ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತನ್ನ ಮಗನನ್ನು ಕೊಂದ 10 ಭಾರತೀಯರನ್ನು ಕ್ಷಮಿಸಿದ ಪಾಕಿಸ್ತಾನಿ

2015ರಲ್ಲಿ ನಡೆದಿದ್ದ ದೊಂಬಿಯೊಂದರಲ್ಲಿ ಇವರು ಫರ್ಹಾನ್ ಎಂಬ ಯುವಕನನ್ನು ಹತ್ಯೆಗೈದಿದ್ದ ಆರೋಪ 10 ಭಾರತೀಯರ ಮೇಲಿದೆ. ಬ್ಲಡ್ ಮನಿ ಹಾಗೂ ಸಂಧಾನಗಳಿಂದಾಗಿ ಭಾರತೀಯರ ಶಿಕ್ಷೆಯ ಭೀತಿ ದೂರಾಗಿದೆ ಎಂದು ಹೇಳಲಾಗಿದೆ.

|
Google Oneindia Kannada News

ಅಬುಧಾಬಿ, ಮಾರ್ಚ್ 27: 2015ರಲ್ಲಿ ಯುಎಇಯಲ್ಲಿ ನಡೆದಿದ್ದ ಗಲಭೆಯೊಂದರಲ್ಲಿ ತನ್ನ ಮಗನನ್ನು ಕೊಂದಿದ್ದ 10 ಭಾರತೀಯರನ್ನು ಮೃತ ವ್ಯಕ್ತಿಯ ತಂದೆ ಹಾಗೂ ಆತನ ಕುಟುಂಬ ಕ್ಷಮಿಸಿದೆ ಎಂದು ಗಲ್ಫ್ ನ್ಯೂಸ್ ಪ್ರಕಟಿಸಿದೆ.

ಗಲಭೆಯಲ್ಲಿ ಮೃತ ಫರ್ಹಾನ್ ತಂದೆ ಮೊಹಮ್ಮದ್ ಫರ್ಹಾನ್ ಹಾಗೂ ಅವರ ಕುಟುಂಬ ಸದಸ್ಯರು ಇಲ್ಲಿ ಅಲ್ ಏನ್ (ನ್ಯಾಯಾಲಯ) ನಲ್ಲಿ ಆರೋಪಿಗಳನ್ನು ಕ್ಷಮಿಸಿರುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಭಾರತೀಯರಿಗೆ ಈ ಪ್ರಕರಣದಿಂದ ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

Pak man pardons 10 Indians who murdered his son in UAE

ಪಂಜಾಬ್ ಮೂಲದವರಾದ ಭಾರತ ಮೂಲದ ಈ ಹತ್ತು ಯುವಕರೂ 20 ವರ್ಷ ವಯಸ್ಸಿನ ಆಸುಪಾಸಿನವರು. ಇವರೆಲ್ಲರೂ ಯುಎಇಗೆ ಕೆಲಸಕ್ಕಾಗಿ ಬಂದಿದ್ದು, ಎಲೆಕ್ಟ್ರಿಷಿಯನ್, ಕಾರ್ಪೆಂಟರ್ ಮುಂತಾದ ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಆದರೆ, 2015ರಲ್ಲಿ ನಡೆದಿದ್ದ ದೊಂಬಿಯೊಂದರಲ್ಲಿ ಇವರು ಫರ್ಹಾನ್ ಎಂಬ ಯುವಕನನ್ನು ಹತ್ಯೆಗೈದಿದ್ದರೆಂದು ಹೇಳಲಾಗಿದೆ.

ಕ್ಷಮೆಗೆ ಕಾರಣವಾಯ್ತೇ ನಿಧಿ ಹಾಗೂ ಸಂಧಾನ?
ಮೂಲಗಳ ಪ್ರಕಾರ, ದುಬೈನಲ್ಲಿರುವ ಸರ್ಬಾತ್ ಭಾಲಾ ಚಾರಿಟಬಲ್ ಟ್ರಸ್ಟ್ ಭಾರತೀಯ ಯುವಕರ ನೆರವಿಗೆ ಬಂದಿದೆ. ಟ್ರಸ್ಟ್ ನ ಅಧ್ಯಕ್ಷ ಎಸ್. ಪಿಎಸ್. ಓಬೆರಾಯ್ ಅವರ ಪ್ರಕಾರ, ಟ್ರಸ್ಟ್ ವತಿಯಿಂದ ಭಾರತೀಯರನ್ನು ಬಚಾವ್ ಮಾಡಲೆಂದೇ ಹೇರಳವಾಗಿ ಬ್ಲಡ್ ಮನಿ (ಪರಿಹಾರ ನಿಧಿ) ಸಂಗ್ರಹಿಸಲಾಯಿತು. ಆನಂತರ ಟ್ರಸ್ಟ್ ನ ಪ್ರತಿನಿಧಿಯೊಬ್ಬರು ಪಾಕಿಸ್ತಾನಕ್ಕೆ ತೆರಳಿ, ಫರ್ಹಾನ್ ಅವರ ಕುಟುಂಬ ಹಾಗೂ ಸಂಬಂಧಿಕರನ್ನು ಭೇಟಿಯಾಗಿ ಅವರಿಗೆ ಪರಿಹಾರ ಮೊತ್ತ ಸಿಗುವುದಾಗಿ ಹೇಳಿದ್ದಲ್ಲದೆ, ಉದ್ದೇಶಪೂರ್ವಕವಲ್ಲದ ತಪ್ಪು ನಡೆದು ಹೋಗಿದೆ. ಆದರೂ, ಭಾರತೀಯರ ಜೀವನವನ್ನು ಕತ್ತಲಾಗಿಸದೇ ದೊಡ್ಡ ಮನಸ್ಸು ಮಾಡಿ ಅವರನ್ನು ಶಿಕ್ಷೆಯಿಂದ ತಪ್ಪಿಸಬೇಕೆಂದು ಮನವಿ ಮಾಡಿದ್ದರು.

ಅವರ ಸಂಧಾನ ಸಫಲವಾಗಿದ್ದು, ಆನಂತರ ಟ್ರಸ್ಟ್ ಹಾಗೂ ಅಬುಧಾಬಿಯಲ್ಲಿರುವ ಭಾರತೀಯ ಧೂತಾವಾಸದ ನೆರವಿನಿಂದ ಹಣವನ್ನು ಮೃತನ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಹಾಗಾಗಿ, ಮೊಹಮ್ಮದ್ ಫರ್ಹಾನ್ ಅವರು ತಮ್ಮ ಮನಸ್ಸು ಬದಲಿಗೆ ತಾವೇ ಖುದ್ದಾಗಿ ಬಂದು ಕ್ಷಮಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಹೇಳಲಾಗಿದೆ.

English summary
The family of a Pakistani man, allegedly murdered by 10 Indians in Abu Dhabi in 2015, has pardoned the convicts facing death sentence. The father of the victim, Mohammad Farhan, appeared at the Al Ain appeals court and submitted a letter of consent to pardon the Indians, an Indian embassy official told Gulf News.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X