ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಯೋಲ್ ನಲ್ಲಿ ಮಾತು ಕೊಟ್ಟವರು ಕೈಕೊಟ್ಟರು: ಪಿಎಂ ಮೋದಿಗೆ ಮುಖಭಂಗ

By Balaraj
|
Google Oneindia Kannada News

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ವ ಪ್ರಯತ್ನದ ನಂತರವೂ, ಭಾರತ 'ಪರಮಾಣು ಪೂರೈಕೆದಾರರ ಒಕ್ಕೂಟ (ಎನ್‌ಎಸ್‌ಜಿ)' ದೇಶಗಳ ಪಟ್ಟಿಯಲ್ಲಿ ಸೇರುವಲ್ಲಿ ವಿಫಲವಾಗಿದೆ. ಎಂಟು ವರ್ಷಗಳ ಸತತ ಪ್ರಯತ್ನದ ನಂತರವೂ ಭಾರತಕ್ಕೆ ಹಿನ್ನಡೆಯಾಗಿದೆ.

ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್​ನಲ್ಲಿ ನಡೆದ ಎರಡು ದಿನಗಳ ಮಹತ್ವದ ಸಭೆಯಲ್ಲಿ, ಭಾರತಕ್ಕೆ ಎನ್​ಎಸ್​ಜಿ ಸದಸ್ಯತ್ವ ನೀಡುವ ಕುರಿತು ಒಮ್ಮತ ಮೂಡದೇ ಇದ್ದ ಕಾರಣ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಎನ್​ಎಸ್​ಜಿ ಹಿಂದೇಟು ಹಾಕಿದೆ. (ಚೀನಾ, ರಷ್ಯಾಗಿಂತ ನಾವೇ ಉತ್ತಮ)

ಅಮೆರಿಕ, ಬ್ರಿಟನ್, ಫ್ರಾನ್ಸ್, ಜಪಾನ್ ಮುಂತಾದ ಘಟಾನುಗಟಿ ದೇಶಗಳು ಸೇರಿದಂತೆ ಸುಮಾರು 38 ರಾಷ್ಟ್ರಗಳು ಭಾರತದ ಪರವಾಗಿ ನಿಂತಿದ್ದರೂ, ಚೀನಾದ ವಿರೋಧವೇ ಕೊನೆಗೂ ಮೇಲುಗೈ ಸಾಧಿಸಿದೆ. ಈ ಒಕ್ಕೂಟದಲ್ಲಿ ಒಟ್ಟು 48 ದೇಶಗಳಿವೆ.

China and other nine countries has foiled India’s bid to join the Nuclear Suppliers Group

ಗಮನಿಸಬೇಕಾದ ಅಂಶವೇನಂದರೆ, ಇತ್ತೀಚಿನ ತನ್ನ ಭೇಟಿಯ ವೇಳೆ ಭಾರತವನ್ನು ಬೆಂಬಲಿಸುವುದಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾತು ಕೊಟ್ಟವರೂ. ಚೀನಾದ ಸೆಳೆತಕ್ಕೆ ಒಳಗಾದವು. ಚೀನಾ ಸೇರಿದಂತೆ ಹತ್ತು ರಾಷ್ಟ್ರಗಳು ಭಾರತದ ವಿರುದ್ದವಾಗಿ ನಿಂತವು.

ಎನ್​ಎಸ್​ಜಿ ಸೇರ್ಪಡೆಗೆ ಬೆಂಬಲ ನೀಡುವುದಾಗಿ ಮೋದಿಗೆ ಮಾತು ಕೊಟ್ಟಿದ್ದ ಸ್ವಿಜರ್ಲೆಂಡ್, ಟರ್ಕಿ, ಬ್ರೆಜಿಲ್, ಆಸ್ಟ್ರಿಯಾ ದೇಶಗಳು ಸಿಯೋಲ್ ಸಭೆಯಲ್ಲಿ ಉಲ್ಟಾ ಹೊಡೆದಿದ್ದರಿಂದ, ಪ್ರಧಾನಿ ಮೋದಿ ಮುಖಭಂಗ ಅನುಭವಿಸುವಂತಾಗಿದೆ.

ತಾಷ್ಕೆಂಟ್ ನಲ್ಲಿ ಪ್ರಧಾನಿ ಮೋದಿ, ಚೀನಾ ಅಧ್ಯಕ್ಷರನ್ನು ಭೇಟಿ ಮಾಡಿ ಎನ್​ಎಸ್​ಜಿ ಸೇರ್ಪಡೆಗೆ ಬೆಂಬಲ ಕೋರಿದ್ದರು. ಪರಮಾಣು ನಿಶ್ಯಸ್ತ್ರೀಕರಣ ಒಪ್ಪಂದಕ್ಕೆ ಸಹಿ ಹಾಕದ ದೇಶಗಳನ್ನು ಎನ್​ಎಸ್​ಜಿಗೆ ಸೇರಿಸಿ ಕೊಳ್ಳಬಾರದು ಎನ್ನುವ ಚೀನಾ ಮುಂತಾದ ರಾಷ್ಟ್ರಗಳ ಹಠಕ್ಕೆ ಜಯಸಿಕ್ಕಿದೆ. (ಚೀನಾ ಮೊಬೈಲ್ ಫೋನ್ ಮೇಲೆ ಸುಂಕ ಹೆಚ್ಚಳ)

ಕಾಂಗ್ರೆಸ್ ಲೇವಡಿ: ಬ್ರೆಕ್ಸಿಟ್ ನಂತರ ಯುಕೆ ಪ್ರಧಾನಿ ಡೇವಿಡ್ ಕ್ಯಾಮರೂನ್ ರಾಜೀನಾಮೆ ನೀಡುವುದಾಗಿ ಘೋಷಿಸಿದಂತೆ, ಎನ್‌ಎಸ್‌ಜಿ ಯಲ್ಲಿ ವಿಫಲವಾದ ನರೇಂದ್ರ ಮೋದಿ ಪ್ರಧಾನಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರಾ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಲೇವಡಿ ಮಾಡಿದ್ದಾರೆ.

ಭಾರತವನ್ನು ಒಕ್ಕೂಟಕ್ಕೆ ಸೇರಿಸಲು ವಿರೋಧ ಪಡಿಸಿದ ರಾಷ್ಟ್ರಗಳು: ಚೀನಾ, ಟರ್ಕಿ, ಬ್ರೆಜಿಲ್, ದಕ್ಷಿಣ ಆಫ್ರಿಕಾ, ಸ್ವಿಜರ್ಲ್ಯಾಂಡ್, ನ್ಯೂಜಿಲ್ಯಾಂಡ್, ಆಸ್ಟ್ರಿಯಾ, ಐರ್ಲ್ಯಾಂಡ್, ಮೆಕ್ಸಿಕೋ.

English summary
Even after 8 years of lobbying for a seat at the Nuclear Suppliers Group (NSG), India’s wait continues. At a special NSG session over the past two days in Seoul, China and other 9 countries opposed India’s NSG bid citing its non-NPT status.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X