ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ-ಟ್ರಂಪ್ ಭೇಟಿ: ಚರ್ಚೆಯಾದ 8 ಪ್ರಮುಖ ಸಂಗತಿ

|
Google Oneindia Kannada News

ವಾಷಿಂಗ್ಟನ್ ಡಿಸಿ, ಜೂನ್ 27: ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಮೊಟ್ಟ ಮೊದಲ ಬಾರಿಗೆ ಅವರನ್ನು ಭೇಟಿ ಮಾಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಹಲವು ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆಸಿದರು. ಎರಡೂ ರಾಷ್ಟ್ರಗಳ ಭವಿಷ್ಯದ ದೃಷ್ಟಿಯಿಂದ ಈ ಭೇಟಿ ಅತ್ಯಂತ ಪ್ರಮುಖವಾದದ್ದು ಎನ್ನಿಸಿದೆ.

ಟ್ರಂಪ್-ಮೋದಿ ಭೇಟಿ ಎಫೆಕ್ಟ್, ಮತ್ತೋರ್ವ ಜಾಗತಿಕ ಉಗ್ರನ ಘೋಷಣೆಟ್ರಂಪ್-ಮೋದಿ ಭೇಟಿ ಎಫೆಕ್ಟ್, ಮತ್ತೋರ್ವ ಜಾಗತಿಕ ಉಗ್ರನ ಘೋಷಣೆ

ಟ್ರಂಪ್ -ಮೋದಿ ಮುಖಾಮುಖಿ ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನರೇಂದ್ರ ಮೋದಿ, ನಾವು ಭಯೋತ್ಪಾದನೆ, ಉಗ್ರಗಾಮಿತ್ವ, ಮೂಲಭೂತವಾದಗಳ ಕುರಿತು ಮಾತನಾಡಿರುವುದಾಗಿ ಮತ್ತು ಇವುಗಳ ನಿವಾರಣೆಗೆ ಪರಸ್ಪರ ಸಹಕರಿಸುವುದಾಗಿ ಭರವಸೆ ನೀಡಿರುವುದಾಗಿ ಹೇಳಿದರು.

'ಇದು ನೂರಾಇಪ್ಪತ್ತೈದು ಕೋಟಿ ಭಾರತೀಯರಿಗೆ ಮಾಡಿದ ಸನ್ಮಾನ'!'ಇದು ನೂರಾಇಪ್ಪತ್ತೈದು ಕೋಟಿ ಭಾರತೀಯರಿಗೆ ಮಾಡಿದ ಸನ್ಮಾನ'!

ಜೂನ್ 27 ರಂದು ಭಾರತೀಯ ಕಾಲಮಾನದ ಪ್ರಕಾರ ಬೆಳಗಿನ ಜಾವ 1.30 ರ ಸುಮಾರಿಗೆ ಪ್ರಧಾನಿ ಮೋದಿಯವರನ್ನು ವೈಟ್ ಹೌಸ್ ನಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ, ಮೆಲಾನಿಯಾ ಟ್ರಂಪ್ ಮೋದಿಯವರನ್ನು ಅಮೆರಿಕಕ್ಕೆ ಹಾರ್ದಿಕವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮೋದಿ-ಟ್ರಂಪ್ ಚರ್ಚಿಸಿದ ಮಹತ್ವದ ಸಂಗತಿಗಳ ಪಟ್ಟಿ ಇಲ್ಲಿದೆ.(ಚಿತ್ರಕೃಪೆ: ಪಿಟಿಐ)

ಭಯೋತ್ಪಾದನೆ ನಿರ್ಮೂಲನೆಗೆ ಬದ್ಧ

ಭಯೋತ್ಪಾದನೆ ನಿರ್ಮೂಲನೆಗೆ ಬದ್ಧ

ಭೇಟಿಯ ಸಮಯದಲ್ಲಿ ಭಯೋತ್ಪಾದನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಟ್ರಂಪ್, ಭಾರತ ಮತ್ತು ಅಮೆರಿಕ ಜಂಟಿಯಾಗಿ ಭಯೋತ್ಪಾದನೆಯ ವಿರುದ್ಧ ಸಮರ ಸಾರಲಿದೆ ಎಂದರು. ನಮ್ಮ ಎರಡೂ ರಾಷ್ಟ್ರಗಳು ಭಯೊತ್ಪಾದನೆಯಿಂದಾಗಿ ಸ್ತಬ್ದವಾಗಿದೆ. ಆದ್ದರಿಂದ ಇಬ್ಬರೂ ಒಟ್ಟಾಗಿ ಅದರ ನಿರ್ಮೂಲನೆಗೆ ಪಣತೊಡಬೇಕಿದೆ. ಅಷ್ಟೇ ಅಲ್ಲ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಶಕ್ತಿಗಳನ್ನೂ ಹೊಡೆದೋಡಿಸಬೇಕಿದೆ. ನಾವು ಮೂಲಭೂತ ಇಸ್ಲಾಮಿಕ್ ಭಯೋತ್ಪಾದನೆಯನ್ನು ನಾಶ ಮಾಡಲು ಸನ್ನದ್ಧರಾಗಿದ್ದೇವೆ ಎಂದು ಟ್ರಂಪ್ ಹೇಳಿದರು.

ಪಾಕಿಸ್ತಾನದ ಪ್ರಸ್ತಾಪ

ಪಾಕಿಸ್ತಾನದ ಪ್ರಸ್ತಾಪ

ಪಾಕಿಸ್ತಾನದ ನೆಲ ಭಯೋತ್ಪಾದಕ ದಾಳಿಗಳನ್ನು ಆರಂಭಿಸುವ ತಾಣವಾಗಿರುವುದನ್ನು ಖಂಡಿಸಿದ ಅವರು, 26/11 ರ ಬಾಂಬೆ ಸ್ಫೋಟ ಮತ್ತು ಪಠಾಣ್ ಕೋಟ್ ದಾಳಿ ಸೇರಿದಂತೆ ಇನ್ನುಳಿದ ದಾಳಿಗಳಿಗೆ ಕಾರಣರಾದ ಭಯೋತ್ಪಾದಕರನ್ನು ಶಿಕ್ಷಿಸುವ ಕೆಲಸವನ್ನು ಪಾಕಿಸ್ತಾನ ಮಾಡಬೇಕಿದೆ ಎಂಬ ಬಗ್ಗೆಯೂ ಚರ್ಚೆ ನಡೆಯಿತು.

ಕಾಶ್ಮೀರದ ಅಶಾಂತಿಯ ಕುರಿತೂ ಚರ್ಚೆ

ಕಾಶ್ಮೀರದ ಅಶಾಂತಿಯ ಕುರಿತೂ ಚರ್ಚೆ

ಗಡಿ ಭಯೋತ್ಪಾದನೆ ಕಳೆದ ವರ್ಷದಿಂದ ಕಾಶ್ಮೀರದ ಶಾಂತಿಯನ್ನು ಕದಡಿದೆ. ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟ ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ ಸೈಯ್ಯದ್ ಸಲಾವುದೀನ್ ನೇತೃತ್ವದಲ್ಲಿ ಪಾಕಿಸ್ತಾನ ಮತ್ತು ಪಾಕಿಸ್ತಾನಿ ಆಕ್ರಮಿತ ಕಾಶ್ಮೀರದಲ್ಲಿ ನಿರಂತರ ಭಯೋತ್ಪಾದಕ ಚಟುವಟಿಕೆ ನಡೆಯುತ್ತಿದೆ. ಇದನ್ನು ಹತ್ತಿಕ್ಕುವುದು ತುರ್ತು ಅಗತ್ಯವಾಗಿದೆ ಎಂದು ಈ ಸಂದರ್ಭದಲ್ಲಿ ಚರ್ಚೆ ಮಾಡಲಾಯಿತು.

ಭಾರತದೊಂದಿಗೆ ನಾವಿದ್ದೇವೆ

ಭಾರತದೊಂದಿಗೆ ನಾವಿದ್ದೇವೆ

ಹಿಂದೆಂದಿಗಿಂತಲೂ ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯ ಈಗ ಹೆಚ್ಚು ಗಟ್ಟಿಯಾಗಿದೆ. ಭಾರತಕ್ಕೆ ವೈಟ್ ಹೌಸಿನಲ್ಲಿ ನಿಜವಾದ ಸ್ನೇಹಿತರಿದ್ದಾರೆ. ಅತೀ ಶೀಘ್ರವಾಗಿ ಬೆಳವಣಿಗೆ ಕಾಣುತ್ತಿರುವ ಜಗತ್ತಿನ ಅರ್ಥವ್ಯವಸ್ಥೆಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ನಾವು ಸದಾ ಭಾರತದೊಂದಿಗಿರುತ್ತೇವೆ ಎಂದು ಟ್ರಂಪ್ ಹೇಳಿದರು.

ಸೌಹಾರ್ದಯುತ ವಾಣಿಜ್ಯ ವ್ಯವಹಾರ

ಸೌಹಾರ್ದಯುತ ವಾಣಿಜ್ಯ ವ್ಯವಹಾರ

ಭಾರತ ಮತ್ತು ಅಮೆರಿಕ ನಡುವೆ ಸೌಹಾರ್ದಯುತ ವಾಣಿಜ್ಯ ವ್ಯವಹಾರಗಳು ನಡೆಯಬೇಕಿದೆ. ಅದಕ್ಕಾಗಿ ಮೋದಿಯವರೊಂದಿಗೆ ಕೈಜೋಡಿಸುತ್ತೇವೆ. ಅಮೆರಿಕ ಮತ್ತು ಭಾರತದ ನಡುವಿನ ರಫ್ತು ವ್ಯವಹಾರದ ನಡುವಿನ ಅಡಚಣೆಗಳನ್ನು ನಿವಾರಿಸುವ ಭರವಸೆಯನ್ನೂ ಟ್ರಂಪ್ ಈ ಸಂದರ್ಭದಲ್ಲಿ ನೀಡಿದರು.

ಮುಕ್ತ ಕಂಠದಿಂದ ಮೋದಿ ಶ್ಲಾಘನೆ

ಮುಕ್ತ ಕಂಠದಿಂದ ಮೋದಿ ಶ್ಲಾಘನೆ

ಇದೇ ಸಂದರ್ಭದಲ್ಲಿ ಮೋದಿಯವರನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಟ್ರಂಪ್, 'ನೀವು ಭಾರತವನ್ನು ಆರ್ಥಿಕವಾಗಿ ಪ್ರಗತಿ ಹೊಂದಿದ ದೇಶವನ್ನಾಗಿ ಮಾಡುವಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿದ್ದೀರಿ, ಅದಕ್ಕಾಗಿ ಅಭಿನಂದನೆಗಳು' ಎಂದರು. 2014 ರಲ್ಲಿ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭವನ್ನು ನೆನಪಿಸಿಕೊಂಡ ಮೋದಿ, 'ಆಗಲೇ ಭಾರತದ ಅಭಿವೃದ್ಧಿಯ ಕುರಿತು ನೀವು ಧನಾತ್ಮಕ ಪ್ರತಿಕ್ರಿಯೆ ನೀಡಿದ್ದಿರಿ' ಎಂದು ನೆನಪಿಸಿದರು.

ಟ್ರಂಪ್ ಜೊತೆ ಊಟ ಮಾಡಿದ ಮೊದಲ ಗಣ್ಯ ಮೋದಿ!

ಟ್ರಂಪ್ ಜೊತೆ ಊಟ ಮಾಡಿದ ಮೊದಲ ಗಣ್ಯ ಮೋದಿ!

ನಾಲ್ಕು ಗಂಟೆಗೂ ಹೆಚ್ಚು ಕಾಲ, ಜಾಗತಿಕ ವಿಷಯಗಲ ಕುರಿತು, ಭಾರತ-ಅಮೆರಿಕ ಬಾಂಧವ್ಯದ ಕುರಿತು ಚರ್ಚೆ ನಡೆಸಿದ ಮೋದಿ-ಟ್ರಂಪ್ ಕೊನೆಗೆ ಒಟ್ಟಾಗಿ ಊಟ ಮಾಡಿದರು. ಈ ಮೂಲಕ ಡೊನಾಲ್ಡ್ ಟ್ರಂಪ್ ಜೊತೆ ವೈಟ್ ಹೌಸ್ ನಲ್ಲಿ ಊಟ ಮಾಡಿದ ಮೊದಲ ವಿದೇಶಿ ಗಣ್ಯ ಎಂಬ ಹೆಗ್ಗಳಿಕೆಗೂ ಓದಿ ಪಾತ್ರರಾದರು.

ಸೌಹಾರ್ದ ಸಂಬಂಧಕ್ಕೆ ನಾಂದಿ

ಸೌಹಾರ್ದ ಸಂಬಂಧಕ್ಕೆ ನಾಂದಿ

ಟ್ರಂಪ್ ಅಮೆರಿಕ ಅಧ್ಯಕ್ಷರಾದ ಮೇಲೆ, ಮೂರು ಬಾರಿ ಫೋನಿನಲ್ಲಿ ಮಾತನಾಡಿದ್ದ ಮೋದಿ ಮತ್ತು ಟ್ರಂಪ್, ಮುಖತಃ ಭೇಟಿಯಾಗಿದ್ದು ಇದೇ ಮೊದಲು. ಈ ಭೇಟಿ ಎರಡು ದೇಶಗಳ ನಡುವಿನ ಬಾಂಧವ್ಯ ವೃದ್ಧಿಗೆ ಮತ್ತು ಎರಡು ಗಣ್ಯರ ನಡುವಿನ ಸಂಬಂಧ ಹೆಚ್ಚಿಸುವುದಕ್ಕೆ ನಾಂದಿಹಾಡಿದೆ.

English summary
Prime minister of India Narendra Modi and President of America Donald Trump's meet creates a history in the diplomatic relationship between both the countries. The both leaders decided to fight unitely to eradicate terrorism in India and America. Here are some important topics, discussed in the meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X