ಪಾಕಿಸ್ತಾನ ಭಯೋತ್ಪಾದಕ ಪ್ರಾಯೋಜಕ ದೇಶ: ಆನ್ ಲೈನ್ ಅರ್ಜಿಗೆ ಲಕ್ಷ ಸಹಿ

Posted By:
Subscribe to Oneindia Kannada

ನ್ಯೂಯಾರ್ಕ್, ಸೆಪ್ಟೆಂಬರ್ 27: ಪಾಕಿಸ್ತಾನವನ್ನು ಭಯೋತ್ಪಾದನೆ ಪ್ರಾಯೋಜಕ ದೇಶ ಎಂದು ಘೋಷಿಸಲು ವೈಟ್ ಹೌಸ್ ಗೆ ಸಲ್ಲಿಸಿದ ಆನ್ ಲೈನ್ ಅರ್ಜಿಗೆ ಸಹಿ ಹಾಕಿದವರ ಸಂಖ್ಯೆ ಒಂದು ಲಕ್ಷ ದಾಟಿದೆ. ಆ ಮೂಲಕ ಬರಾಕ್ ಒಬಾಮ ಆಡಳಿತದಿಂದ ಪ್ರತಿಕ್ರಿಯೆ ಪಡೆಯುವ ಅರ್ಹತೆ ಪಡೆದಿದೆ.

ಇದು ಆನ್ ಲೈನ್ ಮೂಲಕ ವೈಟ್ ಹೌಸ್ ಗೆ ಸಲ್ಲಿಸಿರುವ ಮೂರನೇ ಜನಪ್ರಿಯ ಅರ್ಜಿಯಾಗಿದೆ. ಒಂದು ಲಕ್ಷದ ಹತ್ತು ಸಾವಿರ ಮಂದಿ ಈ ಅರ್ಜಿಗೆ ಸಹಿ ಹಾಕಿದ್ದಾರೆ. ಇನ್ನು ಅರವತ್ತು ದಿನದೊಳಗೆ ಒಬಾಮ ಆಡಳಿತ ಯಂತ್ರದಿಂದ ಪ್ರತಿಕ್ರಿಯೆ ದೊರೆಯುವ ನಿರೀಕ್ಷೆಯಿದೆ. ಈ ಆನ್ ಲೈನ್ ಅರ್ಜಿ ಸೆ.21ರಂದು ರೂಪಿಸಲಾಯಿತು.[ಕಾಶ್ಮೀರದ ಕನಸು ಮರೆತುಬಿಡಿ: ವಿಶ್ವಸಂಸ್ಥೆಯಲ್ಲಿ ಸುಷ್ಮಾ ಖಡಕ್ ಸಂದೇಶ]

Pakistan As A Sponsor Of Terrorism: Petition Crosses 1 Lakh Signatures

ಕಾಂಗ್ರೆಸ್ ನ ಟೆಡ್ ಪೊ, ಡಾಣಾ ರೊಹ್ರಾಬಚೆರ್ 'ಪಾಕಿಸ್ತಾನ ಭಯೋತ್ಪಾದನೆ ಪ್ರಾಯೋಜಿತ ರಾಷ್ಟ್ರ' ಕಾಯ್ದೆಯನ್ನು ಜನ ಪ್ರತಿನಿಧಿಗಳ ಸಭೆಯಲ್ಲಿ ಮಂಡಿಸಿದ್ದರು. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯಿಂದ ನಿರಂತರವಾಗಿ ತೊಂದರೆ ಅನುಭವಿಸುತ್ತಿರುವ ಅಮೆರಿಕಾ, ಭಾರತ ಮತ್ತು ಇತರ ದೇಶಗಳ ಜನರಿಗೆ ಈ ಅರ್ಜಿ ಬಹಳ ಮುಖ್ಯವಾದದ್ದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.[ಸೈನಿಕರ ತ್ಯಾಗ ವ್ಯರ್ಥವಾಗಲ್ಲ, ಉರಿ ದಾಳಿ ಮರೆಯಲ್ಲ: ಮೋದಿ]

'ವಿ ದ ಪೀಪಲ್' ವೈಟ್ ಹೌಸ್ ನ ಆನ್ ಲೈನ್ ಅರ್ಜಿ ಅಮೆರಿಕಾ ರಾಷ್ಟ್ರಪತಿ ಬರಾಕ್ ಒಬಾಮ ಅವರೇ ಆರಂಭಿಸಿದ್ದು, ಅಮೆರಿಕಾ ನಾಗರಿಕರು ಯಾವುದೇ ನಿರ್ದಿಷ್ಟ ವಿಷಯದ ಬಗ್ಗೆ ಆಡಳಿತ ಯಂತ್ರದ ಗಮನ ಸೆಳೆಯಲು ಈ ರೀತಿ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಾರೆ. ಸದ್ಯಕ್ಕೆ ಈ ಅರ್ಜಿ ಮೂರನೇ ಸ್ಥಾನದಲ್ಲಿದೆ.

ಈ ರೀತಿ ಘೋಷಿಸುವುದಕ್ಕೆ ನಿರ್ದಿಷ್ಟ ಕ್ರಮ ಅನುಸರಿಸಬೇಕು. ಇದರಲ್ಲಿ ಕೆಲವು ಕಾನೂನು ಪ್ರಕ್ರಿಯೆಗಳು, ಮೌಲ್ಯಮಾಪನ ಇರುತ್ತವೆ ಎಂದು ವೈಟ್ ಹೌಸ್ ನ ಉಪ ವಕ್ತಾರ ಮಾರ್ಕ್ ಟೋನರ್ ಹೇಳಿದ್ದಾರೆ. "ಭಯೋತ್ಪಾದನೆ ವಿರುದ್ಧ ಹೋರಾಡಲು ಪಾಕಿಸ್ತಾನದ ಶಕ್ತಿ ಹೆಚ್ಚಿಸುವುದು, ಹಿಂಸಾತ್ಮಕ ಭಯೋತ್ಪಾದಕ ಕೃತ್ಯದ ವಿರುದ್ಧ ಅಭಿಯಾನಕ್ಕೆ ನೆರವಾಗುವುದಕ್ಕೆ ನಮ್ಮ ಗಮನ" ಎಂದು ಅವರು ಹೇಳಿದ್ದಾರೆ.[ಗಡಿಯಾಚೆಗಿನ ಕಾರ್ಯಾಚರಣೆ ನಡೆದಿಲ್ಲ: ಭಾರತೀಯ ಸೇನೆ]

ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ಪ್ರಗತಿ ಹಾದಿಯಲ್ಲಿದೆ. ಆದರೆ ನೆರೆಯ ದೇಶಗಳ ಮೇಲೆ ದಾಳಿ ನಡೆಸುತ್ತಿರುವ ಭಯೋತ್ಪಾದಕ ಗುಂಪುಗಳು ವಿರುದ್ಧ ಪಾಕಿಸ್ತಾನ ಕ್ರಮಕ್ಕೆ ಮುಂದಾಗಬೇಕು. ಉಗ್ರಗಾಮಿಗಳಿಗೆ ಸ್ವರ್ಗದಂತಿರುವ ಎಲ್ಲ ಜಾಗಗಳು ಹೇಳಹೆಸರಿಲ್ಲದಂತೆ ಆಗಬೇಕು ಎಂದು ಟೋನರ್ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Online White House petition asking for Pakistan to be declared as a state sponsor of terrorism has crossed 1 lakh signatures. Qualifying to get a response from the Obama administration.
Please Wait while comments are loading...