ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐತಿಹಾಸಿಕ ದೇಗುಲದಲ್ಲಿ ಮೋದಿಗೆ ದಿವ್ಯಾನುಭವ

By Mahesh
|
Google Oneindia Kannada News

ಢಾಕಾ, ಜೂ.07: ಬಾಂಗ್ಲಾದೇಶ ಪ್ರವಾಸ ಕೈಗೊಂಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಮುಂಜಾನೆ 800 ವರ್ಷ ಪುರಾತನ ಇತಿಹಾಸವುಳ್ಳ ಢಾಕೇಶ್ವರಿ ದೇಗುಲಕ್ಕೆ ಭೇಟಿ ನೀಡಿದರು. ಬಾಂಗ್ಲಾದೇಶದ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ದೇಗುಲ ಎಂದೇ ಭಕ್ತಿಭಾವದಿಂದ ಕಾಣಲ್ಪಡುವ ದೇವಸ್ಥಾನದಲ್ಲಿ ಮೋದಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ಢಾಕಾ ನಗರದ ಲಾಲ್​ಬಾಗ್​ ಪ್ರದೇಶದಲ್ಲಿರುವ ಢಾಕೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ನಂತರ ರಾಮಕೃಷ್ಣ ಮಿಷನ್​ಗೂ ಭೇಟಿ ನೀಡಿದರು. ಎರಡು ಕಡೆಗಳಲ್ಲಿ ಅಲ್ಲಿನ ಅಧಿಕಾರಿಗಳೊಡನೆ ಸಂಕ್ಷಿಪ್ತವಾಗಿ ಮಾತುಕತೆ ನಡೆಸಿದ ಪ್ರಧಾನಿ ಮೋದಿ ಅವರು ಸ್ಮರಣಿಕೆಗಳನ್ನು ನೀಡಿದರು.

ಕಳೆದ ವರ್ಷ ಜುಲೈನಲ್ಲಿ ಬಾಂಗ್ಲಾ ಪ್ರವಾಸ ಕೈಗೊಂಡಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು 12ನೇ ಶತಮಾನದ ಈ ದೇಗುಲಕ್ಕೆ ಭೇಟಿ ನೀಡಿದ್ದರು. ಬಲ್ಲಾಳ ಸೇನಾ ನಿರ್ಮಾಣ ಮಾಡಿರುವ ಈ ದೇಗುಲವು ಢಾಕಾ ನಗರದ ಅಧಿದೇವತೆ ಢಾಕೇಶ್ವರಿಯ ಆವಾಸ ಸ್ಥಾನವಾಗಿದೆ.

ಉಭಯ ದೇಶಗಳ ನಡುವಿನ ಬಾಂಧವ್ಯ ಗಟ್ಟಿ

ಉಭಯ ದೇಶಗಳ ನಡುವಿನ ಬಾಂಧವ್ಯ ಗಟ್ಟಿ

ಭಾರತದ ಪ್ರಧಾನಿ ಮೋದಿ ಅವರ ಭೇಟಿಯಿಂದ ಉಭಯ ದೇಶಗಳ ನಡುವಿನ ಬಾಂಧವ್ಯ ಇನ್ನಷ್ಟು ಗಟ್ಟಿಗೊಂಡಿದೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

ಢಾಕೇಶ್ವರಿ ದೇಗುಲದಲ್ಲಿ ಮೋದಿ 'ಆರತಿ'

ಢಾಕೇಶ್ವರಿ ದೇಗುಲದಲ್ಲಿ ಮೋದಿ ಅವರು ಪೂಜೆ ಸಲ್ಲಿಸಿ, 'ಆರತಿ' ಬೆಳಗಿದರು.

ರಾಮಕೃಷ್ಣ ಮಿಷನ್ ನಲ್ಲಿ ಮೋದಿ

ರಾಮಕೃಷ್ಣ ಮಿಷನ್ ನಲ್ಲಿ ರಾಮಕೃಷ್ಣ ಪರಮಹಂಸರ ಮುಂದೆ ಪ್ರಧಾನಿ ಮೋದಿ

.

ಢಾಕೇಶ್ವರಿ ಮೋದಿಗೆ ದಿವ್ಯಾನುಭವ

ಐತಿಹಾಸಿಕ ದೇಗುಲದಲ್ಲಿ ಪ್ರಧಾನಿ ಮೋದಿಗೆ ದಿವ್ಯಾನುಭವವಾಗಿದೆಯಂತೆ.

ಐದಾರು ಯೋಜನೆಗಳಿಗೆ ಚಾಲನೆ

ಅಂಧರ ಶಾಲೆ ಸೇರಿದಂತೆ ಐದಾರು ಮಹತ್ವದ ಯೋಜನೆಗೆ ಮೋದಿ ಅವರಿಂದ ಚಾಲನೆ.

English summary
Indian Prime Minister Narendra Modi on Sunday visited the Dhakeshwari temple in Lalbagh in the city, the Ramkrishna Mission and inaugurated the Indian High Commission chancery at Baridhara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X