ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ ಭಾರೀ ದುರಂತ : ನೂರಾರು ಜನ ಭೂಸಮಾಧಿ

By ವಿಕಾಸ್ ನಂಜಪ್ಪ
|
Google Oneindia Kannada News

ಬೀಜಿಂಗ್, 24: ಚೀನಾದಲ್ಲಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ 40ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿದ್ದು, 100ಕ್ಕೂ ಹೆಚ್ಚು ಜನರು ಜೀವಂತ ಭೂಸಮಾಧಿಯಾಗಿದ್ದಾರೆ.

ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಕ್ಸಿನ್ಮೋ ಎಂಬ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಇಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಮಳೆಯ ಹೊಡೆತಕ್ಕೆ ಗುಡ್ಡವೇ ಕುಸಿದುಬಿದ್ದಿದೆ. ಇದರಿಂದ ಎರಡು ಕಿ.ಮೀ. ಉದ್ದಕ್ಕೂ ನದಿಗೆ ಗುಡ್ಡದ ಮಣ್ಣು ತಡೆಯೊಡ್ಡಿದೆ ಎಂದು ಚೀನಾದ ಮಾಧ್ಯಮ ವರದಿ ಮಾಡಿದೆ.

Over 100 people buried alive in massive China landslide

ಪುರಾತನ ಕಲ್ಲಿನ ಕೋಟೆ, ದಟ್ಟವಾದ ಕಾಡು, ಕಣಿವೆ, ರಭಸದಿಂದ ಹರಿಯುವ ನದಿಗೆ ಹೆಸರಾಗಿರುವ ಈ ಗುಡ್ಡಗಾಡು ಪ್ರದೇಶ ಮಿನ್ ಜಿಯಾಂಗ್ ನದಿಯ ದಡದಲ್ಲಿದೆ. ಬುಲ್ಡೋಜರ್ ಗಳು ಕುಸಿದ ಮಣ್ಣನ್ನು ತೆರವುಗೊಳಿಸುತ್ತಿರುವ ಚಿತ್ರವನ್ನು ಪೀಪಲ್ಸ್ ಡೇಲಿ ಪ್ರಕಟಿಸಿದೆ.

ಭಾರೀ ಬಂಡೆಗಳನ್ನು ಮತ್ತು ಮಣ್ಣನ್ನು ತೆರವುಗೊಳಿಸುವ ಕಾರ್ಯ ಮತ್ತು ಜನರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ.

ಇತ್ತೀಚೆಗೆ ಬಂದ ವರ್ತಮಾನದ ಪ್ರಕಾರ, 140ಕ್ಕೂ ಹೆಚ್ಚು ಜನರು ಕಣ್ಮರೆಯಾಗಿದ್ದಾರೆ. ಭಾರೀ ಬಂಡೆಗಲ್ಲುಗಳ ಅಡಿಯಲ್ಲಿ ಹಲವರು ಸಿಲುಕಿರಬಹುದು ಎಂದು ಅಂದಾಜಿಸಲಾಗಿದೆ. ಈ ಪ್ರದೇಶದಲ್ಲಿ ಎಲ್ಲ ರಸ್ತೆಗಳನ್ನು ಬಂದ್ ಮಾಡಲಾಗಿದೆ.

2008ರಲ್ಲಿ ವೆನ್ ಚಾನ್ ಪ್ರಾಂತ್ಯದಲ್ಲಿ ಸಂಭವಿಸಿದ್ದ ಭೀಕರ ಭೂಕಂಪದಲ್ಲಿ 87 ಸಾವಿರ ಜನರು ಸಾವಿಗೀಡಾಗಿದ್ದರು.

English summary
Over 100 people have been buried alive in a massive landslide in China. The Chinese media reported that at leas at least 40 homes in the village of Xinmo have also been destroyed by the natural disaster in the Maoxian County of China’s Sichuan Province.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X