ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

80 ವರ್ಷಕ್ಕೊಮ್ಮೆ ನೇಪಾಳದಲ್ಲಿ ಭೂಕಂಪ?

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಏ. 25 : 80 ವರ್ಷಗಳಿಗೊಮ್ಮೆ ನೇಪಾಳದಲ್ಲಿ ಭೂಕಂಪವಾಗುತ್ತದೆ ಎಂಬ ಮಾತಿದೆ. ವೈಜ್ಞಾನಿಕವಾಗಿಯೂ ಇದು ಸಾಬೀತಾಗಿದೆ. ನೇಪಾಳದಲ್ಲಿ 1934ರ ಬಳಿಕ ಶನಿವಾರ ಭಾರೀ ಭೂಕಂಪವಾಗಿದೆ. ಇದುವರೆಗೂ ಸುಮಾರು 600 ಜನರು ಮೃತಪಟ್ಟ ಬಗ್ಗೆ ಮಾಹಿತಿ ಲಭ್ಯವಾಗಿದೆ.

2011ರಲ್ಲಿ ನೇಪಾಳದಲ್ಲಿ ಸಂಭವಿಸಿದ ಭೂಕಂಪದಲ್ಲಿ 11 ಜನರು ಮೃತಪಟ್ಟಿದ್ದರು. ಕಳೆದ ವರ್ಷವೇ ಭಾರೀ ಭೂಕಂಪವಾಗಲಿದೆ ಅದಕ್ಕೆ ಸಿದ್ಧವಾಗಬೇಕು ಎಂದು ಮಾತು ಹಬ್ಬಿತ್ತು. 80 ವರ್ಷಗಳಿಗೊಮ್ಮೆ ಭೂಕಂಪವಾಗುತ್ತದೆ ಎಂಬ ಭಯ ಅಲ್ಲಿನ ಜನರನ್ನು ಕಾಡುತ್ತಲೇ ಇದೆ. [ನೇಪಾಳ ಮತ್ತು ಉತ್ತರ ಭಾರತದ ಹಲವೆಡೆ ಭೂಕಂಪ]

Nepal earthquake

ದೊಡ್ಡ ಭೂಕಂಪ : 80 ವರ್ಷಗಳಿಗೊಮ್ಮೆ ನೇಪಾಳ ಭೂಕಂಪಕ್ಕೆ ತುತ್ತಾಗುತ್ತದೆ ಎಂಬ ಆತಂಕ ಜನರ ಮನಸ್ಸಿನಲ್ಲಿದೆ. ಇದು ನಿಜವಾಗುವುದು ಬೇಡ ಎಂಬುದು ಜನರ ಬಯಕೆ. ಆದರೆ. ವಾಸ್ತವವೇ ಬೇರೆ ಇಂದು ಮತ್ತೊಮ್ಮೆ ಭೂಕಂಪ ಸಂಭವಿಸಿದೆ. [ನೇಪಾಳ, ಭಾರತ ಭೂಕಂಪ ಪೀಡಿತರಿಗೆ ಸಹಾಯವಾಣಿ]

1934ರಲ್ಲಿ ನೇಪಾಳದಲ್ಲಿ ಸಂಭವಿಸಿದ ಭೂಕಂಪದಲ್ಲಿ 12,000 ಜನರು ಮೃತಪಟ್ಟಿದ್ದರು. ಇಂದು ಸಂಭವಿಸಿರುವ ದುರಂತ ಅದಕ್ಕಿಂತ ದೊಡ್ಡದಾಗಲಿದೆ ಎಂದು ಅಂದಾಜಿಸಲಾಗಿದೆ. ಇದುವರೆಗೂ ಸುಮಾರು 600 ಜನರು ಮೃತಪಟ್ಟಿರುವ ಮಾಹಿತಿ ಲಭ್ಯವಾಗುತ್ತಿದೆ. [ಭೀಕರ ಭೂಕಂಪಕ್ಕೆ ನೇಪಾಳ ತತ್ತರ]

2015ರ ಭೂಕಂಪ ಅಪಾಯಕಾರಿ ಏಕೆ : 1934ಕ್ಕಿಂತ ಹೆಚ್ಚು ಅಪಾಯಕಾರಿಯಾದದ್ದು ಇಂದಿನ ಭೂಕಂಪ ಎಂದು ತಜ್ಞರು ಹೇಳುತ್ತಾರೆ. ಅಂದಿಗಿಂತಲೂ ನೇಪಾಳದ ಜನಸಂಖ್ಯೆ ಅಧಿಕವಾಗಿದೆ, ಸಾವಿರಾರು ಕಟ್ಟಡಗಳು ನಿರ್ಮಾಣವಾಗಿವೆ. ನೇಪಾಳದಲ್ಲಿರುವ ಕಟ್ಟಡಗಳು ಭೂಕಂಪದಂತಹ ಪ್ರಾಕೃತಿಕ ವಿಕೋಪಗಳನ್ನು ತಡೆದುಕೊಳ್ಳುವಷ್ಟು ಶಕ್ತಿಶಾಲಿಯಾಗಿಲ್ಲ ಎಂಬುದು ತಜ್ಞರು ಅಭಿಪ್ರಾಯ.

ತಜ್ಞರ ಪ್ರಕಾರ ನೇಪಾಳ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ರಕ್ಷಣಾ ಕಾರ್ಯಚರಣೆಯನ್ನು ತುರ್ತಾಗಿ ಕೈಗೊಳ್ಳುವಷ್ಟು ಶಕ್ತಿ ಮತ್ತು ತಂತ್ರಜ್ಞಾನವನ್ನು ಹೊಂದಿಲ್ಲ. ಇಂತಹ ಸಮಯದಲ್ಲಿ ನೆರೆಯ ದೇಶಗಳ ಸಹಕಾರ ಅನಿವಾರ್ಯವಾಗಿದೆ. ನೇಪಾಳಕ್ಕೆ ಭೇಟಿ ನೀಡಿ ಬಂದ ಪ್ರವಾಸಿಗರು ಈ ಮಾತನ್ನು ಒಪ್ಪುತ್ತಾರೆ.

English summary
In Nepal there is a popular folklore that there is a major earthquake once in 80 years. This has in fact been backed up by science as well which shows that a major earthquake takes once in 80 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X