{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"http://kannada.oneindia.com/news/international/pm-narendra-modi-second-list-30-top-performing-world-leaders-090163.html" }, "headline": "ವಿಶ್ವದ ಪ್ರಭಾವಿ ನಾಯಕರ ಪಟ್ಟಿ : ಮೋದಿಗೆ ನಂ.2 ಸ್ಥಾನ", "url":"http://kannada.oneindia.com/news/international/pm-narendra-modi-second-list-30-top-performing-world-leaders-090163.html", "image": { "@type": "ImageObject", "url": "http://kannada.oneindia.com/img/1200x60x675/2014/12/19-1418994766-modi-pm-meet.jpg", "width": "1200", "height":"675" }, "thumbnailUrl":"http://kannada.oneindia.com/img/128x50/2014/12/19-1418994766-modi-pm-meet.jpg", "datePublished": "2014-12-19T18:44:45+05:30", "dateModified": "2014-12-19T18:51:16+05:30", "author": { "@type": "Person", "name": "Mahesh" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"International", "description": "Prime Minister Narendra Modi was placed No 2, behind Chinese President Xi Jinping, in a list of 30 top-performing world leaders by a Japanese market research firm.", "keywords": "PM Narendra Modi second in list of 30 top-performing world leaders,ವಿಶ್ವದ ಪ್ರಭಾವಿ ನಾಯಕರ ಪಟ್ಟಿ : ನಂ.2ನಲ್ಲಿ ಮೋದಿ", "articleBody":"ಬೀಜಿಂಗ್, ಡಿ. 19: ವಿಶ್ವದ ಪ್ರಭಾವಿ ಸಕ್ರಿಯ ನಾಯಕರ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನಂ.2ನೇ ಸ್ಥಾನದಲ್ಲಿದ್ದಾರೆ. ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ ಎಂದು ಜಪಾನಿನ ಮಾರುಕಟ್ಟೆ ಸಂಶೋಧನಾ ಸಂಸ್ಥೆ ವರದಿ ಮಾಡಿದೆ.ವಿಶ್ವದ ಅತ್ಯಂತ ಪ್ರಭಾವಿ ಸಕ್ರಿಯ ಮುಖಂಡರ ಬಗ್ಗೆ ಅಧ್ಯಯನ ನಡೆಸಿ 30 ಜನರ ಪಟ್ಟಿಯನ್ನು ಜಪಾನಿನ ಸಂಶೋಧನಾ ಸಂಸ್ಥೆ ತಯಾರಿಸಿದೆ. ಈ ಪೈಕಿ ಚೀನಾ ಅಧ್ಯಕ್ಷ ಮೊದಲ ಸ್ಥಾನದಲ್ಲಿದ್ದರೆ, ಮೋದಿ ಎರಡನೇ ಸ್ಥಾನ ಹಾಗೂ ಜರ್ಮನಿಯ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಮೂರನೇ ಸ್ಥಾನದಲ್ಲಿದ್ದಾರೆ. ರಾಜಕೀಯ ಮುಖಂಡರ ಮೇಲೆ ಜನತೆ ಇಟ್ಟಿರುವ ನಂಬಿಕೆ ಹಾಗೂ ಅವರು ತೆಗೆದುಕೊಳ್ಳುವ ಕ್ರಮಗಳನ್ನು ತುಲನೆ ಮಾಡಿ ಪಟ್ಟಿ ತಯಾರಿಸಲಾಗುತ್ತಿದೆ.ಟೋಕಿಯೋ ಮೂಲದ ಜಿಎಂಒ ರಿಸರ್ಚ್ ಸಂಸ್ಥೆ ಕ್ಸಿ, ಮೋದಿ ಹಾಗೂ ಮಾರ್ಕೆಲ್ ರನ್ನು ವಿಶ್ವದ ಟಾಪ್ ನಾಯಕರು ಎಂದು ಕರೆದಿದೆ. 26,000ಕ್ಕೂ ಅಧಿಕ ಜನರ ಪ್ರತಿಕ್ರಿಯೆ ಪಡೆಯಲಾಗಿದ್ದು, ಕ್ರಮವಾಗಿ ಈ ಮೂವರು ಮುಖಂಡರಿಗೆ 10ಕ್ಕೆ 7.5,7.3 ಹಾಗೂ 7.2 ಅಂಕಗಳು ಲಭಿಸಿವೆ.ನಾಲ್ಕನೇ ಸ್ಥಾನದಲ್ಲಿ ಫ್ರಾನ್ಸಿನ ಅಧ್ಯಕ್ಷ ಫ್ರಾಂಕೋಯಿಸ್ ಹೊಲ್ಲಾಂಡೆ(6.3), ಐದನೇ ಸ್ಥಾನದಲ್ಲಿ ಜಪಾನ್ ಪ್ರಧಾನಿ ಶಿಂಜೋ ಅಬೆ(6.1) ಹಾಗೂ ಆರನೇ ಸ್ಥಾನದಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್(6.0) ಇದ್ದಾರೆ. ಜನಮನ ಗೆದ್ದ ಮೋದಿ ರೇಸಿನಿಂದ ಹೊರಕ್ಕೆಸಂಸತ್ ಸ್ಥಾನಕ್ಕೆ ಮೊದಲ ಬಾರಿಗೆ ಆಯ್ಕೆಯಾಗಿದ್ದಲ್ಲದೆ ಪ್ರಧಾನಿ ಪಟ್ಟವನ್ನು ಸಮರ್ಥವಾಗಿ ಮೋದಿ ನಿರ್ವಹಿಸುತ್ತಿದ್ದಾರೆ. ಜನತೆಯ ವಿಶ್ವಾಸ ಗಳಿಸುವತ್ತ ಸಾಗಿದ್ದಾರೆ. ಆದರೆ, ಇನ್ನಷ್ಟು ಜನರಿಗೆ ಸಂಸದರಾಗಿ ಮೋದಿ ಪರಿಚಯ ಆಗಬೇಕಿದೆ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ. ಪ್ರಭಾವಿ ನಾಯಕರ ಪಟ್ಟಿಯಲ್ಲಿ ಬ್ರೆಜಿಲ್ಲಿನ ಅಧ್ಯಕ್ಷೆ ದಿಲ್ಮಾ ರೌಸೆಫ್ ಹಾಗೂ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಜಾಕಬ್ ಜುಮಾ ಕೂಡಾ ಕಾಣಿಸಿಕೊಂಡಿದ್ದಾರೆ. ಸುಮಾರು 30 ದೇಶಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. (ಪಿಟಿಐ)" }
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಪ್ರಭಾವಿ ನಾಯಕರ ಪಟ್ಟಿ : ಮೋದಿಗೆ ನಂ.2 ಸ್ಥಾನ

By Mahesh
|
Google Oneindia Kannada News

ಬೀಜಿಂಗ್, ಡಿ. 19: ವಿಶ್ವದ ಪ್ರಭಾವಿ ಸಕ್ರಿಯ ನಾಯಕರ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನಂ.2ನೇ ಸ್ಥಾನದಲ್ಲಿದ್ದಾರೆ. ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ ಎಂದು ಜಪಾನಿನ ಮಾರುಕಟ್ಟೆ ಸಂಶೋಧನಾ ಸಂಸ್ಥೆ ವರದಿ ಮಾಡಿದೆ.

ವಿಶ್ವದ ಅತ್ಯಂತ ಪ್ರಭಾವಿ ಸಕ್ರಿಯ ಮುಖಂಡರ ಬಗ್ಗೆ ಅಧ್ಯಯನ ನಡೆಸಿ 30 ಜನರ ಪಟ್ಟಿಯನ್ನು ಜಪಾನಿನ ಸಂಶೋಧನಾ ಸಂಸ್ಥೆ ತಯಾರಿಸಿದೆ. ಈ ಪೈಕಿ ಚೀನಾ ಅಧ್ಯಕ್ಷ ಮೊದಲ ಸ್ಥಾನದಲ್ಲಿದ್ದರೆ, ಮೋದಿ ಎರಡನೇ ಸ್ಥಾನ ಹಾಗೂ ಜರ್ಮನಿಯ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಮೂರನೇ ಸ್ಥಾನದಲ್ಲಿದ್ದಾರೆ. ರಾಜಕೀಯ ಮುಖಂಡರ ಮೇಲೆ ಜನತೆ ಇಟ್ಟಿರುವ ನಂಬಿಕೆ ಹಾಗೂ ಅವರು ತೆಗೆದುಕೊಳ್ಳುವ ಕ್ರಮಗಳನ್ನು ತುಲನೆ ಮಾಡಿ ಪಟ್ಟಿ ತಯಾರಿಸಲಾಗುತ್ತಿದೆ.

PM Narendra Modi second in list of 30 top-performing world leaders

ಟೋಕಿಯೋ ಮೂಲದ ಜಿಎಂಒ ರಿಸರ್ಚ್ ಸಂಸ್ಥೆ ಕ್ಸಿ, ಮೋದಿ ಹಾಗೂ ಮಾರ್ಕೆಲ್ ರನ್ನು ವಿಶ್ವದ ಟಾಪ್ ನಾಯಕರು ಎಂದು ಕರೆದಿದೆ. 26,000ಕ್ಕೂ ಅಧಿಕ ಜನರ ಪ್ರತಿಕ್ರಿಯೆ ಪಡೆಯಲಾಗಿದ್ದು, ಕ್ರಮವಾಗಿ ಈ ಮೂವರು ಮುಖಂಡರಿಗೆ 10ಕ್ಕೆ 7.5,7.3 ಹಾಗೂ 7.2 ಅಂಕಗಳು ಲಭಿಸಿವೆ.

ನಾಲ್ಕನೇ ಸ್ಥಾನದಲ್ಲಿ ಫ್ರಾನ್ಸಿನ ಅಧ್ಯಕ್ಷ ಫ್ರಾಂಕೋಯಿಸ್ ಹೊಲ್ಲಾಂಡೆ(6.3), ಐದನೇ ಸ್ಥಾನದಲ್ಲಿ ಜಪಾನ್ ಪ್ರಧಾನಿ ಶಿಂಜೋ ಅಬೆ(6.1) ಹಾಗೂ ಆರನೇ ಸ್ಥಾನದಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್(6.0) ಇದ್ದಾರೆ. [ಜನಮನ ಗೆದ್ದ ಮೋದಿ ರೇಸಿನಿಂದ ಹೊರಕ್ಕೆ]

ಸಂಸತ್ ಸ್ಥಾನಕ್ಕೆ ಮೊದಲ ಬಾರಿಗೆ ಆಯ್ಕೆಯಾಗಿದ್ದಲ್ಲದೆ ಪ್ರಧಾನಿ ಪಟ್ಟವನ್ನು ಸಮರ್ಥವಾಗಿ ಮೋದಿ ನಿರ್ವಹಿಸುತ್ತಿದ್ದಾರೆ. ಜನತೆಯ ವಿಶ್ವಾಸ ಗಳಿಸುವತ್ತ ಸಾಗಿದ್ದಾರೆ. ಆದರೆ, ಇನ್ನಷ್ಟು ಜನರಿಗೆ ಸಂಸದರಾಗಿ ಮೋದಿ ಪರಿಚಯ ಆಗಬೇಕಿದೆ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ. ಪ್ರಭಾವಿ ನಾಯಕರ ಪಟ್ಟಿಯಲ್ಲಿ ಬ್ರೆಜಿಲ್ಲಿನ ಅಧ್ಯಕ್ಷೆ ದಿಲ್ಮಾ ರೌಸೆಫ್ ಹಾಗೂ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಜಾಕಬ್ ಜುಮಾ ಕೂಡಾ ಕಾಣಿಸಿಕೊಂಡಿದ್ದಾರೆ. ಸುಮಾರು 30 ದೇಶಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. (ಪಿಟಿಐ)

English summary
Prime Minister Narendra Modi was placed No 2, behind Chinese President Xi Jinping, in a list of 30 top-performing world leaders by a Japanese market research firm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X