ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛಿ...ನೇರ ಪ್ರಸಾರದಲ್ಲಿ ಪಾಕ್ ಮುಖಂಡ ಆಡಿದ ಮಾತೇನು?

By Madhusoodhan
|
Google Oneindia Kannada News

ಲಾಹೋರ್, ಜೂನ್, 14: "ನಿನ್ನ ಬಟ್ಟೆ ಬಿಚ್ಚುತ್ತೇನೆ, ನಿನ್ನನ್ನು ಮಧ್ಯ ದಾರಿಯಲ್ಲಿ ರೇಪ್ ಮಾಡುತ್ತೇನೆ" ಇದು ಸೆನ್ಸಾರ್ ಮಂಡಳಿ ಕತ್ತರಿಸಿದ ಹಾಕಿದ ಯಾವುದೋ ಚಿತ್ರದ ದೃಶ್ಯಗಳಲ್ಲಿನ ಸಂಭಾಷಣೆಯಲ್ಲ. ಇದು ಪಾಕಿಸ್ತಾನದ ಟಿವಿಯೊಂದರ ನೇರಪ್ರಸಾರದ ಕಾರ್ಯಕ್ರಮದ ವೇಳೆ ಕಿವಿಗಪ್ಪಳಿಸಿದ ಶಬ್ದಗಳು!

ಪಾಕಿಸ್ತಾನದ ಟಿವಿ ಶೋ ಒಂದರಲ್ಲಿ ನಡೆದ ಘಟನೆ ಇಡೀ ಪ್ರಪಂಚವನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಜೂನ್ 10 ರಂದು ಲೈವ್ ಪ್ರೋಗ್ರಾಮ್ ನಲ್ಲಿ ನಡೆದ ಘಟನೆ ಪಾಕಿಸ್ತಾನದ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿದೆ.[ಸಚಿನ್ vs ಲತಾ ವಿಡಿಯೋ ವಿವಾದ, ತನ್ಮಯ್ ಗೆ ಪ್ರಾಣಭೀತಿ]

pakistan

ಪಾಕಿಸ್ತಾನದ ರಾಜಕೀಯ ಪಕ್ಷವೊಂದರ ಮುಖಂಡ ಹಫೀಜ್ ಹಮ್ ದುಲ್ಲಾ ಮತ್ತು ಮಾನವ ಹಕ್ಕು ಹೋರಾಟಗಾರ್ತಿ ಮಾರ್ವಿ ಸಿಮ್ರದ್ ಅವರನ್ನು ನಿಂದಿಸಿರುವ ಪರಿ ಅಸಹ್ಯ ಹುಟ್ಟುಹಾಕುತ್ತದೆ. ಪಾಕಿಸ್ತಾನದ ಜಮಾತ್-ಇ-ಉಲೇಮಾ-ಇ-ಇಸ್ಲಾಂ ಫೌಜ್ ನ ಮುಖಂಡ ಹಫೀಜ್ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ನಾಲಗೆ ಹರಿಬಿಟ್ಟಿದ್ದಾರೆ.

ಕಾರ್ಯಕ್ರಮದ ವಿಡಿಯೋ ತುಣುಕು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಸಿಮ್ರದ್ ಈ ಘೋರ ಅನುಭವನ್ನು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ. ಅಲ್ಲದೇ ಹಪೀಜ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.[ಮೂರು ಬಿಟ್ಟು ಮಾತಾಡಿದ್ದಕ್ಕೆ ಕರಣ್, ಅರ್ಜುನ್ ಮೇಲೆ ಕೇಸ್]

ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನದ ಖಾಸಗಿ ವಾಹಿನಿಯೊಂದರಲ್ಲಿ ಚರ್ಚೆ ನಡೆಯುತ್ತಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳೇ ಈ ಮರ್ಯಾದಾ ಹತ್ಯೆಗೆ ಬಲಿಯಾಗುತ್ತಿದ್ದು ಆಡಳಿತ ಯಾಕೆ ಸುಮ್ಮನೆ ಕುಳಿತುಕೊಂಡಿದೆ ಎಂಬ ವಿಚಾರ ಚರ್ಚೆಯಲ್ಲಿತ್ತು. 1962ರಲ್ಲಿ ಆರಂಭವಾದ ಕೌನ್ಸಿಲ್ ಆಫ್ ಇಸ್ಲಾಮಿಕ್ ಐಡಿಯಾಲಜಿ ಯಾಕೆ ಸುಮ್ಮನಿದೆ ಎಂಬ ಪ್ರಶ್ನೆಗಳು ಕೇಳಿ ಬಂದಿದ್ದವು.

ಚರ್ಚೆ ತಾರಕಕ್ಕೆ ಹೋದಾಗ ಕುರ್ಚಿಯಿಂದ ಮೇಲೆದ್ದ ಹಫೀಜ್ ಸಿರ್ಮೆದ್ ಅವರ ಮೇಲೆ ಕೂಗಾಡಲು ಆರಂಭ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದು ನೇರ ಪ್ರಸಾರದ ಕಾರ್ಯಕ್ರಮದಲ್ಲೇ ನಡೆದು ಹೋಗಿದೆ. ಇಬ್ಬರ ನಡುವೆ ವಾಗ್ಯುದ್ಧ ಆರಂಭವಾಗಿದೆ. ನಿರೂಪಕಿ ಬ್ಯಾರಿಸ್ಟರ್ ಮಸ್ ರೂರ್ ಪರಿಸ್ಥಿತಿಯನ್ನು ನಿಯಂತ್ರಣ ಮಾಡಲು ಯತ್ನಿಸಿದರೂ ಸಾಧ್ಯವಾಗಿಲ್ಲ.

ನಿನ್ನನ್ನು ಮಧ್ಯ ದಾರಿಯಲ್ಲಿ ರೇಪ್ ಮಾಡುತ್ತೇನೆ ಎಂಬ ಹಂತದ ವರೆಗೆ ಮಾತು ಮುಂದುವರಿದಿದೆ. ಮುಖಂಡ ಹಫೀಜ್ ಹಮ್ ದುಲ್ಲಾ ಜನರಿಂದ ಸರಿಯಾದ ‍ಛೀಮಾರಿ ಹಾಕಿಸಿಕೊಂಡು ಮನೆ ಸೇರಿದ್ದಾರೆ.

English summary
During a TV talk show Pakistani Senator Hafiz Hamdullah verbally abused Marvi Sirmed, an analyst on the program and a human rights activist, even threatening the woman with rape. Hamdullah, a representative of the religious political party Jamiat-i-Ulema-i-Islam Fazl (JUI-F), has spoken abusively on live television to political opponents before.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X