ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪನಾಮ ಪೇಪರ್ಸ್: ಪಾಕ್ ಪ್ರಧಾನಿ ರಾಜೀನಾಮೆಗೆ 7 ದಿನಗಳ ಗಡುವು

ಸುಪ್ರೀಂ ಕೋರ್ಟ್ ಮತ್ತು ಲಾಹೋರ್ ಹೈಕೋರ್ಟ್ ಬಾರ್ ಅಸೋಸಿಯೇಷನ್ ಸದಸ್ಯರು 7 ದಿನಗಳ ಒಳಗೆ ನವಾಜ್ ಶರೀಫ್ ರಾಜೀನಾಮೆ ನೀಡದಿದ್ದಲ್ಲಿ ದೇಶಾದ್ಯಂತ ಅವರ ವಿರುದ್ಧ ಆಂದೋಲನ ಆರಂಭಿಸುವುದಾಗಿ ಬೆದರಿಕೆ ಹಾಕಿದ್ದಾರೆ

By ವಿಕಾಸ್ ನಂಜಪ್ಪ
|
Google Oneindia Kannada News

ಇಸ್ಲಮಾಬಾದ್, ಮೇ 21: ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಗೆ ರಾಜೀನಾಮೆ ನೀಡಲು 7 ದಿನ ಕಾಲಾವಕಾಶ ನೀಡಲಾಗಿದೆ. ಸುಪ್ರೀಂ ಕೋರ್ಟಿನ ಬಾರ್ ಅಸೋಸಿಯೇಷನ್ ಮತ್ತು ಲಾಹೋರ್ ಹೈ ಕೋರ್ಟ್ ಬಾರ್ ಅಸೋಸಿಯೇಷನ್ ಸದಸ್ಯರು 7 ದಿನಗಳ ಒಳಗೆ ನವಾಜ್ ಶರೀಫ್ ರಾಜೀನಾಮೆ ನೀಡದೇ ಇದ್ದಲ್ಲಿ ದೇಶಾದ್ಯಂತ ಪ್ರಧಾನ ಮಂತ್ರಿ ವಿರುದ್ಧ ಆಂದೋಲನ ಆರಂಭಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಶರೀಫ್ ಗೆ ಉರುಳಾಗುತ್ತಾ ಪನಾಮ ಪೇಪರ್ಸ್

ಎರಡೂ ಬಾರ್ ಅಸೋಸಿಯೇಷನ್ ಗಳು ಜಂಟಿ ಹೇಳಿಕೆ ನೀಡಿದ್ದು ಪನಾಮಾ ಪೇಪರ್ಸ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ತೀರ್ಪಿನ ನಂತರ ನವಾಜ್ ಶರೀಫ್ ಹುದ್ದೆಯಲ್ಲಿ ಮುಂದುವರಿಯಬಾರದು. ಅವರು 7 ದಿನಗಳ ಒಳಗೆ ರಾಜೀನಾಮೆ ನೀಡಬೇಕು ಎಂದು ಹೇಳಿದ್ದಾರೆ.

Panama papers: Nawaz Sharif given 7 days to resign

ಪಾಕಿಸ್ತಾನ ವಕೀಲ ಪ್ರತಿನಿಧಿಗಳ ಸಮಾವೇಶ ಮೇ 19ರಂದು ನಡೆದಿತ್ತು. ಇಲ್ಲಿ ಪಾಕಿಸ್ತಾನದ ಆಡಳಿತರೂಢ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಪಕ್ಷದ ಬೆಂಬಲಿತ ವಕೀಲರ ಜತೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ವಕೀಲರು ವಾಗ್ವಾದಕ್ಕೆ ಇಳಿದಿದ್ದರು. ಇದಾದ ಬೆನ್ನಿಗೆ ಬಾರ್ ಅಸೋಸಿಯೇಷನ್ ಕಡೆಯಿಂದ ಈ ಬೆದರಿಕೆ ಹೊರ ಬಿದ್ದಿದೆ.

ಲಾಹೋರ್ ಹೈಕೋರ್ಟಿನ ಲೈಬ್ರರಿಯಲ್ಲಿ ಪಿಎಂಎಲ್-ಎನ್ ಪಕ್ಷದ ಕಾರ್ಯಕರ್ತರು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ರಶೀದ್ ರಿಜ್ವಿಯನ್ನುಕೂಡಿ ಹಾಕಿದ್ದರು. ಇದಾದ ಬೆನ್ನಿಗೆ ಬಾರ್ ಅಸೋಸಿಯೇಷನ್ ಸದಸ್ಯರೇ ಬಾಗಿಲಿನ ಬೀಗ ಒಡೆದು ರಶೀದ್ ರಿಜ್ವಿಯನ್ನು ಬಿಡುಗಡೆ ಮಾಡಿದ್ದರು..

ಪ್ರಕರಣದ ಅಂತಿಮ ವರದಿ ಬರುವವರೆಗೆ ನವಾಜ್ ಶರೀಫ್ ರಾಜೀನಾಮೆ ನೀಡಬೇಕು. ಒಂದೊಮ್ಮೆ ಮೇ 27ರ ಮೊದಲು ರಾಜೀನಾಮೆ ನೀಡದಿದ್ದಲ್ಲಿ ದೇಶಾದ್ಯಂತ ಅವರ ವಿರುದ್ಧ ಆಂದೋಲನ ಆರಂಭಿಸುವುದಾಗಿ ವಕೀಲರು ಎಚ್ಚರಿಕೆ ನೀಡಿದ್ದಾರೆ.

ಇನ್ನು ಈ ಕುರಿತು ಹೇಳಿಕೆ ನೀಡಿರುವ 'ಪಿಎಂಎಲ್-ಎನ್' ಪರ ವಕೀಲರು ಪನಾಮಾ ಪೇಪರ್ಸ್ ಪ್ರಕರಣ ಇನ್ನೂ ನ್ಯಾಯಾಲಯದ ಮುಂದಿದೆ. ಈ ಸಂದರ್ಭದಲ್ಲಿ ಪ್ರಧಾನಿ ರಾಜೀನಾಮೆ ಕೇಳುವುದು ತರವಲ್ಲ ಎಂದು ಹೇಳಿದೆ.

English summary
Pakistan Prime Minister, Nawaz Sharif has been given 7 days to resign. The Supreme Court Bar Association and the Lahore High Court Bar Association have threatened to launch a countrywide movement if Prime Minister Nawaz Sharif doesn't resign in seven days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X