ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ ಜೈಲಲ್ಲಿ ಭಾರತದ 38 ಮೀನುಗಾರರು

By Kiran B Hegde
|
Google Oneindia Kannada News

ಬೆಂಗಳೂರು, ಜ. 23: ಭಾರತ ಹಾಗೂ ಪಾಕಿಸ್ತಾನದ ನಡುವೆ ಇರುವ ಸಮುದ್ರದಲ್ಲಿ ಗಡಿ ಉಲ್ಲಂಘಿಸಿದ ಆರೋಪದ ಮೇಲೆ ಹಲವು ಮೀನುಗಾರರು ಆಗಾಗ ಬಂಧನಕ್ಕೊಳಗಾಗುತ್ತಿದ್ದಾರೆ. ಸಮುದ್ರದಲ್ಲಿ ಗಡಿ ಎಂಬುದು ಕಣ್ಣಿಗೆ ಕಾಣಿಸದ ಕಾರಣ ಮೀನುಗಾರರ ಬಂಧನ ಎಂಬುದು ಸಾಮಾನ್ಯ ಪ್ರಕ್ರಿಯೆ ಎಂಬಂತಾಗಿದೆ.

ಮತ್ತೆ ಭಾರತದ 38 ಮೀನುಗಾರರನ್ನು ಪಾಕಿಸ್ತಾನ ಬಂಧಿಸಿ ಜೈಲಿಗಟ್ಟಿದೆ. ಅಲ್ಲದೆ, ವಿಶ್ವದಲ್ಲಿ ನಡೆಯುತ್ತಿರುವ ಇನ್ನಿತರ ಹಲವು ಸುದ್ದಿಗಳನ್ನು ಇಲ್ಲಿ ನೀಡಲಾಗಿದೆ.

ಪಾಕ್‌ನಲ್ಲಿ ಭಾರತೀಯ ಕೈದಿಗಳು

ಪಾಕ್‌ನಲ್ಲಿ ಭಾರತೀಯ ಕೈದಿಗಳು

ಪಾಕಿಸ್ತಾನದ ಕರಾಚಿಯ ಜೈಲೊಂದರಲ್ಲಿ ಬಂಧಿಯಾಗಿರುವ ಭಾರತೀಯ ಮೀನುಗಾರರು. ಅರೇಬಿಯನ್ ಸಮುದ್ರದಲ್ಲಿ ಪಾಕಿಸ್ತಾನ ಗಡಿಯೊಳಗೆ ಬಂದ ಆರೋದ ಮೇಲೆ ಭಾರತದ 38 ಮೀನುಗಾರರನ್ನು ಅಲ್ಲಿನ ಸೈನ್ಯ ಬಂಧಿಸಿದೆ.

ಪಾಕ್‌ನಲ್ಲಿ ಭಾರತೀಯ ಕೈದಿಗಳು

ಪಾಕ್‌ನಲ್ಲಿ ಭಾರತೀಯ ಕೈದಿಗಳು

ಪಾಕಿಸ್ತಾನದ ಕರಾಚಿಯ ಜೈಲೊಂದರಲ್ಲಿ ಬಂಧಿಯಾಗಿರುವ ಭಾರತೀಯ ಮೀನುಗಾರರು. ಅರೇಬಿಯನ್ ಸಮುದ್ರದಲ್ಲಿ ಪಾಕಿಸ್ತಾನ ಗಡಿಯೊಳಗೆ ಬಂದ ಆರೋದ ಮೇಲೆ ಭಾರತದ 38 ಮೀನುಗಾರರನ್ನು ಅಲ್ಲಿನ ಸೈನ್ಯ ಬಂಧಿಸಿದೆ.

ಕಿಂಗ್ ಅಬ್ದುಲ್ಲಾ ನೆನಪು

ಕಿಂಗ್ ಅಬ್ದುಲ್ಲಾ ನೆನಪು

ಗುರುವಾರ ಸಾವನ್ನಪ್ಪಿದ ಸೌದಿ ಅರೇಬಿಯಾದ ರಾಜ ಕಿಂಗ್ ಅಬ್ದುಲ್ಲಾ ಅವರು ಜಗತ್ತಿನ ವಿವಿಧ ನಾಯಕರೊಂದಿಗೆ ಇದ್ದಾಗ ತೆಗೆದಿದ್ದ ಹಳೆಯ ಭಾವಚಿತ್ರ.

ಜೈನ ದೇಗುಲದಲ್ಲಿ ಚಾರ್ಲ್ಸ್

ಜೈನ ದೇಗುಲದಲ್ಲಿ ಚಾರ್ಲ್ಸ್

ಇಂಗ್ಲೆಂಡ್‌ನ ಪೋತದಾರ ಬಾರ್‌ನಲ್ಲಿರುವ ಜೈನ ದೇಗುಲಕ್ಕೆ ಭೇಟಿ ನೀಡಿದ್ದ ರಾಜಕುಮಾರ ಚಾರ್ಲಸ್. ಅವರಿಗೆ ಅರ್ಶನಾ ಎಂಬುವರು ಮಾರ್ಗದರ್ಶನ ನೀಡಿದರು.

ಆಸ್ಟೇಲಿಯಾದಲ್ಲಿ ಫೆಡರರ್

ಆಸ್ಟೇಲಿಯಾದಲ್ಲಿ ಫೆಡರರ್

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಟೆನಿಸ್ ಚಾಂಪಿಯನ್‌ಶಿಪ್‌ನ ಮೂರನೇ ಸುತ್ತಿನ ಪಂದ್ಯವೊಂದರಲ್ಲಿ ಆಟವಾಡುತ್ತಿರುವ ವಿಶ್ವವಿಖ್ಯಾತ ಟೆನ್ನಿಸ್ ಆಟಗಾರ ರೋಜರ್ ಫೆಡರರ್.

ಸೆಲ್ಫಿ

ಸೆಲ್ಫಿ

ಮುಂಬೈನಲ್ಲಿ ಎಂಟಿವಿ ಆಂಕರ್ ರಣ್‌ವಿಜಯ್, ಬಾಕ್ಸರ್ ವಿಜೇಂದರ್ ಸಿಂಗ್, ನಟಿ ಇಶಾ ಡಿಯೋಲ್ ಹಾಗೂ ಟಿವಿ ಆಕ್ಟರ್ ಕರಣ್ ಕುಂದ್ರಾ ಅವರು ಸೆಲ್ಫಿ ಕ್ಲಿಕ್ಕಿಸಿದರು.

ಮ್ಲಾನ ವದನ

ಮ್ಲಾನ ವದನ

ಬಿಸಿಸಿಐ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಸುಪ್ರೀಂ ಕೋರ್ಟ್ ಸೂಚಿಸಿದ ಮೇಲೆ ಮ್ಲಾನವದನಗೊಂಡಿರುವ ಎನ್. ಶ್ರೀನಿವಾಸನ್ ನವದೆಹಲಿಯಲ್ಲಿ ಕಂಡುಬಂದಿದ್ದು ಹೀಗೆ.

ಸೇಂಟ್ ಜೇಮ್ಸ್ ಭಕ್ತರು

ಸೇಂಟ್ ಜೇಮ್ಸ್ ಭಕ್ತರು

ಸ್ಪೇನ್‌ನ ರಾನ್ಸಸ್‌ವ್ಯಾಲೀಸ್‌ನಲ್ಲಿ ಪಟ್ಟಣದ ಸೇಂಟ್ ಜೇಮ್ಸ್ ವೇ ರಸ್ತೆಯಲ್ಲಿ ಬೀಳುತ್ತಿರುವ ಹಿಮ ಮಳೆಯಲ್ಲಿಯೂ ಸಂಚರಿಸುತ್ತಿರುವ ಭಕ್ತರು.

ಹಿಮದ ಮಧ್ಯೆ ರೈಲು

ಹಿಮದ ಮಧ್ಯೆ ರೈಲು

ದಕ್ಷಿಣ ಕಾಶ್ಮೀರದ ರೈಲ್ವೆ ಹಳಿಗಳ ಮೇಲೆ ಬಿದ್ದಿದ್ದ ಹಿಮಗಳನ್ನು ಸ್ವಚ್ಛಗೊಳಿಸಿದ ನಂತರ ಸಾಗುತ್ತಿರುವ ರೈಲು.

ಕಾಶ್ಮೀರಿ ಮಹಿಳೆಯರು

ಕಾಶ್ಮೀರಿ ಮಹಿಳೆಯರು

ದಕ್ಷಿಣ ಕಾಶ್ಮೀರದ ಶೋಪಿಯನ್ ಜಿಲ್ಲೆಯ ಹರಿಪೋರಾ ಪ್ರಾಂತ್ಯದಲ್ಲಿ ಸುರಿಯುತ್ತಿರುವ ಹಿಮದ ಮಧ್ಯೆ ಬಕೆಟ್ ಹೊತ್ತು ಸಾಗುತ್ತಿರುವ ಮಹಿಳೆಯರು.

English summary
A Pakistani police officer said the country’s Maritime Security Agency has arrested 38 Indian fishermen for violating its waters in the Arabian Sea.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X