ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳನ ಮೇಲಿನ ಸೂರ್ಯಾಸ್ತ ದೃಶ್ಯ ಹೇಗಿರುತ್ತದೆ?

|
Google Oneindia Kannada News

ವಾಷಿಂಗ್ಟನ್, ಮೇ 12: ಭೂಮಿಯ ಮೇಲೆ ಸೂರ್ಯ ಉದಯ ಮತ್ತು ಸೂರ್ಯಾಸ್ತದ ದೃಶ್ಯಗಳನ್ನು ಹೊಂಬಣ್ಣದಲ್ಲಿ ನೋಡಿ ಸವಿಯುತ್ತೇವೆ. ಆದರೆ ನೀಲಿ ಸೂರ್ಯಾಸ್ತವನ್ನು ಎಲ್ಲಿಯಾದರೂ ನೋಡಿದ್ದೀರಾ? ಮಂಗಳ ಗ್ರಹದ ಸೂರ್ಯಾಸ್ತ ಮತ್ತು ಸೂರ್ಯ ಉದಯ ನೀಲಿ ಬಣ್ಣದಲ್ಲಿಯೇ ಇರುತ್ತದೆ.

ಅಮೆರಿಕ ನಾಸಾದ ಕ್ಯೂರಿಯಾಸಿಟಿ ರೋವರ್ ಮಂಗಗಳ ಗ್ರಹದಲ್ಲಿನ ಸೂರ್ಯಾಸ್ತದ ಚಿತ್ರವನ್ನು ಸೆರೆಹಿಡಿದು ರವಾನಿಸಿದೆ. ಕೆಂಪು ಗ್ರಹದ ಬಾನಂಚಿನಲ್ಲಿ ನೀಲಿ ಬಣ್ಣದ ಸೂರ್ಯ ಕಂಡುಬಂದಿದ್ದಾನೆ.[ಸಾಕ್ಷಾತ್ ದೇವರನ್ನೇ ಸಂಕಷ್ಟದಲ್ಲಿ ಸಿಲುಕಿಸುವ ಗ್ರಹಣ!]

mars

ಕಳೆದ ತಿಂಗಳು ಸೆರೆ ಹಿಡಿದ ಚಿತ್ರಗಳು ಇದಾಗಿವೆ. ಈ ಬಗೆಯ ಅನೇಕ ಚಿತ್ರಗಳನ್ನು ಸೆರೆಹಿಡಿದು ಕ್ಯೂರಿಯಾಸಿಟಿ ರೋವರ್ ಕಳುಹಿಸಿಕೊಟ್ಟಿದೆ ಎಂದು ನಾಸಾ ತನ್ನ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.[ಮಂಗಳನ ಅಂಗಳದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಕ್ಯೂರಿಯಾಸಿಟಿ]

ಮಂಗಳಲ್ಲಿ ದೊಡ್ಡ ಸರೋವರ ವೊಂದಿತ್ತು ಎಂದು ನಾಸಾ ಕೆಲ ದಿನಗಳ ಹಿಂದೆ ಹೇಳಿತ್ತು. ಮಣ್ಣಿನಲ್ಲಿ ನೀರಿನ ಅಂಶವೂ ಯಥೇಚ್ಚವಾಗಿದ್ದು ಮಾನವನ ವಾಸದ ಸಾಧ್ಯತೆ ಬಗ್ಗೆ ನಿರಂತರ ಸಂಶೋಧನೆ ಮಾಡಲಾಗುತ್ತಿದೆ. ಮಂಗಳನ ಧೂಳಿನ ಬಗ್ಗೆ ಅಧ್ಯಯನ ಕೈಗೊಳ್ಳಲಾಗಿದ್ದು ಇನ್ನು ಹೆಚ್ಚಿನ ಸಂಶೋಧನೆಗೆ ಒತ್ತು ನೀಡಲಾಗುವುದು ಎಂದು ತಿಳಿಸಿದೆ.

English summary
NASA's Curiosity Mars rover has captured a stunning image of the sun setting on the red planet. The image was taken by the Mars rover's Mast Camera, on April 15. The sunset was the first observed in color by Curiosity, which was located in Mars' Gale Crater.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X