ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

40 ಲಕ್ಷ ವಲಸಿಗರಿಗೆ ಬರಾಕ್ ಒಬಾಮಾ ಅಭಯ ಹಸ್ತ

|
Google Oneindia Kannada News

ವಾಷಿಂಗ್ ಟನ್, ನ. 21 : ಅಮೆರಿಕದಲ್ಲಿ ನೆಲೆಸಿರುವ ವಲಸಿಗರಿಗೆ ಅಧಿಕೃತ ಮಾನ್ಯತೆ ಮತ್ತು ಹಕ್ಕು ದೊರೆಯುವ ಕಾಲ ಹತ್ತಿರ ಬಂದಿದೆ. ಅಮೆರಿಕದಲ್ಲಿ ನೆಲೆ ನಿಂತಿರುವ ಆದರೆ ಅಧಿಕೃತವಾಗಿ ನಿವಾಸಿಗಳೆಂದು ಪರಿಗಣಿಸಲ್ಪಡದ ವಲಸಿಗರಿಗೆ ಕಾನೂನು ಮಾನ್ಯತೆ ಕಲ್ಪಿಸಿಕೊಡುವುದಾಗಿ ಅಧ್ಯಕ್ಷ ಬರಾಕ್ ಒಬಾಮಾ ತಿಳಿಸಿದ್ದಾರೆ.

ಅಮೆರಿಕದಲ್ಲಿ ನೆಲೆ ನಿಂತಿರುವ ಭಾರತೀಯರಿಗೂ ಇದು ಸಂತಸದ ಸುದ್ದಿಯಾಗಿದ್ದು, ಎಚ್‌-1ಬಿ ವೀಸಾ ಹೊಂದಿರುವ ಹಾಗೂ ಅಮೆರಿಕದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಎಲ್ಲರಿಗೂ ಅಮೇರಿಕದಲ್ಲಿ ಹಕ್ಕು ಬಾಧ್ಯತೆಗಳು ದೊರೆಯಲಿವೆ.[ಅಮೆರಿಕ ಕಂಡು ಹಿಡಿದಿದ್ದು ಕೊಲಂಬಸ್ ಅಲ್ಲವಂತೆ!]

obama

ಒಬಾಮಾ ಕ್ರಮಕ್ಕೆ ವ್ಯಾಪಕ ಬೆಂಬಲ ಸಹ ವ್ಯಕ್ತವಾಗಿದೆ. ಸುಮಾರು 40 ಲಕ್ಷಕ್ಕೂ ಅಧಿಕ ವಲಸಿಗರ ವಾಸ್ತವ್ಯವನ್ನು ಸಕ್ರಮಗೊಳಿಸಿ ಅದಕ್ಕೆ ಕಾನೂನು ಮಾನ್ಯತೆ ನೀಡುವುದರಿಂದ ರಾಷ್ಟ್ರಕ್ಕೂ ಒಳಿತಾಗಲಿದ್ದು ಅವರಿಗೂ ಭದ್ರತೆ ದೊರೆಯಲಿದೆ ಎಂದು ಒಬಾಮಾ ಹೇಳಿದ್ದಾರೆ.

ಅಮೆರಿಕದ ಆರ್ಥಿಕ ಸ್ಥಿತಿ ಗತಿ ಉತ್ತಮ ಮಾಡುವುದರಲ್ಲಿ ವಲಸಿಗರ ಕೊಡುಗೆಯೂ ಇದೆ. ಕೇವಲ ಉದ್ಯೋಗಿಗಳಿಗಲ್ಲದೇ ಅವರ ಹೆಂಡತಿ ಮತ್ತು ಮಕ್ಕಳಿಗೂ ಕಾನೂನು ಮಾನ್ಯತೆ ದೊರಕಿಸಿಕೊಡಲಾಗುವುದು, ವಿದ್ಯಾರ್ಥಿಗಳನ್ನು ಒಳಪಡಿಸಲಾಗುವುದು ಎಂದು ತಮ್ಮ 15 ನಿಮಿಷದ ಭಾಷಣದಲ್ಲಿ ಒಬಾಬಾ ಹೇಳಿದ್ದಾರೆ.[ಅಮೆರಿಕ ಪ್ರವಾಸಿಗರಿಗೆ ವಿಮಾನ ನಿಲ್ದಾಣದಲ್ಲೇ ವೀಸಾ]

ಭಾರತ, ಚೀನಾ ಸೇರಿದಂತೆ ಅನೇಕ ದೇಶಗಳಿಂದ ತೆರಳಿ ಅಮೆರಿಕದಲ್ಲಿ ವಿವಿಧ ಕೆಲಸ ಮಾಡುತ್ತಿರುವ ವಿಜ್ಞಾನಿಗಳು, ಸಂಶೋಧಕರು, ವಿದ್ಯಾರ್ಥಿಗಳು. ಸಾಪ್ಟ್ ವೇರ್ ಇಂಜಿನಿಯರ್ ಗಳು ಮತ್ತು ಅವರ ಕುಟುಂಬಕ್ಕೆ ಈ ಕ್ರಮ ನೆರವು ನೀಡುವುದರಲ್ಲಿ ಅನುಮಾನವಿಲ್ಲ ಎಂದು ಹೇಳಲಾಗಿದೆ.

English summary
US President Barack Obama announced that he would exercise his executive prerogative to protect nearly four million undocumented immigrants from deportation while streamlining procedures to retain in the US skilled foreign tech students and workers, many of whom are from China and India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X