ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಹ್ಯಾಕಾಶದಲ್ಲಿ ಹಾರಾಡಿದ ಭಾರತೀಯರು ವಾಪಸ್!

By Kiran B Hegde
|
Google Oneindia Kannada News

ಚೆನ್ನೈ, ಡಿ. 22: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಯಶಸ್ಸಿನ ಮೇಲೆ ಯಶಸ್ಸು ಗಳಿಸುತ್ತಿದೆ. ನಮ್ಮ ಬಾಹ್ಯಾಕಾಶ ವಿಜ್ಞಾನಿಗಳ ಕುರಿತು ದೇಶದ ಜನರು ಹೆಮ್ಮೆಪಡುತ್ತಿರುವ ಸಂದರ್ಭದಲ್ಲಿಯೇ ನಾಸಾ ಮತ್ತೊಂದು ಸಂತಸದ ಸುದ್ದಿ ನೀಡಿದೆ.

ಸುಮಾರು 1.7 ಲಕ್ಷ ಭಾರತೀಯರ ಹೆಸರಿನೊಂದಿಗೆ ಮಾನವ ರಹಿತ ಸಿಬ್ಬಂದಿ ಘಟಕವನ್ನು ಹೊತ್ತೊಯ್ದಿದ್ದ ಅಂತರಿಕ್ಷ ವಾಹನ 'ಓರಿಯನ್' ಅಮೆರಿಕದ ಫ್ಲೋರಿಡಾದಲ್ಲಿರುವ ಕೆನಡಿ ಅಂತರಿಕ್ಷ ಕೇಂದ್ರಕ್ಕೆ ವಾಪಸ್ ಬಂದಿದೆ. [ಜಿಎಸ್ಎಲ್ ವಿ ಎಂಕೆ 3 ಯಶಸ್ಸಿನ 10 ಬೆಳವಣಿಗೆಗಳು]

orion

ನಾಸಾ ಬಿಡುಗಡೆ ಮಾಡಿರುವ ಅಧಿಕೃತ ಮಾಹಿತಿಯಂತೆ 1,78,144 ಭಾರತೀಯರು ತಮ್ಮ ಹೆಸರು ಓರಿಯನ್ ಅಂತರಿಕ್ಷ ವಾಹನದಲ್ಲಿ ಅಳವಡಿಸಿದ್ದ ಚಿಪ್‌ನಲ್ಲಿತ್ತು. [ಇಸ್ರೋದಿಂದ ಜಿಎಎಸ್ಎಲ್ ವಿಎಂ ರಾಕೆಟ್ ಉಡಾವಣೆ]

ಈ ವಾಹನವನ್ನು ಇದೇ ವರ್ಷ ಡಿಸೆಂಬರ್ 4ರಂದು ಅಂತರಿಕ್ಷಕ್ಕೆ ಸೇರಿಸಲಾಗಿತ್ತು. ವಾಹನ ಹೊತ್ತೊಯ್ಯುವ ಚಿಪ್‌ನಲ್ಲಿ ಹೆಸರು ಸೇರಿಸಲು ನಾಸಾ ಆಹ್ವಾನಿಸಿದಾಗ ಭಾರತದ 4,63,669 ಜನ ಹೆಸರು ನೋಂದಾಯಿಸಿದ್ದರು. ಹೀಗೆ ಹೆಸರು ನೋಂದಾಯಿಸಿದ ದೇಶಗಳಲ್ಲಿ ಭಾರತೀಯರದ್ದು ದ್ವಿತೀಯ ಸ್ಥಾನ ಎಂಬುದು ವಿಶೇಷ. ಅಮೆರಿಕ ಪ್ರಥಮ ಸ್ಥಾನದಲ್ಲಿದ್ದರೆ, ತೃತೀಯ ಸ್ಥಾನದಲ್ಲಿ ಯುನೈಟೆಡ್ ಕಿಂಗ್‌ಡಮ್ (1,12,073), ಮೆಕ್ಸಿಕೊ (51,505) ಹಾಗೂ ಫಿಲಿಪೈನ್ಸ್ (39,991) ಟಾಪ್ ಫೈವ್‌ನಲ್ಲಿವೆ. [ಮಂಗಳಯಾನದ ಚಾಲೆಂಜ್ ಗೆದ್ದ ಇಸ್ರೋ]

ಜಗತ್ತಿನ 230 ರಾಷ್ಟ್ರಗಳ 13,79,961 ಜನರ ಹೆಸರನ್ನು ಹೊಂದಿದ್ದ ಚಿಪ್‌ನೊಂದಿಗೆ ಓರಿಯನ್ ವಾಹನ ಗಗನಯಾತ್ರೆ ಕೈಗೊಂಡಿತ್ತು. ಭೂಮಿಯಿಂದ 5,700 ಕಿ.ಮೀ. ಎತ್ತರದವರೆಗೂ ಹಾರಾಟ ನಡೆಸಿ ಡಿಸೆಂಬರ್ 18ರಂದು ಓಸಿಯನ್ ಸಮುದ್ರದಲ್ಲಿ ಬಿದ್ದಿದೆ. ವಾಹನದ ಜೊತೆ ಚಿಪ್‌ನಲ್ಲಿದ್ದ ಹೆಸರು ಕೂಡ ಸುರಕ್ಷಿತವಾಗಿ ವಾಪಸ್ಸಾಗಿದೆ. [ಮಂಗಳನಿಗೆ ಮಾಮ್ ಸಿಕ್ಕದಳು : ಮೋದಿ]

English summary
Over 1.7 lakh Indians had reason to be happy as NASA spacecraft carrying a microchip containing their names was brought back safely to the Kennedy Space Center in Florida, US.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X