ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಕ್ಷಣಾ ಕೋಟೆ 'ದಿ ಬೀಸ್ಟ್' ಬಿಟ್ಟು ಪಯಣಿಸ್ತಾರಾ ಒಬಾಮ?

By Kiran B Hegde
|
Google Oneindia Kannada News

ನವದೆಹಲಿ, ಜ. 23: ಈ ವರ್ಷದ ಗಣರಾಜ್ಯೋತ್ಸವದಲ್ಲಿ ಬರಾಕ್ ಒಬಾಮ ಭಾಗವಹಿಸುತ್ತಿರುವುದು ವಿಶ್ವದ ಗಮನ ಸೆಳೆದಿರುವ ಜೊತೆಗೆ ಹಲವು ಪ್ರಥಮಗಳಿಗೂ ಸಾಕ್ಷಿಯಾಗುತ್ತಿದೆ.

ಅಧಿಕಾರದಲ್ಲಿರುವಾಗಲೇ ಎರಡನೇ ಬಾರಿ ಭಾರತ ಪ್ರವಾಸ ಕೈಗೊಂಡ ಅಮೆರಿಕದ ಪ್ರಥಮ ಅಧ್ಯಕ್ಷ ಬರಾಕ್ ಒಬಾಮ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ. ಅಲ್ಲದೆ, ಭಾರತದ ರಾಷ್ಟ್ರಪತಿ ಕಾರಿನಲ್ಲಿಯೇ ಒಬಾಮ ಪ್ರಯಾಣಿಸುವ ನಿರೀಕ್ಷೆಯಿದೆ. ಹೀಗಾದರೆ ಜಗತ್ತಿನ ಅತ್ಯಂತ ಶಕ್ತಿಯುತ ಹಾಗೂ ಸುರಕ್ಷಿತ ವಾಹನ ಎನ್ನಿಸಿಕೊಂಡಿರುವ 'ದಿ ಬೀಸ್ಟ್' ಕಾರು ಬಿಟ್ಟು ಪಯಣಿಸಿದ ಅಮೆರಿಕ ಪ್ರಥಮ ಅಧ್ಯಕ್ಷ ಎಂಬ ಹೆಸರಿಗೂ ಒಬಾಮ ಪಾತ್ರರಾಗಲಿದ್ದಾರೆ. [3 ಹಂತದಲ್ಲಿ ಒಬಾಮ ಸೇವಿಸುವ ಆಹಾರ ಪರೀಕ್ಷೆ]

beast

ಹೌದು, ಅಮೆರಿಕದಲ್ಲಿ ದುರಂತ ಅಂತ್ಯ ಕಂಡ ಅಧ್ಯಕ್ಷರ ಸಾಲಿನಲ್ಲಿ ಬರುವ ಜಾನ್ ಎಫ್ ಕೆನಡಿ ಸಾವಿನ ನಂತರ ದೇಶದ ನಾಯಕನ ಸುರಕ್ಷತೆಗೆ ಎಲ್ಲಿಲ್ಲದ ಮಹತ್ವ ನೀಡಲಾಗುತ್ತಿದೆ. ಅನಂತರ ಬಂದ ಯಾವ ಅಧ್ಯಕ್ಷರೂ ಎಲ್ಲಿಗೇ ಹೋದರೂ 'ದಿ ಬೀಸ್ಟ್' ಕಾರು ಬಿಟ್ಟು ಪ್ರಯಾಣಿಸಿಲ್ಲ!

ಅಮೆರಿಕದ ಜನರಲ್ ಮೋಟಾರ್ಸ್ ನಿರ್ಮಿಸಿರುವ ಕ್ಯಾಡಿಲಾಕ್ ಡಿಟಿಎಸ್ ಮಾದರಿಯ 'ದಿ ಬೀಸ್ಟ್' ಕಾರಿನ ವಿಶೇಷತೆಗಳು ಹುಬ್ಬೇರಿಸುತ್ತವೆ. ಕಾರಿನ ಲೋಹದ ಬಾಡಿ ಎಂಟು ಇಂಚು ದಪ್ಪವಿದೆ. ಇದರ ಗಾಜು ಐದು ಇಂಚು ದಪ್ಪವಿದ್ದು, ಬುಲೆಟ್ ಪ್ರೂಫ್ ಆಗಿದೆ. ರಾಸಾಯನಿಕ ದಾಳಿ ಸೇರಿದಂತೆ ಎಲ್ಲ ರೀತಿಯ ದಾಳಿಯಿಂದ ಈ ಕಾರು ರಕ್ಷಣೆ ನೀಡಬಲ್ಲದು.

ದಿ ಬೀಸ್ಟ್ ಕಾರಿನ ಬಾಗಿಲು ಬೋಯಿಂಗ್-757 ವಿಮಾನದ ಬಾಗಿಲಿನ ಮಾದರಿಯಲ್ಲಿದೆ. ಈ ಕಾರಿನ ಚಕ್ರ ಎಂದಿಗೂ ಪಂಕ್ಚರ್ ಆಗುವುದೇ ಇಲ್ಲ. ಗಾಲಿ ಹಾಳಾದರೂ ಅದರ ಸ್ಟೀಲ್ ರಿಮ್‌ಗಳ ಕಾರಣದಿಂದ ಕಾರು ಸುಲಭವಾಗಿ ಚಲಿಸಬಲ್ಲದು. [ಗಣರಾಜ್ಯೋತ್ಸವಕ್ಕೆ ಸೈನಿಕರ ತಾಲೀಮು]

ಇಂಧನ ಟ್ಯಾಂಕ್‌ ಸುತ್ತ ಇರುವ ನೊರೆ ಸ್ಫೋಟಗೊಳ್ಳದಂತೆ ತಡೆಯುತ್ತದೆ. ಇದರ ಚಾಲಕ ಸಿಐಎ ಗುಪ್ತದಳದಿಂದ ತರಬೇತಿ ಪಡೆದಿರುತ್ತಾನೆ. ಜನರಲ್ ಮೋಟಾರ್ಸ್ ಇಂತಹ ಮತ್ತೊಂದು ಕಾರನ್ನು ನಿರ್ಮಿಸುವಂತಿಲ್ಲ ಎಂಬ ನಿಬಂಧನೆಗೊಳಪಟ್ಟಿರುತ್ತದೆ.

English summary
If Barack Obama follows the protocol and travels in the car of Indian president, he will possibly be the first US President not to travel in his own highly-secured bomb-proof vehicle called 'The Beast'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X