ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಲಾಡೆನ್ ಆಯಿತು, ಈಗ ಅಲ್ ಜವಾಹಿರಿ ಪಾಕಿಸ್ತಾನದ ಕರಾಚಿಯಲ್ಲಿದ್ದಾನೆ'

ಒಸಾಮ ಬಿನ್ ಲಾಡೆನ್ ನನ್ನು ಅಮೆರಿಕ ಬೇಟೆ ಆಡಿದ ನಂತರ ಅಲ್ ಕೈದಾದ ಮುಖ್ಯಸ್ಥನಾಗಿರುವ ಅಲ್ ಜವಾಹಿರಿ ಪಾಕಿಸ್ತಾನದ ಕರಾಚಿಯಲ್ಲಿ ಐಎಸ್ ಐನ ರಕ್ಷಣೆಯಲ್ಲಿದ್ದಾನೆ ಎಂದು ಅಮೆರಿಕದ ಮಾಧ್ಯಮವೊಂದು ವರದಿ ಮಾಡಿದೆ

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 22: ಜಗತ್ತಿನ ಮೋಸ್ಟ್ ವಾಟೆಂಡ್ ಭಯೋತ್ಪಾದಕರ ಪೈಕಿ ಒಬ್ಬನಾದ ಈಜಿಪ್ಟ್ ಮೂಲದ ಅಲ್ ಕೈದಾ ಮುಖಂಡ ಅಲ್-ಜವಾಹಿರಿ ಪಾಕಿಸ್ತಾನದ ಕರಾಚಿಯಲ್ಲಿ ಐಎಸ್ ಐ ರಕ್ಷಣೆಯಲ್ಲಿ ಅಡಗಿಕೊಂಡಿದ್ದಾನೆ ಎಂದು ಅಮೆರಿಕದ ಮಾಧ್ಯಮವೊಂದು ವರದಿ ಮಾಡಿದೆ. ಅಫ್ಘಾನಿಸ್ತಾನದಿಂದ ಅಲ್ ಕೈದಾ ಸಂಘಟನೆಯನ್ನು ಎಬ್ಬಿಸಿದ ನಂತರ ಐಎಸ್ ಐ ಅಲ್ ಜವಾಹಿರಿಯನ್ನು ರಕ್ಷಿಸುತ್ತಿದೆ ಎಂದು ನ್ಯೂಸ್ ವೀಕ್ ವರದಿ ಮಾಡಿದೆ.

ಹಲವು ಮೂಲಗಳು ಈ ಸಂಗತಿಯನ್ನು ಖಚಿತಪಡಿಸಿವೆ ಎಂದಿರುವ ವರದಿ, ಜವಾಹಿರಿ ಕರಾಚಿಯಲ್ಲಿ ಅಡಗಿಕೊಂಡಿರುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಹಲವು ವರ್ಷಗಳ ನಂತರ ಜವಾಹಿರಿ ಇರುವ ಸ್ಥಳದ ಬಗ್ಗೆ ಮಾಧ್ಯಮದ ವರದಿಯೊಂದು ಪ್ರಕಟವಾಗಿದೆ. ಒಸಾಮ ಬಿನ್ ಲಾಡೆನ್ ಬೇಟೆ ಆಡಿದ ನಂತರ ಅಲ್ ಕೈದಾ ಸಂಘಟನೆಯ ಜವಾಬ್ದಾರಿಯನ್ನು ಜವಾಹಿರಿ ವಹಿಸಿದ್ದಾನೆ.[ISIS ಅಡಗುದಾಣಗಳ ಮೇಲೆ ಶಕ್ತಿಶಾಲಿ ಬಾಂಬ್ ಹಾಕಿದ ಅಮೆರಿಕ]

Al jawahiri

ಆತನಿರುವ ಜಾಗದ ಬಗ್ಗೆ ಬಲವಾದ ಸಾಕ್ಷ್ಯಗಳು ಯಾವುದೂ ಇಲ್ಲ ಎಂದು ಸಿಐಎ ಅಧಿಕಾರಿ ಬ್ರೂಸ್ ರಿಡೆಲ್ ತಿಳಿಸಿದ್ದಾರೆ. ಈ ಸ್ಥಳ ಅಡಗಿಕೊಳ್ಳುವುದಕ್ಕೆ ಪ್ರಶಸ್ತ ಜಾಗ. ಏಕೆಂದರೆ ಅಮೆರಿಕದವರು ಅಲ್ಲಿಗೆ ಹೋಗಲಾರರು ಎಂಬುದು ಭಯೋತ್ಪಾದಕರ ನಂಬಿಕೆ. ಬಿನ್ ಲಾಡೆನ್ ವಿರುದ್ಧ ನಡೆಸಿದಂಥ ಕಾರ್ಯಾಚರಣೆ ಕರಾಚಿಯಲ್ಲಿ ನಡೆಸುವುದು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

Laden

ಕಳೆದ ವರ್ಷ ಜನವರಿಯಲ್ಲಿ ಅಮೆರಿಕ ನಡೆಸಿದ್ದ ಡ್ರೋಣ್ ದಾಳಿಯಲ್ಲಿ ಜವಾಹಿರಿ ತಪ್ಪಿಸಿಕೊಂಡಿದ್ದ. ಆತ ಉಳಿದುಕೊಂಡಿದ್ದ ಸ್ಥಳಕ್ಕೆ ತುಂಬ ಹತ್ತಿರದಲ್ಲಿ ಡ್ರೋಣ್ ದಾಳಿಯಾಗಿತ್ತು. ಆತ ಉಳಿದುಕೊಂಡಿದ್ದ ಕೋಣೆಗೆ ಹೊಂದಿಕೊಂಡಿದ್ದ ಗೋಡೆ ಧ್ವಂಸವಾಗಿತ್ತು. ಅದರ ಅವಶೇಷಗಳು ಆತನ ಮೇಕೆ ಬಿದ್ದಿದ್ದವು. ಆದರೆ ಜವಾಹಿರಿ ಬದುಕುಳಿದಿದ್ದ ಎಂಬ ಮಾಹಿತಿ ಇದೆ.

isi

ಈ ರೀತಿಯ ಹಲವು ಡ್ರೋಣ್ ದಾಳಿಯಲ್ಲಿ ಅರವತ್ತಾರು ವರ್ಷದ ಜವಾಹಿರಿ ಬದುಕುಳಿದಿದ್ದಾನೆ ಎಂಬ ಅಂಶ ವರದಿಯಲ್ಲಿದೆ. ಅಫ್ಘನ್ ತಾಲಿಬಾನ್ ನಿಂದ 'ಬ್ಲ್ಯಾಕ್ ಲೆಗ್' ಎಂದು ಕರೆಸಿಕೊಳ್ಳುವ ಪಾಕಿಸ್ತಾನದ ಐಎಸ್ ಐನ ಸೂಚನೆಯಂತೆ ಜವಾಹಿರಿ ಕರಾಚಿಗೆ ಸ್ಥಳಾಂತರಗೊಂಡ ಎಂದು ಅಲ್ ಕೈದಾದ ನಾಯಕನೊಬ್ಬ ತಿಳಿಸಿದ್ದಾನೆ.[ದಾವೂದ್ ಅಂತ್ಯಕ್ಕೆ ಭಾರತ, ಯುಎಇ ಮಾಸ್ಟರ್ ಪ್ಲಾನ್]

Pakistan

ಕೀನ್ಯಾದ ಅಮೆರಿಕ ರಾಯಭಾರ ಕಚೇರಿ ಮೇಲೆ 1998ರಲ್ಲಿ ಬಾಂಬ್ ದಾಳಿ ನಡೆಸಿದ್ದರ ಸೂತ್ರಧಾರಿ ಐಫ್ ಅಲ್-ಅದೆಲ್ ಈಗ ಜವಾಹಿರಿ ಜತೆಗೆ ಇದ್ದಾನೆ ಎಂದು ವರದಿಯಲ್ಲಿದೆ.

English summary
Egyptian-born Al-Qaeda leader Ayman al-Zawahiri, one of the world's most wanted terrorists, is most likely hiding in Karachi under the protection of Pakistan's notorious spy agency ISI, a US media report said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X