ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಲಕರ ಮೇಲಿನ ಸೇಡಿಗೆ ಮಕ್ಕಳನ್ನು ಕೊಂದರಂತೆ...

By Kiran B Hegde
|
Google Oneindia Kannada News

ಇಸ್ಲಾಮಾಬಾದ್, ಡಿ. 17: ಪಾಕಿಸ್ತಾನದ ಪೇಶಾವರದಲ್ಲಿರುವ ಸೈನಿಕ ಶಾಲೆಯ ಮೇಲೆ ದಾಳಿ ನಡೆಸಿದ ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ್ ಉಗ್ರರು ಸುಮಾರು 130ಕ್ಕೂ ಅಧಿಕ ಜನರ ಜೀವ ತೆಗೆದಿದ್ದಾರೆ. ಆದರೆ, ಅವರು ಎಲ್ಲರನ್ನೂ ಬಿಟ್ಟು ಮುಗ್ಧ ಮಕ್ಕಳ ಮೇಲೆ ದಾಳಿ ನಡೆಸಿದ್ದು ಏಕೆ..?

ಇದಕ್ಕೆ ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ್ ಕೊಟ್ಟಿರುವ ಉತ್ತರವೆಂದರೆ "ಈ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಪಾಲಕರು ಅಮೆರಿಕಕ್ಕೆ ಸಹಾಯ ಮಾಡಿದ್ದಾರೆ" ಎಂಬುದು. [ಪಾಕಿಸ್ತಾನದಲ್ಲಿ ನೂರಾರು ಮಕ್ಕಳ ಬಲಿ]

sch

"ಅಲ್ಲದೆ, ಈ ಮಕ್ಕಳ ಪಾಲಕರು ದಕ್ಷಿಣ ಹಾಗೂ ಉತ್ತರ ವಜಿರಿಸ್ತಾನದಲ್ಲಿ ಪಾಕಿಸ್ತಾನಿ ಸೈನಿಕರು ನಮ್ಮ ಕುಟುಂಬಗಳ ಮೇಲೂ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಮಕ್ಕಳು ಸಾವನ್ನಪ್ಪಿದ್ದಾರೆ. ಅದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗುತ್ತಿದೆ" ಎಂದು ತಾಲಿಬಾನ್ ಪಾಕಿಸ್ತಾನ್ ವಕ್ತಾರ ಹೇಳಿದ್ದಾನೆ. [ಮೆಹದಿ ಪೊಲೀಸರ ಕಣ್ಣು ತಪ್ಪಿಸಿದ್ದು ಹೇಗೆ]

"ವಜಿರಿಸ್ತಾನದಲ್ಲಿ ತಾಲಿಬಾನ್ ವಿರುದ್ಧ ಸೈನಿಕ ಕಾರ್ಯಾಚರಣೆ ನಿಲ್ಲಿಸದಿದ್ದಲ್ಲಿ ಪಾಕಿಸ್ತಾನದಾದ್ಯಂತ, ವಿವಿಧ ಜನಾಂಗಗಳು ವಾಸಿಸುವ ಸ್ಥಳಗಳಲ್ಲಿ ದಾಳಿ ಮುಂದುವರಿಸಲಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ. [ಮೆಹದಿ ಮೇಲೆ ಪ್ರಕರಣಗಳ ತೂಗುಗತ್ತಿ]

ನೂರಾರು ಮಕ್ಕಳ ಸಾವಿನಿಂದ ಕಂಗೆಟ್ಟಿರುವ ಪಾಕಿಸ್ತಾನ ಈಗ ದೇಶಾದ್ಯಂತ ದಾಳಿ ನಡೆಸುವುದಾಗಿ ತಾಲಿಬಾನ್ ಪಾಕಿಸ್ತಾನ್ ಎಚ್ಚರಿಕೆ ಕೊಟ್ಟಿರುವುದರಿಂದ ಮತ್ತಷ್ಟು ಆತಂಕಕ್ಕೊಳಗಾಗಿದೆ.

English summary
Tehreek-e-Taliban Pakistan says attack on Peshavar school has been carried to take revenge on Pakistan soldiers. They warned that a new series of attacks will be started all over Pakistan if the Pakistani army continues its military movements in the tribal areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X