ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಅತ್ಯಂತ ಪ್ರಭಾವಿ ನಾಯಕರ ಪಟ್ಟಿಯಲ್ಲಿ ಮೋದಿ

ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆಗೊಳಿಸಿರುವ ವಿಶ್ವದ ಅತ್ಯಂತ ಪ್ರಬಲ ನಾಯಕರ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು 9ನೇ ಸ್ಥಾನದಲ್ಲಿ ಈ ವರ್ಷವೂ ಮುಂದುವರೆದಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮೊದಲ ಸ್ಥಾನ

By Mahesh
|
Google Oneindia Kannada News

ನ್ಯೂಯಾರ್ಕ್, ಡಿಸೆಂಬರ್ 15: ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆಗೊಳಿಸಿರುವ ವಿಶ್ವದ ಅತ್ಯಂತ ಪ್ರಬಲ ನಾಯಕರ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು 9ನೇ ಸ್ಥಾನದಲ್ಲಿ ಈ ವರ್ಷವೂ ಮುಂದುವರೆದಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡನೇ ಸ್ಥಾನಕ್ಕೇರಿದ್ದಾರೆ. ಕಳೆದ ವರ್ಷ ಯುಎಸ್ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಉದ್ಯಮಿಯಾಗಿ ಡೊನಾಲ್ಡ್ ಟ್ರಂಪ್ 72ನೇ ಸ್ಥಾನದಲ್ಲಿದ್ದರು.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವಿದೇಶಾಂಗ ನೀತಿ, ನೆರೆ ರಾಷ್ಟ್ರಗಳ ಜತೆ ಸೌಹಾರ್ದತೆ ಸಾಧಿಸುವ ಮೂಲಕ ತಮ್ಮ ಸ್ಥಾನ ಭದ್ರ ಪಡಿಸಿಕೊಂಡಿದ್ದಾರೆ. ನೋಟ್ ಬ್ಯಾನ್ ಅಪನಗದೀಕರಣ ನಂತರ ಮೋದಿ ಜನಪ್ರಿಯತೆ ಕುಗ್ಗಿರುವ ಶಂಕೆ ವ್ಯಕ್ತವಾಗಿತ್ತು. ಅದರೆ, ಮೋದಿ ಅವರು 9ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

2015ರಲ್ಲಿ ಎರಡನೇ ಸ್ಥಾನದಲ್ಲಿದ್ದ ಜರ್ಮನಿಯ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಅವರು ಮೂರನೇ ಸ್ಥಾನಕ್ಕೆ ದೂಡಲ್ಪಟ್ಟಿದ್ದಾರೆ. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಾಲ್ಕನೇ ಸ್ಥಾನಕ್ಕೆ ಜಿಗಿದಿದ್ದರೆ, ಕಳೆದ ವರ್ಷ ಮೂರನೇ ಸ್ಥಾನದಲ್ಲಿದ್ದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ 48ನೇ ಸ್ಥಾನಕ್ಕೆ ಕುಸಿದಿದ್ದಾರೆ. ಉಳಿದಂತೆ ಟಾಪ್ 10 ಪಟ್ಟಿಯಲ್ಲಿ ಪೋಪ್ ಫ್ರಾನ್ಸಿಸ್ 5ನೇ ಸ್ಥಾನ ಗಳಿಸಿದ್ದಾರೆ.

ಉಳಿದಂತೆ ಭಾರತದಿಂದ ರಿಲಯನ್ಸ್ ಇಂಡಸ್ತ್ರಿಯ ಚೇರ್ಮನ್ ಮುಖೇಶ್ ಅಂಬಾನಿ 38ನೇ ಸ್ಥಾನ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೆಲ್ಲಾ 51ನೇ ಸ್ಥಾನದಲ್ಲಿದ್ದಾರೆ. ಫೋರ್ಬ್ಸ್ ವಿಶ್ವದ ಪ್ರಭಾವಿ ವ್ಯಕ್ತಿಗಳ ಟಾಪ್ 10 ಪಟ್ಟಿ ಮುಂದೆ ನೋಡಿ...

ಪ್ರಭಾವಿ ವ್ಯಕ್ತಿಗಳ ಆಯ್ಕೆ ಹೇಗೆ?

ಪ್ರಭಾವಿ ವ್ಯಕ್ತಿಗಳ ಆಯ್ಕೆ ಹೇಗೆ?

ಜನ ಸಮುದಾಯದ ಮೇಲೆ ಹೊಂದಿರುವ ಪ್ರಭಾವ, ಆರ್ಥಿಕ ಸಂಪನ್ಮೂಲದ ಮೇಲೆ ನಿಯಂತ್ರಣ,ದೇಶದ ಆರ್ಥಿಕ ಪ್ರಗತಿ ಜಿಡಿಪಿ ದರ, ಉದ್ಯಮಿಗಳಾದರೆ ಅವರ ಆಸ್ತಿ, ಆದಾಯ ಗಳಿಕೆ ಹೀಗೆ ವಿವಿಧ ವಿಷಯಗಳ ಆಧಾರದ ಮೇಲೆ ಪಟ್ಟಿ ತಯಾರಿಸಲಾಗಿದೆ

#1 ವ್ಲಾದಿಮಿರ್ ಪುಟಿನ್

#1 ವ್ಲಾದಿಮಿರ್ ಪುಟಿನ್

* ರಷ್ಯಾದ ಅಧ್ಯಕ್ಷ
* 64 ವರ್ಷ ವಯಸ್ಸು
* ರಷ್ಯಾದ ನಿವಾಸಿ
* ವಿವಾಹವಾಗಿ ವಿಚ್ಛೇದಿತ
* 2 ಮಕ್ಕಳು
* ವಿದ್ಯಾರ್ಹತೆ: ಡಾಕ್ಟರ್ ಆಫ್ ಜ್ಯೂರಿಸ್ ಪ್ರೂಡೆನ್ಸ್, ಸೈಂಟ್ ಪೀಟರ್ಸ್ ಬರ್ಗ್ ಸ್ಟೇಟ್ ಯೂನಿವರ್ಸಿಟಿ
2015ರಲ್ಲಿ #1

#2 ಡೊನಾಲ್ಡ್ ಟ್ರಂಪ್

#2 ಡೊನಾಲ್ಡ್ ಟ್ರಂಪ್

ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರನ್ನು ಹಿಂದಿಕ್ಕಿ ರಿಪಬ್ಲಿಕನ್ ಅಭ್ಯರ್ಥಿ ಉದ್ಯಮಿ ಡೊನಾಲ್ಡ್ ಟ್ರಂಪ್(70) ಜಯಭೇರಿ ಬಾರಿಸಿದರು. ಅಮೆರಿಕದ ನಿಯೋಜಿತ ಅಧ್ಯಕ್ಷರಾಗಿದ್ದಾರೆ. ನ್ಯೂಯಾರ್ಕ್ ನಿವಾಸಿ, ಒಂದೆರಡು ಮದುವೆಯಾಗಿದ್ದು 5 ಜನ ಮಕ್ಕಳು, ಪೆನ್ಸಿಲ್ವಿನಿಯಾ ವಿವಿಯಿಂದ ಬಿಎ ಇನ್ ಸೈನ್ಸ್, 2015ರಲ್ಲಿ 72ನೇ ಸ್ಥಾನ

#3 ಏಂಜೆಲಾ ಮರ್ಕೆಲ್

#3 ಏಂಜೆಲಾ ಮರ್ಕೆಲ್

* ಜರ್ಮನಿಯ ಚಾನ್ಸೆಲರ್
* 62 ವರ್ಷ ವಯಸ್ಸು.
* ಜರ್ಮನಿಯ ಬರ್ಲಿನ್ ನಿವಾಸಿ
*ವಿವಾಹಿತೆ.
* ವಿದ್ಯಾರ್ಹತೆ: ಮಾಸ್ಟರ್ ಆಫ್ ಸೈನ್ಸ್, ಹಾಗೂ ಡಾಕ್ಟರೇಟ್ ಲಿಪ್ಜಿಗ್ ಯೂನಿರ್ವಸಿಟಿ
* ವಿಶ್ವದ ಪ್ರಭಾವಿ ಮಹಿಳೆ #2 (2015) * 2014ರಲ್ಲಿ 5ನೇ ಸ್ಥಾನದಲ್ಲಿದ್ದರು.

#4 ಕ್ಸಿ ಜಿನ್ ಪಿಂಗ್

#4 ಕ್ಸಿ ಜಿನ್ ಪಿಂಗ್

* ಪ್ರಧಾನ ಕಾರ್ಯದರ್ಶಿ, ಕಮ್ಯೂನಿಸ್ಟ್ ಪಾರ್ಟಿ ಚೀನಾ
* 62 ವರ್ಷ ವಯಸ್ಸು
* ಚೀನಾದ ಬೀಜಿಂಗ್ ನಿವಾಸಿ.
* ವಿವಾಹಿತ.
* ಬಿಎ ಆರ್ಟ್ಸ್ ಅಂಡ್ ಸೈನ್ಸ್, ಡಾಕ್ಟರೇಟ್ ತ್ಸಿಂಗುವಾ ವಿವಿ,
* 2015ಲ್ಲಿ 5ನೇ ಸ್ಥಾನದಲ್ಲಿದ್ದರು.

#5 ಪೋಪ್ ಫ್ರಾನ್ಸಿಸ್

#5 ಪೋಪ್ ಫ್ರಾನ್ಸಿಸ್

* ರೋಮಿನ ಬಿಷಪ್, ರೋಮನ್ ಕ್ಯಾಥೋಲಿಕ್ ಚರ್ಚ್
* 78 ವರ್ಷ ವಯಸ್ಸು

* ವ್ಯಾಟಿಕನ್ ಸಿಟಿಯಲ್ಲಿ ವಾಸ
* 2015ರಲ್ಲೂ 4ನೇ ಸ್ಥಾನ ಪಡೆದಿದ್ದರು. ಮುಂದುವರೆಯಲಿದೆ

#6 ಜಾನೆಟ್ ಯೆಲೆನ್

#6 ಜಾನೆಟ್ ಯೆಲೆನ್

* ಫೆಡೆರಲ್ ರಿಸರ್ವ್, ವಾಷಿಂಗ್ಟನ್, ಯುಎಸ್ಎ
* 70 ವರ್ಷ ವಯಸ್ಸು.
* ವಾಷಿಂಗ್ಟನ್, ಡಿಸಿ ನಿವಾಸಿ.
* ವಿವಾಹಿತೆ
* ಬಿಎ, ಬ್ರೌನ್ ವಿವಿ, ಡಾಕ್ಟರೇಟ್ ಯೇಲ್ ವಿವಿ
* 2014ರಲ್ಲಿ 6ನೇ ಸ್ಥಾನದಲ್ಲಿದ್ದರು.
* 2015ರ ಮಹಿಳಾ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರು

#7 ಬಿಲ್ ಗೇಟ್ಸ್

#7 ಬಿಲ್ ಗೇಟ್ಸ್

* ಬಿಲ್ ಅಂಡ್ ಮಿಲಿಂಡಾ ಗೇಟ್ಸ್ ಫೌಂಡೇಷನ್ ಸಹ ಸ್ಥಾಪಕ
* 79.7 ಬಿಲಿಯನ್ ಡಾಲರ್ ಹೊಂದಿದ್ದಾರೆ.
* ಅದಾಯ ಮೂಲ, ಸ್ವಯಾರ್ಜಿತ ಹಾಗೂ ಮೈಕ್ರೋಸಾಫ್ಟ್ ಸಂಸ್ಥೆಯ ವೇತನ.
* 61 ವರ್ಷ ವಯಸ್ಸು.
* ವಿವಾಹಿತ. ಮೂವರು ಮಕ್ಕಳು
* ಹಾರ್ವಡ್ ವಿವಿ ಡ್ರಾಪ್ ಔಟ್
* 2014ರಲ್ಲಿ 7ನೇ ಸ್ಥಾನದಲ್ಲಿದ್ದರು. * ಟೆಕ್ ಉದ್ಯಮಿಗಳ ಪಟ್ಟಿಯಲ್ಲಿ 2015ರಲ್ಲಿ ನಂ.1 * ಕೋಟ್ಯಧಿಪತಿಗಳ ಪಟ್ಟಿಯಲ್ಲಿ ನಂ.1

#8 ಲ್ಯಾರಿ ಪೇಜ್

#8 ಲ್ಯಾರಿ ಪೇಜ್

* ಗೂಗಲ್ ಸಂಸ್ಥೆ ಸಿಇಒ
* 37.6 ಬಿಲಿಯನ್ ಡಾಲರ್ ಹೊಂದಿದ್ದಾರೆ.
* 43 ವರ್ಷ ವಯಸ್ಸು * ಪಾಲೋ ಆಲ್ಟೋ ನಿವಾಸಿ.
* ಯುನೈಟೆಡ್ ಸ್ಟೇಟ್ಸ್ ಪೌರತ್ವ.
* ವಿವಾಹಿತ,
* ಬ್ಯಾಚುಲರ್ ಆಫ್ ಆರ್ಟ್ ಅಂಡ್ ಸೈನ್ಸ್ ಮಿಚಿಗನ್ ವಿವಿ, ಮಾಸ್ಟರ್ಸ್ ಸ್ಟಾನ್ ಫರ್ಡ್ ವಿವಿ * 2014ರಲ್ಲಿ 9ನೇ ಸ್ಥಾನ 2015ರಲ್ಲಿ ಟೆಕ್ ಉದ್ಯಮಿಗಳ ಪಟ್ಟಿಯಲ್ಲಿ 5ನೇ ಸ್ಥಾನ

#9 ನರೇಂದ್ರ ಮೋದಿ

#9 ನರೇಂದ್ರ ಮೋದಿ

* ಭಾರತದ ಪ್ರಧಾನಿ * 66 ವರ್ಷ ವಯಸ್ಸು * ನವದೆಹಲಿಯ ನಿವಾಸಿ * ಪತ್ನಿಯಿಂದ ಪ್ರತ್ಯೇಕವಾಗಿ ಬದುಕು * ಬಿ.ಎ ದೆಹಲಿ ವಿವಿ, ಮಾಸ್ಟರ್ ಆಫ್ ಆರ್ಟ್ಸ್, ಗುಜರಾತ್ ವಿವಿ * 2014ರಲ್ಲಿ 15ನೇ ಸ್ಥಾನದಲ್ಲಿದ್ದರು. * ದೇಶದ ಜಿಡಿಪಿ ಶೇ 7.4ಕ್ಕೇರಲು ಶ್ರಮಿಸಿದ್ದಾರೆ. 120 ಕೋಟಿ ಜನಸಂಖ್ಯೆಯ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ.

#10 ಮಾರ್ಕ್ ಝುಕರ್ ಬರ್ಗ್

#10 ಮಾರ್ಕ್ ಝುಕರ್ ಬರ್ಗ್

32 ವರ್ಷ, ಫೇಸ್ ಬುಕ್ ಸಹಸ್ಥಾಪಕ, ಚೇರ್ಮನ್, ಸಿಇಒ, ಪಾಲೋ ಆಲ್ಟೋದಲ್ಲಿ ಮನೆ, ಹಾರ್ವಡ್ ವಿವಿ ಡ್ರಾಪ್ ಔಟ್, ಮದುವೆಯಾಗಿ ಒಂದು ಮಗುವಿದೆ, 2015ರಲ್ಲಿ 19ನೇ ಸ್ಥಾನ

English summary
Indian Prime Minister Narendra Modi has been ranked among the 10 most powerful people in the world by Forbes in a list that has been topped by Russian President Vladimir Putin for a fourth straight year and had US President-elect Donald Trump in the second place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X