ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಘಾ ಗಡಿಯಲ್ಲಿ ಉಗ್ರರ ದಾಳಿ, ಮೋದಿ ಖಂಡನೆ

By Mahesh
|
Google Oneindia Kannada News

ಇಸ್ಲಾಮಾಬಾದ್/ ನವದೆಹಲಿ, ನ.3: ಪಾಕಿಸ್ತಾನದ ಗಡಿಭಾಗ್ದ ವಾಘಾದ ಸಮೀಪ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಿಂದ ಆಘಾತವಾಗಿದೆ. ಗಡಿಭಾಗದಲ್ಲಿ ಇಂಥ ದುಷ್ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ, ಉಗ್ರರ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ವಾಘಾ ಗಡಿಯ ಅರ್ಧ ಕಿ.ಮೀ ದೂರದಲ್ಲಿ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಪಾಕಿಸ್ತಾನದ ರೇಂಜರ್ಸ್ ಸೇರಿದಂತೆ ಸುಮಾರು 55 ಮಂದಿ ಮೃತಪಟ್ಟಿದ್ದು, 200 ಮಂದಿಗೆ ಗಂಭೀರ ಗಾಯಗಳಾಗಿವೆ. ಮೃತಪಟ್ಟವರಲ್ಲಿ 11 ಮಂದಿ ಮಹಿಳೆಯರು, ಮೂವರು ಭದ್ರತಾ ಸಿಬ್ಬಂದಿ ಸೇರಿದ್ದಾರೆ.

PM Modi condemns terror attack in Pakistan near Wagah border

ವಾಘಾ ಗಡಿಯಲ್ಲಿ ಧ್ವಜ ಅವರೋಹಣ ಸಂದರ್ಭದಲ್ಲೇ ಬಾಂಬ್ ದಾಳಿ ನಡೆದಿದೆ.ರೇಂಜರ್ಸ್ ಧ್ವಜ ಅವರೋಹಣ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಅನೇಕ ಜನ ನಿರ್ಗಮನ ಗೇಟ್ ಬಳಿ ಇದ್ದರು ಈ ಸಂದರ್ಭದಲ್ಲಿ ಆತ್ಮಾಹುತಿ ಬಾಂಬ್ ಸಿಡಿದಿದೆ. ವಾಘಾ ಗಡಿಯ ಪಾರ್ಕಿಂಗ್ ಸ್ಥಳದಲ್ಲಿ ಸ್ಫೋಟ ಸಂಭವಿಸಿದೆ. ಮೊದಲಿಗೆ ಇದು ಸಿಲಿಂಡರ್ ಸ್ಫೋಟವೆಂದು ಭಾವಿಸಲಾಗಿತ್ತು. ನಂತತ ಆತ್ಮಹತ್ಯಾ ಬಾಂಬ್ ದಾಳಿ ಎಂದು ಖಾತ್ರಿಯಾಯಿತು ಎಂದು ಪಂಜಾಬ್ ಪೊಲೀಸ್ ಐಜಿ ಮುಷ್ತಾಕ್ ಸುರೇಖ ಪಿಟಿಐಗೆ ತಿಳಿಸಿದ್ದಾರೆ.

ಉಗ್ರರ ಕೃತ್ಯದಿಂದ ಗಡಿ ಪ್ರದೇಶದ ಅಂಗಡಿ-ಮುಂಗಟ್ಟುಗಳೂ ಧ್ವಂಸವಾಗಿವೆ. ಅಲ್‌ಖೈದಾ ಬೆಂಬಲಿತ ಜನಾದುಲ್ಲಾ ಉಗ್ರ ಸಂಘಟನೆ ಈ ಸ್ಫೋಟದ ಹೊಣೆ ಹೊತ್ತಿದೆ. ಘಟನೆಯನ್ನು ಖಂಡಿಸಿರುವ ಪ್ರಧಾನಿ ನವಾಜ್ ಷರೀಫ್ ಅವರು ಕೂಡಲೇ ಸಂಬಂಧ ವರದಿ ನೀಡುವಂತೆ ಆದೇಶಿಸಿದ್ದಾರೆ. ಲಾಹೋರ್ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಖರ್ಕಿ ಆಸ್ಪತ್ರೆ, ಶಾಲಿಮರ್ ಆಸ್ಪತ್ರೆಗಳಲ್ಲಿ ಶವಗಳನ್ನು ಇರಿಸಲಾಗಿದೆ. 15 ದಿನಗಳ ಹಿಂದೆ ದುಷ್ಕೃತ್ಯದ ಬಗ್ಗೆ ಸುಳಿವು ಸಿಕ್ಕಿತ್ತು, ಹೀಗಾಗಿ ಗಡಿಭಾಗದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು ಎಂದು ತಿಳಿದು ಬಂದಿದೆ.

ಆತ್ಮಾಹುತಿ ಬಾಂಬ್ ದಾಳಿಗೊಳಗಾಗಿ ಸಾವನ್ನಪ್ಪಿದ ಉಗ್ರನನ್ನು 20 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದ್ದು ತನ್ನ ಜಾಕೆಟ್ ನಲ್ಲಿ ಬಾಂಬ್ ಇರಿಸಿಕೊಂಡಿದ್ದ ಎಂದು ತಿಳಿದು ಬಂದಿದೆ. ಕಳೆದ ವರ್ಷ ಪೇಷಾವರದ ಚರ್ಚ್ ನಲ್ಲಿ 78 ಕ್ರಿಶ್ಚಿಯನ್ನರನ್ನು ಬಲಿ ತೆಗೆದುಕೊಂಡ ಜಾನಾದುಲ್ಲಾ ಸಂಘಟನೆಯೇ ಈ ಕೃತ್ಯವನ್ನು ಎಸಗಿದೆ ಎಂದು ಇತರೆ ಉಗ್ರ ಸಂಘಟನೆಗಳು ಘೋಷಿಸಿವೆ. ಭಾರತದ ವಾಘಾ ಗಡಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಸದ್ಯಕ್ಕೆ ಧ್ವಜ ಅವರೋಹಣ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.(ಪಿಟಿಐ)

English summary
In a suicide attack in the Pakistani side of the Wagah border, 55 people have been reported to be dead and over hundreds injured, minutes after the flag lowering ceremony on Sunday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X