ಮೊಝಾಂಬಿಕ್ : ಪೆಟ್ರೋಲ್ ಟ್ಯಾಂಕ್ ಟ್ರಕ್ ಸ್ಫೋಟ, 73 ಸಾವು

By:
Subscribe to Oneindia Kannada

ಮಾಪುಟೊ, ನವೆಂಬರ್ 18: ಪಶ್ಚಿಮ ಮೊಝಾಂಬಿಕ್ ನ ಪುಟ್ಟ ಗ್ರಾಮ ಟೆಟೆಯಲ್ಲಿ ಪೆಟ್ರೋಲ್ ಟ್ಯಾಂಕ್ ಟ್ರಕ್ ಗುರುವಾರ ಸ್ಫೋಟಗೊಂಡಿದೆ. ಈ ದುರ್ಘಟನೆಯಲ್ಲಿ 73ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದಾರೆ. 110ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ

ಮೊಝಾಂಬಿಕ್ ನ ಕ್ಯಾಫ್ರಿಡ್ ಝಾಂಗ್ ಗ್ರಾಮದ ಮಾಲ್ವಿ ಎಂಬಲ್ಲಿ ನಾಗರಿಕರೊಬ್ಬರು ಆಯಿಲ್ ಟ್ಯಾಂಕ್ ಟ್ರಕ್ ನಿಂದ ಪೆಟ್ರೋಲ್ ತೆಗೆಯುತ್ತಿದ್ದರು. ಈ ಸಂದರ್ಭದಲ್ಲಿ ಟ್ಯಾಂಕ್ ಸಿಡಿದು ಟ್ರಕ್‌ ಗೆ ಬೆಂಕಿ ಹತ್ತಿಕೊಂಡಿದೆ. ಮಾಲ್ವಿಯಿಂದ ಮೊಝಾಂಬಿಕ್ ನ ಬಂದರು ನಗರಿ ಬಿಯಿರಾಗೆ ಟ್ರಕ್ ತೆರಳತ್ತಿತ್ತು. ಮೃತಪಟ್ಟವರಲ್ಲಿ ಹಲವು ಮಂದಿ ಮಕ್ಕಳು ಸೇರಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Mozambique: Tanker truck blast kills 73

ಮಾರ್ಗಮಧ್ಯೆ ಕೆಟ್ಟು ನಿಂತ ಟ್ರಕ್ ನಿಂದ ಪೆಟ್ರೋಲ್ ಪಡೆಯಲು ನಾಗರಿಕರು ಯತ್ನಿಸಿದರು. ಈ ಗೊಂದಲದಲ್ಲಿ ಟ್ಯಾಂಕ್ ಗೆ ಹಾನಿಯಾಗಿ ದುರ್ಘಟನೆ ನಡೆದಿರುವ ಸಾಧ್ಯತೆಯಿದೆ ಎಂದು ಎಎಫ್ ಪಿ ವರದಿ ಮಾಡಿದೆ. ವಿಶ್ವದ ಅತ್ಯಂತ ಬಡ ರಾಷ್ಟ್ರಗಳ ಪೈಕಿ ಮೊಝಾಂಬಿಕ್ ಕೂಡಾ ಒಂದಾಗಿದೆ.

English summary
At least 73 people were killed and dozens of people injured after a tanker truck exploded in Mozambique's Tete province.
Please Wait while comments are loading...