ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಲಿಬಾನ್ ಕಮಾಂಡರ್ ಮುಲ್ಲಾ ಒಮರ್ ಸಾವು

By ವಿಕಾಸ್ ನಂಜಪ್ಪ
|
Google Oneindia Kannada News

ಕಾಬೂಲ್, ಜುಲೈ 29: ತಾಲಿಬಾನ್ ಉಗ್ರ ಸಂಘಟನೆಯ ಪರಮೋಚ್ಚ ಕಮ್ಯಾಂಡರ್ ಮುಲ್ಲಾ ಒಮರ್ ಮೂರು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾನೆ. ಅವನ ಸಾವಿನ ಸುದ್ದಿಯನ್ನು ಬಚ್ಚಿಡಲಾಗಿತ್ತು ಎಂದು ಬಿಬಿಸಿ ಬಹಿರಂಗಪಡಿಸಿದೆ.

ಅಫ್ಘಾನಿಸ್ತಾನ ಸರ್ಕಾರದ ಅಧಿಕಾರಿಗಳಿಂದ ಈ ಬಗ್ಗೆ ಸ್ಪಷ್ಟ ಮಾಹಿತಿ ಕಲೆ ಹಾಕಿದ್ದು, ತಾಲಿಬಾನಿಗಳ ನಾಯಕ ಸತ್ತು ಅನೇಕ ವರ್ಷಗಳಾಗಿದೆ ಎಂದು ಬಿಬಿಸಿ ಹೇಳಿದೆ.

ಅದರೆ, ತಾಲಿಬಾನಿಗಳು ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಸುದ್ದಿಯನ್ನು ತಳ್ಳಿ ಹಾಕಿಲ್ಲ ಅಥವಾ ಒಪ್ಪಿಕೊಂಡಿಲ್ಲ. ಬಿಬಿಸಿಯಲ್ಲಿ ಸುದ್ದಿ ಪ್ರಸಾರವಾದ ಬಳಿಕ ತಾಲಿಬಾನಿ ವಕ್ತಾರರು ಈ ಬಗ್ಗೆ ಪ್ರಕಟಣೆ ಹೊರಡಿಸುವ ನಿರೀಕ್ಷೆಯಿದೆ.

ಈ ಹಿಂದೆ ಕೂಡಾ ಸುದ್ದಿ ಹಬ್ಬಿತ್ತು: ತಾಲಿಬಾನ್ ನಾಯಕ ಒಮರ್ ಗುಂಡಿನ ದಾಳಿಗೆ ಸಿಕ್ಕಿ ಸಾವನ್ನಪ್ಪಿದ್ದಾನೆ ಎಂದು ಅಫ್ಘಾನ್ ನ್ಯೂಸ್ ಔಟ್ ಲೆಟ್, ಟಿಒಎಲ್‌ಒ ನ್ಯೂಸ್ 2011ರಲ್ಲಿ ವರದಿ ಮಾಡಿದ್ದವು. ಅಫ್ಘಾನಿಸ್ತಾನದ ಉತ್ತರ ವಾಜಿರಸ್ತಾನ್‌ನಲ್ಲಿ ಮುಲ್ಲಾ ಒಮರ್ ಸಾವನ್ನಪ್ಪಿದ್ದಾನೆ, ಈತನನ್ನು ಅಮೆರಿಕದ ಯೋಧರು ಕೊಂದಿರಬಹುದು ಎನ್ನಲಾಗಿತ್ತು.

2011ರಲ್ಲಿ ಪ್ರಸಾರವಾದ ಡಾ. ಜಾನ್ ಕೊಲ್ಮನ್ ಅವರ ವೇಕ್ ಅಪ್ ಅಮೆರಿಕ ವಿಡಿಯೋ ಇಲ್ಲಿದೆ ನೋಡಿ:

ಆದರೆ, ತೆಹ್ರೆಕ್-ಇ-ತಾಲಿಬಾನ್ ಮುಲ್ಲಾ ಒಮರ್ ಸಾವನ್ನು ನಿರಾಕರಿಸಿತ್ತು. ಅಮೆರಿಕಾದ ತನಿಖಾ ಏಜೆನ್ಸಿ ಎಫ್‌ಬಿಐಗೆ ಒಸಾಮಾ ನಂತರ ಮುಲ್ಲಾ ಒಮರ್ ಎರಡನೇ ಟಾರ್ಗೆಟ್ ಆಗಿದ್ದ. 2001ರಲ್ಲಿ ಅಮೆರಿಕ ಜೋಡಿ ಕಟ್ಟಡದ ಮೇಲೆ ದಾಳಿ ನಡೆಸಿದ ನಂತರ ಈತನೇ ಲಾಡೆನ್‌ನನ್ನು ಗೌಪ್ಯವಾಗಿಟ್ಟಿದ್ದ ಎನ್ನಲಾಗಿತ್ತು.

English summary
Mullah Omar dead: Taliban to issue statement shortly.His death has been kept a secret from the world and today the BBC, while quoting sources in the Afghanistan government said that the supreme commander of the Taliban may be dead.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X