ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಾಳದಲ್ಲಿ ಮತ್ತೆ ವಿಮಾನ ದುರಂತ, 11 ಜನ ಸಾವಿನ ಶಂಕೆ

By Mahesh
|
Google Oneindia Kannada News

ಕಠ್ಮಂಡು, ಫೆ.26: ನೇಪಾಳದಲ್ಲಿ ಮತ್ತೊಂದು ಲಘು ವಿಮಾನ ದುರಂತಕ್ಕೀಡಾಗಿದೆ. ಇತ್ತೀಚೆಗೆ ಪೋಖರಾದಿಂದ ಜೋಮ್ ಸಮ್ ಗೆ ತೆರಳುತ್ತಿದ್ದ ವಿಮಾನ ಅಪಘಾತಕ್ಕೀಡಾಗಿತ್ತು. ಈ ದುರಂತದಲ್ಲಿ 23 ಮಂದಿ ಸಾವನ್ನಪ್ಪಿದ್ದರು. ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ 11 ಜನ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಸಿಂಗಲ್ ಇಂಜಿನ್ 9ಎನ್ ಎಜೆಬಿ ಏರ್ ಕ್ರಾಫ್ಟ್ ನೇಪಾಳ್ ಗಂಜ್ ನಿಂದ ಜೂಮ್ಲಾಗೆ ತೆರಳುತ್ತಿತ್ತು. ಮಾರ್ಗ ಮಧ್ಯದಲ್ಲಿ ಚಿಲ್ಖಯಾ ಪ್ರದೇಶದಲ್ಲಿ ಪರ್ವತಗಳಿಗೆ ಡಿಕ್ಕಿ ಹೊಡೆದು ಪತನಗೊಂಡಿರುವ ಶಂಕೆ ವ್ಯಕ್ತವಾಗಿದೆ.

Nepal: Plane carrying 8 people crashes into mountains

ಘಟನೆ ನಡೆದಿರುವ ಪ್ರದೇಶಕ್ಕೆ ತೆರಳು ಸರಿ ಸುಮಾರು 4 ಗಂಟೆಗಳ ಟ್ರೆಕ್ಕಿಂಗ್ ಮಾಡಬೇಕಾಗುತ್ತದೆ. ಹೆಲಿ ಕಾಪ್ಟರ್ ಬಳಸಿಕೊಂಡು ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ಸರ್ಕಾರದ ವಕ್ತಾರರಾದ ಪದಮ್ ಲಾಲ್ ಲಾಮಿಚಾನೆ ಹೇಳಿದ್ದಾರೆ. [ನಾಪತ್ತೆಯಾಗಿದ್ದ ವಿಮಾನ ಪತ್ತೆ, 23 ಜನ ದುರಂತ ಸಾವು]

ಏರ್ ಕಾಷ್ಟಮಂಡಪ್ ಸಂಸ್ಥೆಗೆ ಸೇರಿದ ಲಘು ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ತುರ್ತು ಭೂಸ್ಪರ್ಶಕ್ಕೆ ಪೈಲಟ್ ಯತ್ನಿಸಿದ್ದಾರೆ. ಆದರೆ, ಈ ಪ್ರಯತ್ನದಲ್ಲಿ ಪರ್ವತ ಶ್ರೇಣಿಗೆ ವಿಮಾನ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.

ಕ್ಯಾಪ್ಟನ್ ದಿನೇಶ್ ನ್ಯೂಪೇನ್ ಹಾಗೂ ಸಹ ಪೈಲಟ್ ಸಂತೋಷ್ ರಾಣಾ ಸೇರಿದಂತೆ 11 ಜನ ಪ್ರಯಾಣಿಕರು ನೇಪಾಳ್ ಗಂಜ್ ನಿಂದ ಜೂಮ್ಲಾ ಎಂಬ ಪ್ರದೇಶಕ್ಕೆ 12.16ಕ್ಕೆ ಸೇರಬೇಕಿತ್ತು. ಆದರೆ, ಮಾರ್ಗಮಧ್ಯೆ ದುರಂತ ಸಂಭವಿಸಿದೆ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. (ಒನ್ಇಂಡಿಯಾ ಸುದ್ದಿ)

English summary
Plane carrying 8 people has reportedly crashed into mountains, two days after a small plane carrying 23 onboard crashed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X