ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ಭೀತಿ : ಪಾಕಿಸ್ತಾನದ ಶಿಕ್ಷಕರಿಗೆ ಪೆನ್ ಜೊತೆ ಗನ್

By Kiran B Hegde
|
Google Oneindia Kannada News

ಪೇಶಾವರ, ಜ. 23: ಪಾಕಿಸ್ತಾನ ಎಂಬ 'ಉಗ್ರರ ಸುರಕ್ಷಿತ ಸ್ವರ್ಗ'ದ ಸ್ಥಿತಿ ನೋಡಿ ಇಡೀ ಜಗತ್ತು ನಗುತ್ತಿದೆ. 'ನೀನೇ ಸಾಕಿದಾ ಗಿಣಿ ನಿನ್ನೇ ಹಾವಾಗಿ ಕಚ್ಚಿತಲ್ಲೋ' ಎಂಬ ಮಾತು ಪಾಕಿಸ್ತಾನಕ್ಕೆ ಸರಿಯಾಗಿ ಅನ್ವಯಿಸುತ್ತದೆ. ಏಕೆ ಗೊತ್ತೇ?

ಈಚೆಗಷ್ಟೇ ಪೇಶಾವರದಲ್ಲಿ 130ಕ್ಕೂ ಹೆಚ್ಚು ಮುಗ್ಧ ಮಕ್ಕಳನ್ನು ಸಾಲು ನಿಲ್ಲಿಸಿ ಹತ್ಯೆ ನಡೆಸಿದ ಉಗ್ರರು ತಮ್ಮ ನೈಜ ಮುಖವನ್ನು ಸಾಕ್ಷಿ ಸಮೇತ ಬಯಲು ಮಾಡಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಪಾಕಿಸ್ತಾನದ ಸ್ಥಳೀಯ ಸರ್ಕಾರ ತಾನೇ ಹೆಣೆದಿರುವ ಉಗ್ರರು ಎಂಬ ಬಲೆಯಿಂದ ಹೊರಬರಲು ಅವರ ನಿರಂತರ ದಾಳಿ ನಡೆಸುತ್ತಿದೆ. ಇಷ್ಟೇ ಅಲ್ಲ, ತನ್ನ ದೇಶದ ಭವಿಷ್ಯವಾದ ಮಕ್ಕಳ ರಕ್ಷಣೆಗಾಗಿ 'ಶಿಕ್ಷಕರಿಗೆ ಪೆನ್ನಿನ ಜೊತೆ ಗನ್' ಕೂಡ ನೀಡಲು ಮುಂದಾಗಿದೆ! [ಮತ್ತೆ ಮಕ್ಕಳನ್ನು ಕೊಲ್ತಾರಂತೆ ಉಗ್ರರು]

peshawar

ಹೌದು, ನೇರವಾಗಿ ಯುದ್ಧ ಮಾಡುವ ಎಲ್ಲ ಸಾಮರ್ಥ್ಯ ಕಳೆದುಕೊಂಡಿರುವ ಉಗ್ರರು ಈಗ ಅಸಹಾಯಕ ಮಕ್ಕಳನ್ನು ಗುರಿಯಾಗಿಸಿಕೊಂಡಿರುವ ಕಾರಣ ಶಾಲೆ ಶಿಕ್ಷಕರಿಗೆ ಗನ್ ಹೊಂದಲು ಅನುಮತಿ ನೀಡಲಾಗುತ್ತಿದೆ. ಒಂದು ವೇಳೆ ಉಗ್ರರು ದಾಳಿ ನಡೆಸಿದರೆ ಪೊಲೀಸರು ಬರುವವರೆಗೂ ಮಕ್ಕಳಿಗೆ ರಕ್ಷಣೆ ನೀಡಲು ಹಾಗೂ ಉಗ್ರರ ವಿರುದ್ಧ ಹೋರಾಡಲು ಶಿಕ್ಷಕರನ್ನೂ ಅಣಿಗೊಳಿಸುತ್ತಿದೆ. [ಮಕ್ಕಳನ್ನು ಹತ್ಯೆಗೈದ ರಕ್ಕಸರು ಇವರೇ]

ಈಗಾಗಲೇ ಖೈಬರ್ ಪಖೂನ್‌ಖಾ ಪ್ರಾಂತ್ಯದ ಹಲವು ಶಾಲೆ-ಕಾಲೇಜುಗಳ ಶಿಕ್ಷಕರಿಗೆ ಶಶ್ತ್ರಾಸ್ತ್ರ ಹೊಂದಲು ಅನುಮತಿ ನೀಡಲಾಗಿದೆ. ಇನ್ನೂ ನೂರಾರು ಶಾಲೆಗಳಿಗೆ ಪರವಾನಗಿ ನೀಡುವ ನಿರೀಕ್ಷೆಯಿದೆ. [ಪಾಕಿಸ್ತಾನದಲ್ಲಿ ಉಗ್ರರ ದಾಳಿಗೆ ನೂರಾರು ಮಕ್ಕಳ ಬಲಿ]

English summary
Teachers in the Peshawar province of Pakistan will be allowed to carry guns to face terrorists and secure students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X