ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ನರೇಂದ್ರ ಮೋದಿಗೆ ಭರ್ಜರಿ ಸ್ವಾಗತ

|
Google Oneindia Kannada News

ನ್ಯೂಯಾರ್ಕ್, ಸೆಪ್ಟೆಂಬರ್ 24 : ಸಿಲಿಕಾನ್ ವ್ಯಾಲಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೂಗಲ್ ಸಿಇಒ ಸುಂದರ್ ಪಿಚೈ ಸ್ವಾಗತ ಕೋರಿದ್ದಾರೆ. ಮೋದಿ ಅವರ ಭೇಟಿ ಬಗ್ಗೆ ಭಾರತೀಯ ಸಮುದಾಯ ತುಂಬಾ ಸಂಭ್ರಮದಲ್ಲಿರುವುದಾಗಿ ಹೇಳಿರುವ ಪಿಚೈ ಯೂಟ್ಯೂಬ್ ವಿಡಿಯೋದಲ್ಲಿ ವೆಲ್ ಕಮ್ ಸಂದೇಶ ನೀಡಿದ್ದಾರೆ.

ಹಿಂದಿನ ಸುದ್ದಿ : ಪ್ರಧಾನಿ ನರೇಂದ್ರ ಮೋದಿ ಎರಡನೇ ಬಾರಿಗೆ ಅಮೆರಿಕಗೆ ಭೇಟಿ ನೀಡಿದ್ದಾರೆ. ವಿದೇಶ ಪ್ರವಾಸದಲ್ಲಿರುವ ಮೋದಿ ಗುರುವಾರ ನ್ಯೂಯಾರ್ಕ್ ತಲುಪಿದ್ದಾರೆ. ಬುಧವಾರ ಐರ್ಲೆಂಡ್‌ಗೆ ತೆರಳಿದ್ದ ಮೋದಿ ಅಲ್ಲಿಂದ ನ್ಯೂಯಾರ್ಕ್‌ಗೆ ಆಗಮಿಸಿದ್ದಾರೆ.

Sundar Pichai

ಇಂದು ನ್ಯೂಯಾರ್ಕ್‍ನಲ್ಲಿ ನಡೆಯುವ ಸುಸ್ಥಿರ ಅಭಿವೃದ್ಧಿ ಶೃಂಗಸಭೆಯಲ್ಲಿ ಮೋದಿ ಭಾಷಣ ಮಾಡಲಿದ್ದಾರೆ. ಜೊತೆಗೆ ಶೃಂಗಸಭೆಯ ಶಾಂತಿಪಾಲನಾ ಸಭೆಯಲ್ಲೂ ಪ್ರಧಾನಿ ಮಾತನಾಡಲಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಜೊತೆ ಮೋದಿ ಉಭಯಕುಶಲೋಪರಿ ಚರ್ಚೆ ನಡೆಸಲಿದ್ದಾರೆ. [ಐರ್ಲೆಂಡ್‌ನಲ್ಲಿ ಮೋದಿ ಭಾಷಣದ ಹೈಲೈಟ್ಸ್]

narendra modi

ಸೆಪ್ಟೆಂಬರ್ 26 ಹಾಗೂ 27ರಂದು ನರೇಂದ್ರ ಮೋದಿ ಸಿಲಿಕಾನ್ ವ್ಯಾಲಿಗೆ ಭೇಟಿ ನೀಡಲಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್‍ಬುಕ್‍ ಪ್ರಧಾನ ಕಚೇರಿಗೆ ಭೇಟಿ, ಪ್ರಶ್ನೋತ್ತರ ಕಾರ್ಯಕ್ರಮಗಳು, ಅನಿವಾಸಿ ಭಾರತೀಯರನ್ನುದ್ದೇಶಿಸಿ ಭಾಷಣ ಹೀಗೆ ಹಲವಾರು ಕಾರ್ಯಕ್ರಮಗಳಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ.

English summary
Prime Minister of India Narendra Modi arrived in New York early on Thursday on a five-day US visit. This is the second visit of the Modi to US.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X