ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾಮಿ ವಿವೇಕಾನಂದ ವ್ಯಕ್ತಿಯಲ್ಲ, ಭಾರತದ ಆತ್ಮ:ಮೋದಿ

By Mahesh
|
Google Oneindia Kannada News

ಕೌಲಾಲಂಪುರ, ನ.22: ಮಲೇಷಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿನ ಪೆಟಲಿಂಗ್ ಜಯಾದಲ್ಲಿರುವ ರಾಮಕೃಷ್ಣ ಆಶ್ರಮದಲ್ಲಿ ಭಾನುವಾರ ವಿವೇಕಾನಂದರ ಪ್ರತಿಮೆ ಉದ್ಘಾಟಿಸಿದರು. ಮೋದಿ ಅವರು ತಮ್ಮ ಭಾಷಣದಲ್ಲಿ ವಿವೇಕವಾಣಿಯನ್ನು ಜಗತ್ತಿಗೆ ಸಾರಿದರು. ಸ್ವಾಮಿ ವಿವೇಕಾನಂದ ಅವರು ಕೇವಲ ಒಬ್ಬ ವ್ಯಕ್ತಿಯಲ್ಲ, ಭಾರತದ ಆತ್ಮ, ನಮ್ಮ ಸಂಸ್ಕೃತಿಯ ಪ್ರತೀಕ ಎಂದರು.

ಆಸಿಯಾನ್ ಸಭೆಯಲ್ಲಿ ಪಾಲ್ಗೊಳ್ಳಲು ಮಲೇಷಿಯಾದಲ್ಲಿ ಮೂರು ದಿನಗಳ ಪ್ರವಾಸ ಕೈಗೊಂಡಿರುವ ಮೋದಿ ಅವರು ವಿವೇಕಾನಂದ ಪ್ರತಿಮೆಗೆ ಭಕ್ತಪೂರ್ವಕ ನಮನ ಸಲ್ಲಿಸಿದರು. ಭಾರತದ ಹಿರಿಮೆ ಗರಿಮೆಯನ್ನು ಜಗತ್ತಿಗೆ ಸಾರಿದ ವಿವೇಕಾನಂದರ ಮಾರ್ಗದಲ್ಲಿ ನಾವು ಸಾಗಬೇಕಿದೆ. ಜನ ಸೇವೆಯೇ ಜನಾರ್ಧನನ ಸೇವೆ ವಿವೇಕಾನಂದರು ಹೇಳಿಕೊಟ್ಟ ಪಾಠ ಎಂದರು.[ಆಸಿಯನ್ ಶೃಂಗಸಭೆಯಲ್ಲಿ ಮೋದಿ: ಮಲೇಷ್ಯಾ ಪ್ರವೇಶಿಸಿದ 10 ಉಗ್ರರು]

ಭಾರತೀಯ ಸಂಸ್ಕೃತಿ, ನಾಗರೀಕತೆ ಸಾವಿರಾರು ವರ್ಷಗಳಿಂದ ಉಳಿದು ಬೆಳೆದು ಬಂದಿರುವುದೇ ಇಂಥ ಮಹಾನ್ ಶಕ್ತಿಗಳಿಂದ ಎಂಬುದನ್ನು ಮರೆಯುವಂತಿಲ್ಲ, ಇಲ್ಲಿನ ಭಾರತೀಯ ಸಮುದಾಯಕ್ಕೆ ವಿವೇಕಾನಂದರ ಪ್ರತಿಮೆ ಸ್ಪೂರ್ತಿದಾಯಕವಾಗಲಿದೆ ಎಂದರು.

ಇದರ ಜೊತೆಗೆ ಮಲೇಷಿಯಾದಲ್ಲಿರುವ ಭಾರತೀಯ ಸಮುದಾಯ ಹಾಗೂ ಮಲೇಷಿಯಾ ಸರ್ಕಾರದಲ್ಲಿರುವ ಭಾರತೀಯ ಮೂಲದ ಜನಪ್ರತಿನಿಧಿಗಳ ಜೊತೆ ಮೋದಿ ಅವರು ಮಾತುಕತೆ ನಡೆಸಿದರು.

ಸ್ವಾಮಿ ವಿವೇಕಾನಂದರನ್ನು ನಮ್ಮ ದೇಶದ ಹೃದಯ

ಸ್ವಾಮಿ ವಿವೇಕಾನಂದರನ್ನು ನಮ್ಮ ದೇಶದ ಹೃದಯ

ಸ್ವಾಮಿ ವಿವೇಕಾನಂದರನ್ನು ನಮ್ಮ ದೇಶದ ಹೃದಯ ಮತ್ತು ಆತ್ಮದ ಪ್ರತೀಕ ಅವರ ನುಡಿಗಳನ್ನು ನಮ್ಮಲ್ಲಿ ಅನುಸ್ಥಾಪಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ದೇವರು ಎಲ್ಲಿ ಎಂದು ಕೇಳಿದಾಗ

ದೇವರು ಎಲ್ಲಿ ಎಂದು ಕೇಳಿದಾಗ ಸ್ವಾಮಿ ವಿವೇಕಾನಂದರು ಹೇಳಿದ್ದೇನು?

ಭಾರತೀಯ ಮೂಲದ ಜನಪ್ರತಿನಿಧಿಗಳು

ಮಲೇಷಿಯಾ ಸರ್ಕಾರದಲ್ಲಿರುವ ಭಾರತೀಯ ಮೂಲದ ಜನಪ್ರತಿನಿಧಿಗಳ ಜೊತೆ ಮೋದಿ ಮಾತುಕತೆ.

ಸಾಂಸ್ಕೃತಿಕ ಕೇಂದ್ರಕ್ಕೆ ಸುಭಾಶ್ ಚಂದ್ರ ಬೋಸ್ ಹೆಸರು

ಇಲ್ಲಿರುವ ಸಾಂಸ್ಕೃತಿಕ ಕೇಂದ್ರಕ್ಕೆ ಸುಭಾಶ್ ಚಂದ್ರ ಬೋಸ್ ಹೆಸರು ಇಡುವುದಾಗಿ ಮೋದಿ ಘೋಷಿಸಿದರು.

ರಾಮಕೃಷ್ಣ ಪರಮಹಂಸ ಹಾಗೂ ವಿವೇಕರ ಸಂಬಂಧ

ರಾಮಕೃಷ್ಣ ಪರಮಹಂಸ ಹಾಗೂ ವಿವೇಕಾನಂದರ ನಡುವಿನ ಗುರು ಶಿಷ್ಯ ಸಂಬಂಧವನ್ನು ಸ್ಮರಿಸಿದ ಮೋದಿ.

English summary
Prime Minister Narendra Modi today(Nov, 22) unveiled Swami Vivekananda's statue at Ramakrishna Mission, Petaling Jaya in Kuala Lumpur."Vivekananda is not just a name. He personifies the thousands year old Indian culture and civilization said Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X