿ ಆಡಳಿತ ಜಾರಿಯಲ್ಲಿದೆ.

ಸೇನಾಪಡೆಯ ಮುಖ್ಯಸ್ಥ ರುಕ್ಮಾಂಗದ ಕಟವಾಲ್ ಅವರ ಅಮಾನತು ಪ್ರಕರಣದ ಹಿನ್ನೆಲೆಯಲ್ಲಿ ನೇಪಾಳದಲ್ಲಿ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟಿನಿಂದ ನೇಪಾಳ ಪ್ರಧಾನಮಂತ್ರಿ ಪುಷ್ಪಕಮಲ್ ದಾಹಲ್ ಅಲಿಯಾಸ್ ಪ್ರಚಂಡ ಅವರು 2009ರಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Nepal Prime Minister Prachanda resigned on Wednesday, paving the way for Nepali Congress chief Sher Bahadur Deuba to take over as per an understanding the two leaders had reached in August last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X