ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರನೇ ಮಹಾಯುದ್ದ: ದೇವಮಾನವ ನುಡಿದ ಬೆಚ್ಚಿಬೀಳುವ ಭವಿಷ್ಯ?

ಅಮೆರಿಕಾದ ಟೆಕ್ಸಾಸ್ ನಲ್ಲಿ ವಾಸವಾಗಿರುವ ಸ್ವಯಂಘೋಷಿತ ದೇವಮಾನವರೊಬ್ಬರು ಇನ್ನೇನು ಕೆಲವೇ ದಿನಗಳಲ್ಲಿ ಮೂರನೇ ಮಹಾಯುದ್ದ ಆರಂಭವಾಗಲಿದೆ ಎನ್ನುವ ಭವಿಷ್ಯವನ್ನು ನುಡಿದಿದ್ದಾರೆ.

By Balaraj Tantry
|
Google Oneindia Kannada News

ಕಳೆದ ವಿಜಯದಶಮಿಯ ವೇಳೆ ಮೈಲಾರದ ಕಾರ್ಣಿಕೋತ್ಸವದ ಸಂದರ್ಭದಲ್ಲಿ, ವಿಶ್ವದಲ್ಲಿ ಅಶಾಂತಿ, ಗದ್ದಲ ಮತ್ತು ಗಲಾಟೆಯಾಗುವ ಸಾಧ್ಯತೆಯಿದೆ ಎಂದು ನಾಗಪಜ್ಜ ಉರ್ಮಿ ಕಾರ್ಣಿಕ ನುಡಿದಿದ್ದರು.

ಈಗ ಅಮೆರಿಕಾದ ಟೆಕ್ಸಾಸ್ ನಲ್ಲಿ ವಾಸವಾಗಿರುವ ಸ್ವಯಂಘೋಷಿತ ದೇವಮಾನವರೊಬ್ಬರು ಇನ್ನೇನು ಕೆಲವೇ ದಿನಗಳಲ್ಲಿ ಮೂರನೇ ಮಹಾಯುದ್ದ ಆರಂಭವಾಗಲಿದೆ ಎನ್ನುವ ಭವಿಷ್ಯವನ್ನು ನುಡಿದಿದ್ದಾರೆ. (ಅಮೆರಿಕಾದಿಂದ ಯಾವುದೇ ಕ್ಷಣದಲ್ಲಿ ಯುದ್ದ ಘೋಷಣೆ)

ವಿಶ್ವದ ನಾಲ್ಕು ಬಲಾಢ್ಯ ದೇಶಗಳ (ಸಿರಿಯಾ ಹೊರತು ಪಡಿಸಿ ಅಮೆರಿಕಾ, ರಷ್ಯಾ ಮತ್ತು ಕೊರಿಯಾ) ನಡುವೆ ಆರಂಭವಾಗುವ ಮೂರನೇ ಮಹಾಯುದ್ದಕ್ಕೆ ಇತರ ದೇಶಗಳೂ ಕೈಜೋಡಿಸುವ ಮೂಲಕ ಜನಜೀವನ ಅಕ್ಷರಸ: ನರಕಸದೃಶವಾಗಲಿದೆ ಎನ್ನುವ ಭವಿಷ್ಯ ನುಡಿಯಲಾಗಿದೆ.

ಇಂದಿನಿಂದ (ಏ 23) ಇಪ್ಪತ್ತು ದಿನಗಳಲ್ಲಿ ಅಂದರೆ ಮೇ 13ರಂದು ಮೂರನೇ ವರ್ಲ್ಡ್ ವಾರ್ ಆರಂಭವಾಗಲಿದೆ ಎಂದು ದೇವಮಾನವ ಸಿ ಎಚ್ ವಿಲೇಗಾಸ್ ಭವಿಷ್ಯ ನುಡಿದಿದ್ದು, ಯುದ್ದದಲ್ಲಿ ಪರಮಾಣು ಅಸ್ತ್ರ ಯಥೇಚ್ಚವಾಗಿ ಬಳಕೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಈ ಭವಿಷ್ಯವಾಣಿಗೆ ಪೂರಕ ಎನ್ನುವಂತೆ ದಿನದಿಂದ ದಿನಕ್ಕೆ ಉತ್ತರ ಕೊರಿಯಾ ಮತ್ತು ಅಮೆರಿಕಾ ನಡುವೆ ಸಂಬಂಧ ತೀರಾ ಹದೆಗೆಡುತ್ತಿದ್ದು, ಎರಡೂ ರಾಷ್ಟ್ರಗಳು ಪರಮಾಣು ತಲೆಯನ್ನು ಹೊಂದಿರುವ ಕ್ಷಿಪಣಿಗಳನ್ನು ಸನ್ನದ್ದ ಸ್ಥಿತಿಯಲ್ಲಿ ನಿಲ್ಲಿಸಿವೆ.

ಮೂರನೇ ಮಹಾಯುದ್ದದಲ್ಲಿ ಭಾರತವೂ ಪಾಲ್ಗೊಳ್ಳಲಿದೆಯೇ, ಇದರಿಂದ ನಮ್ಮ ನಾಗರೀಕರಿಗಾಗುವ ತೊಂದರೆಗಳೇನು ಎನ್ನುವುದರ ಬಗ್ಗೆ ಭವಿಷ್ಯದಲ್ಲಿ ಪ್ರತ್ಯೇಕವಾಗಿ ಹೇಳಲಾಗಿಲ್ಲ. ವಿಲೇಗಾಸ್ ನುಡಿದ ಕುತೂಹಲಕಾರಿ ಭವಿಷ್ಯದ ಹೈಲೆಟ್ಸ್, ಮುಂದೆ ಓದಿ..

ಶತಕೋಟಿ ಡಾಲರ್ ಒಡೆಯ ಅಮೆರಿಕಾದ ಅಧ್ಯಕ್ಷ

ಶತಕೋಟಿ ಡಾಲರ್ ಒಡೆಯ ಅಮೆರಿಕಾದ ಅಧ್ಯಕ್ಷ

ಶತಕೋಟಿ ಡಾಲರ್ ಒಡೆಯನೊಬ್ಬ ಅಮೆರಿಕಾದ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆಂದು ವಿಲೇಗಾಸ್ ಭವಿಷ್ಯ ನುಡಿದಿದ್ದರು. ಅದರಂತೇ, ಉದ್ಯಮಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ದೇವಮಾನವ ವಿಲೇಗಾಸ್ ನುಡಿದ ಭವಿಷ್ಯ

ದೇವಮಾನವ ವಿಲೇಗಾಸ್ ನುಡಿದ ಭವಿಷ್ಯ

ವಿಲೇಗಾಸ್ ನುಡಿದ ಭವಿಷ್ಯದ ಪ್ರಕಾರ ಮೇ ಹದಿಮೂರರಂದು ಆರಂಭವಾಗುವ ಮೂರನೇ ಮಹಾಯುದ್ದ ಅಕ್ಟೋಬರ್ ಹದಿಮೂರರಂದು ಮುಕ್ತಾಯಗೊಳ್ಳಲಿದೆ. ಸಿರಿಯಾದ ಮೇಲೆ ಆರಂಭವಾಗುವ ಯುದ್ದದ ಪ್ರಭಾವ ವಿಶ್ವದೆಲ್ಲಡೆ ಹರಡಲಿದೆ.

ಉತ್ತರ ಕೊರಿಯಾ - ಅಮೆರಿಕಾ ಸಂಬಂಧ

ಉತ್ತರ ಕೊರಿಯಾ - ಅಮೆರಿಕಾ ಸಂಬಂಧ

ಅಮೆರಿಕಾದ ಅಧ್ಯಕ್ಷರನ್ನು 'Illuminati King' ಎಂದು ಕರೆದಿರುವ ವಿಲೇಗಾಸ್, ಟ್ರಂಪ್ ಅವರ ಮುಂದಿನ ಟಾರ್ಗೆಟ್ ಉತ್ತರ ಕೊರಿಯಾ. ಅಮೆರಿಕಾಗೆ ಅದು ಸುಲಭ ಟಾರ್ಗೆಟ್ ಅಲ್ಲ. ಇದೇ ಮೂರನೇ ಮಹಾಯುದ್ದಕ್ಕೆ ಮುನ್ನುಡಿ ಬರೆಯಲಿದೆ ಎಂದು ಭವಿಷ್ಯ ನುಡಿಯಲಾಗಿದೆ.

ಉತ್ತರ ಕೊರಿಯಾ ನಡೆಸುತ್ತಿರುವ ಪರಮಾಣು ಪರೀಕ್ಷೆ

ಉತ್ತರ ಕೊರಿಯಾ ನಡೆಸುತ್ತಿರುವ ಪರಮಾಣು ಪರೀಕ್ಷೆ

ಸಿರಿಯಾದ ಮೇಲೆ ಅಮೆರಿಕಾ ಪಡೆಗಳು ನಡೆಸಿದ ದಾಳಿಯ ವಿಚಾರದಲ್ಲಿ ಬಲಾಢ್ಯ ರಷ್ಯಾ, ಉತ್ತರ ಕೊರಿಯಾ ಮತ್ತು ಚೀನಾ ದೇಶಗಳು ರಾಜತಾಂತ್ರಿಕವಾಗಿ ಅಮೆರಿಕಾದ ವಿರುದ್ದ ತಿರುಗಿಬಿದ್ದಿದ್ದವು. ಕೊರಿಯಾದ ಸರ್ವಾಧಿಕಾರಿ ಕಿಮ್ ಜೋಂಗ್ ಉನ್ ಸತತವಾಗಿ ಪರಮಾಣು ಪರೀಕ್ಷೆ ನಡೆಸುವುದರ ಜೊತೆಗೆ ಅಮೆರಿಕಾದ ನಗರಗಳನ್ನು ಟಾರ್ಗೆಟ್ ಮಾಡುವ ಕ್ಷಿಪಣಿಗಳನ್ನು ಸನ್ನದ್ದವಾಗಿರಿಸಿದ್ದರಿಂದ ಪರಿಸ್ಥಿತಿ ತೀರಾ ಹದೆಗೆಡುತ್ತಿದೆ.

ದೇವಮಾನವ ವಿಲೇಗಾಸ್

ದೇವಮಾನವ ವಿಲೇಗಾಸ್

ವಿಲೇಗಾಸ್ ನುಡಿದ ಭವಿಷ್ಯದ ಪ್ರಕಾರ ಯೇಸು ಕ್ರಿಸ್ತನ ತಾಯಿ ಮೇರಿ, ಲೇಡಿ ಆಫ್ ಫಾತಿಮಾನನ್ನು ಪೋರ್ಚುಗಲ್ ನಲ್ಲಿ ಮೇ 13, 1917ನಲ್ಲಿ ಭೇಟಿಯಾಗಿದ್ದರು ಎನ್ನುವುದು ಪ್ರತೀತಿ. ಅಲ್ಲಿಂದ ನೂರನೇ ವರ್ಷಾಚರಣೆಯ ದಿನ ಮೇ 13, 2017ಕ್ಕೆ ಮೂರನೇ ಮಹಾಯುದ್ದ ಆರಂಭವಾಗಲಿದೆ.

ಯುದ್ದದ ವೇಳೆ ಜನಜೀವನ ಅಸ್ತವ್ಯಸ್ತ

ಯುದ್ದದ ವೇಳೆ ಜನಜೀವನ ಅಸ್ತವ್ಯಸ್ತ

ಮೂರನೇ ಮಹಾಯುದ್ದದ ವೇಳೆ ವಿಶ್ವದ ಹಲವು ನಗರಗಳ ಮೇಲೆ ಅಣ್ವಸ್ತ್ರ ಪ್ರಯೋಗ ನಡೆಯಲಿದೆ. ಈ ಅವಧಿಯಲ್ಲಿ ವಿಶ್ವದ ಹಲವು ರಾಷ್ಟ್ರಗಳಲ್ಲಿ ಜನಜೀವನ ಅಸ್ತವ್ಯಸ್ತಗೊಳ್ಳಲಿದ್ದು ಪ್ರಾಣಾಪಯದಿಂದ ಪಾರಾಗಲು ಜನ ವಲಸೆ ಹೋಗಲಿದ್ದಾರೆಂದು ಭವಿಷ್ಯ ನುಡಿಯಲಾಗಿದೆ.

ಚೀನಾ ಕೂಡಾ ಭಾಗವಹಿಸಲಿದೆ

ಚೀನಾ ಕೂಡಾ ಭಾಗವಹಿಸಲಿದೆ

ಸುಮಾರು ಐದು ತಿಂಗಳು ನಡೆಯುವ ಮಹಾಯುದ್ದ ಅಕ್ಟೋಬರ್ ನಲ್ಲಿ ಅಂತ್ಯಗೊಳ್ಳಲಿದೆ. ಅಮೆರಿಕ, ರಷ್ಯಾ, ಸಿರಿಯಾ, ಉತ್ತರ ಕೊರಿಯಾಗಳ ನಡುವೆ ಆರಂಭವಾಗುವ ಯುದ್ದದಲ್ಲಿ ಚೀನಾ ಕೂಡಾ ನಂತರ ಭಾಗವಹಿಸಲಿದೆ.

English summary
Self-proclaimed ‘Messenger of God’, Clairvoyant Horacio Villegas from Texas (US) has predicted that the third world war will begin on March 13, 2017 and ends in October 13,2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X