ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳೇನೋಟು ಬದಲಿಸಲು ಅನಿವಾಸಿ ಭಾರತೀಯರಿಗೆ ಬಾಗಿಲು ತೆರೆದಿದೆ

|
Google Oneindia Kannada News

ನವದೆಹಲಿ, ಮಾರ್ಚ್ 31: 500, 1000 ರುಪಾಯಿ ನೋಟುಗಳ ಬದಲಾವಣೆಗೆ ಭಾರತೀಯರಿಗೆ ಇದ್ದ ಒಂದು ಬಾಗಿಲು ಮಾರ್ಚ್ 31ಕ್ಕೆ ಮುಚ್ಚಿದಂತಾಗಿದೆ. ಇದ್ಯಾಕೆ ಒಂದು ಬಾಗಿಲು ಅಂದರೆ, ಅನಿವಾಸಿ ಭಾರತೀಯರಿಗೆ ನೋಟು ಬದಲಾವಣೆಗಾಗಿ ಇನ್ನೂ ಒಂದು ಅವಕಾಶ ಇದೆ.

ಅನಿವಾಸಿ ಭಾರತೀಯರು ತಲಾ 25 ಸಾವಿರದವರೆಗೆ ಹಳೆ 500, 1000 ರುಪಾಯಿ ನೋಟುಗಳನ್ನು ಬದಲಿಸಿಕೊಳ್ಳಬಹುದಾಗಿದೆ. ಅಂಥವರಿಗಾಗು ಜೂನ್ 30ರವರೆಗೆ ಅವಕಾಶ ಇದೆ. ಮಾರ್ಚ್ 31ರ ಶುಕ್ರವಾರ ಹಳೇ ನೋಟು ಬದಲಿಸಲು ಅವಕಾಶವಿರುವ ಆರ್ ಬಿಐನ ಕಚೇರಿಗಳಿರುವ ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಹಾಗೂ ನಾಗಪುರದಲ್ಲಿ ದೊಡ್ಡ ಸರತಿ ಇತ್ತು.[ಅಬ್ಬಬ್ಬ ! ಬೆಂಗಳೂರಿನಲ್ಲಿ 5 ಕೋಟಿ ರೂ ಹಳೇ ನೋಟು ವಶ]

Old Notes: RBI Closes Window For Indians Abroad; NRIs Can Still Exchange

ತಮ್ಮ ಬಳಿಯಿದ್ದ ಹಳೇ ನೋಟುಗಳನ್ನು ಬದಲಿಸಿಕೊಳ್ಳಲು ತುಂಬ ದೂರದ ಊರುಗಳಿಂದ ಸಹ ಜನರು ಬಂದಿದ್ದರು. ಕೆಲವೆಡೆಯಂತೂ ಆರೇಳು ಗಂಟೆಗಳ ಕಾಲ ಸಾಲಿನಲ್ಲಿ ನಿಂತವರಿದ್ದರು. ಅಗತ್ಯ ದಾಖಲೆಗಳನ್ನು ಒದಗಿಸಿ, ಹಣ ಬದಲೊಯಾಗಿ ಪಡೆಯಲು ದಿನಗಟ್ಟಲೆ ಪ್ರಯತ್ನಿಸಿದ್ದವರಲ್ಲಿ ಇಂದು ಕೊನೆ ದಿನ ಎಂಬ ದುಗುಡವಿತ್ತು.

ನವೆಂಬರ್ 8, 2016ರಲ್ಲಿ ನೋಟು ನಿಷೇಧ ಘೋಷಣೆ ಮಾಡಿದ ನಂತರ ಬ್ಯಾಂಕ್ ಗಳಲ್ಲಿ ಹಳೇ ನೋಟು ಜಮೆ ಮಾಡಲು ಡಿಸೆಂಬರ್ 30ರವರೆಗೆ ಅವಕಾಶ ನೀಡಲಾಗಿತ್ತು. ಆ ನಂತರ ಮಾರ್ಚ್ 31ರವರೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕಚೇರಿಗಳಲ್ಲಿ ನೋಟು ಬದಲಾವಣೆ ಮಾಡಿಕೊಳ್ಳಬಹುದಿತ್ತು.[ತಮಿಳುನಾಡಿನ ವ್ಯಾಪಾರಿಯಿಂದ PMGKYಗೆ 246 ಕೋಟಿ ಜಮೆ]

ಅಮಾನ್ಯವಾದ ನೋಟುಗಳನ್ನು ಇಟ್ಟುಕೊಳ್ಳುವುದು, ವರ್ಗಾಯಿಸುವುದು ಮತ್ತು ಪಡೆಯುವುದು ಅಪರಾಧವಾಗುತ್ತದೆ. ಅದಕ್ಕಾಗಿ ಹತ್ತು ಸಾವಿರ ರುಪಾಯಿ ಅಥವಾ ಎಷ್ಟು ಹಣ ಇಟ್ಟುಕೊಂಡಿರುತ್ತಾರೋ ಅದರ ಐದು ಪಟ್ಟು ಎರಡರಲ್ಲಿ ಯಾವುದೋ ಹೆಚ್ಚೋ ಅಷ್ಟು ದಂಡ ವಿಧಿಸಬಹುದಾಗಿದೆ.

English summary
The limited period window for exchange of junked Rs. 500 and Rs. 1,000 notes by Indians who were abroad ended today with many failing to do so because of limited counters and lack of procedural awareness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X