ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಪಾನ್ ನಲ್ಲಿ ನಡುಗಿದ ಭೂಮಿ, ದೆಹಲಿಯಲ್ಲೂ ಲಘು ಭೂಕಂಪ

|
Google Oneindia Kannada News

ನವದೆಹಲಿ, ಮೇ 30: ನೇಪಾಳದಲ್ಲಿ ಸಾವಿರಾರು ಜನರನ್ನು ಬಲಿಪಡೆದಿದ್ದ ಭೂಕಂಪ ಜಪಾನಲ್ಲಿ ಶನಿವಾರ ತನ್ನ ಅವತಾರ ತೋರಿಸಿದೆ. ಶನಿವಾರ ರಾತ್ರಿ ಜಪಾನ್ ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ 7.8ರಷ್ಟು ತೀವ್ರತೆ ದಾಖಲಾಗಿದೆ.

ದೇಶದ ರಾಜಧಾನಿ ನವದೆಹಲಿ ಸೇರಿದಂತೆ ಹಲವೆಡೆ ಲಘು ಭೂಕಂಪದ ಅನುಭವವಾಗಿದೆ. ಜಪಾನ್ ನ ಬೋನಿಸ್ ದ್ವೀಪದಲ್ಲಿ ಭೂಕಂಪನದ ಕೇಂದ್ರಬಿಂದು ಇತ್ತು ಎಂದು ಹೇಳಲಾಗಿದೆ. ಟೋಕಿಯೋದ ಫೆಸಿಪಿಕ್ ಸಮುದ್ರದಿಂದ 874 ಕಿಲೋ ಮೀಟರ್ ದೂರದಲ್ಲಿ ಭೂಕಂಪ ಸಂಭವಿಸಿರುವುದಾಗಿ ಅಮೆರಿಕದ ಭೂಗರ್ಭಶಾಸ್ತ್ರ ಸಂಸ್ಥೆ ತಿಳಿಸಿದೆ.

japan

ಭೂಕಂಪದಲ್ಲಿ ಯಾವಿದೇ ಸಾವು ನೋವು ಸಂಭವಿಸಿರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ನೋವಿನ ಬಗ್ಗೆ ಈವರೆಗೂ ಯಾವುದೇ ವರದಿಯಾಗಿಲ್ಲ. ಇದು ಪ್ರಭಲ ಭೂಕಂಪನವೇ ಆಗಿದ್ದು, ಆದರೆ ಸಮುದ್ರದ 421 ಮೈಲಿಗಳ ಆಳದಲ್ಲಿ ಸಂಭವಿಸಿರುವುದರಿಂದ ಸುನಾಮಿ ಅಲೆಗಳು ಏಳಲು ಸಾಧ್ಯವಿಲ್ಲ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ನೇಪಾಳದಲ್ಲಿ ಕಳೆದ ತಿಂಗಳು ಸಂಭವಿಸಿದ್ದ ಭೂಕಂಪ ಸಾವಿರಾರು ಜನರ ಜೀವ ಬಲಿಪಡೆದುತ್ತು. ನಂತರ ಹಿಮಾಲಯ ತಪ್ಪಲಿಮ ಕೆಲ ಭಾಗಗಳಲ್ಲೂ ಲಘು ಭೂ ಕಂಪ ಸಂಭವಿಸಿತ್ತು.

English summary
A magnitude 7.8 earthquake has struck 194 kilometres off Japan's coast, according to United States Geological Survey (USGS), but there were no immediate reports of damage, public broadcaster NHK said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X