ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೈಮ್ : ಮತ್ತೆ ಮೊದಲ ಸ್ಥಾನಕ್ಕೆ ಮೋದಿ ಜಿಗಿತ

By Mahesh
|
Google Oneindia Kannada News

ವಾಷಿಂಗ್ಟನ್, ಡಿ.3: ಟೈಮ್ ಮ್ಯಾಗಜೀನ್ ವರ್ಷದ ವ್ಯಕ್ತಿ ಸಮೀಕ್ಷೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಮುನ್ನಡೆ ಕಾಯ್ದುಕೊಂಡಿದ್ದಾರೆ. ಸಾರ್ವಜನಿಕರ ಮತದಾನಕ್ಕೆ ಇನ್ನೂ ಕೇವಲ ನಾಲ್ಕು ದಿನ ಬಾಕಿ ಇರುವಾಗ ಮೋದಿ ಅವರು ಮೊದಲ ಸ್ಥಾನಕ್ಕೇರಿರುವುದು ಸ್ಪರ್ಧೆಯ ಕುತೂಹಲವನ್ನು ಹೆಚ್ಚಿಸಿದೆ.

ಡಿಸೆಂಬರ್ ತಿಂಗಳ ಆರಂಭದ ವೇಳೆ ಮೋದಿ ಅವರನ್ನು ಹಿಂದಿಕ್ಕಿ ಫರ್ಗುಸನ್ ಹೋರಾಟಗಾರರು ಮುನ್ನಡೆ ಪಡೆದುಕೊಂಡಿದ್ದರು. ಈಗ ಮೋದಿ ಅವರು ಅಗ್ರಸ್ಥಾನದಲ್ಲಿದ್ದರೂ ಗೆಲುವು ಖಚಿತ ಎನ್ನಲು ಬರುವುದಿಲ್ಲ. [ಒಬಾಮಾ ನಂತರ ಮೋದಿಯೇ ಜನಪ್ರಿಯ ವ್ಯಕ್ತಿ!]

ಈ ಸಮಯಕ್ಕೆ ಮೋದಿ ಪರ ಶೇ10.8 ಮತಗಳು, ಫರ್ಗುಸನ್ ಪ್ರತಿಭಟನಾಕಾರರ ಪರ ಶೇ 10.2 ಮೊದಲೆರಡು ಸ್ಥಾನದಲ್ಲಿದ್ದರೆ, ಹಾಂಗ್ ಕಾಂಗ್ ನ ಮುಖಂಡ ಜೋಶುವಾ ವೋಂಗ್, ನೊಬೆಲ್ ಶಾಂತಿ ಪಾರಿತೋಷಕ ವಿಜೇತೆ ಪಾಕಿಸ್ತಾನದ ಮಕ್ಕಳ ಹಕ್ಕು ಹೋರಾಟಗಾರ್ತಿ ಮಲಾಲ ಯುಸಫಾಜೈ, ಎಬೋಲಾ ನರ್ಸ್ ಗಳು ನಂತರದ ಸ್ಥಾನದಲ್ಲಿದ್ದಾರೆ.

Modi Takes Back Lead from Ferguson Protesters in TIME’s Person of the Year Poll

ವಾರ್ಷಿಕ ಮತದಾನ ಇನ್ನೂ ಜಾರಿಯಲ್ಲಿದ್ದು ಡಿಸೆಂಬರ್ 6ರಂದು ಕೊನೆಗೊಳ್ಳಲಿದೆ. ಸಮೀಕ್ಷೆಯ ಫಲಿತಾಂಶವನ್ನು ಡಿಸೆಂಬರ್ 8 ರಂದು ಘೋಷಿಸಲಾಗುತ್ತದೆ. ಅದರೆ, ಅಧಿಕೃತವಾಗಿ ಟೈಮ್ ವರ್ಷದ ವ್ಯಕ್ತಿ ವಿಜೇತರ ಹೆಸರನ್ನು ಡಿಸೆಂಬರ್ 10 ರಂದು ಪ್ರಕಟಿಸಲಾಗುತ್ತದೆ. [ಡಿಸೆಂಬರ್ 1: 2ನೇ ಸ್ಥಾನದಲ್ಲಿದ್ದ ಮೋದಿ]

ಒಂದು ಕಾಲದಲ್ಲಿ ವಿವಾದಿತ ವ್ಯಕ್ತಿ ಎನಿಸಿಕೊಂಡಿದ್ದವರು ಈಗ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಅಧಿಕಾರ ಚುಕ್ಕಾಣಿ ಹಿಡಿದಿದಿದ್ದಾರೆ. ನರೇಂದ್ರ ಮೋದಿ ಅವರ ಆರ್ಥಿಕ ನೀತಿ, ವಿದೇಶಾಂಗ ನೀತಿ ಆಡಳಿತ ವೈಖರಿ, ನೆರೆ ರಾಷ್ಟ್ರಗಳೊಂದಿಗೆ ಬಾಂಧವ್ಯ, ಎನ್ನಾರೈಗಳು ಉದ್ಯಮಿಗಳ ಜೊತೆ ಸಂಬಂಧ ಎಲ್ಲವೂ ಅವರನ್ನು ಟೈಮ್ ವರ್ಷದ ವ್ಯಕ್ತಿ ಆಯ್ಕೆ ಪಟ್ಟಿಯಲ್ಲಿ ಮುಂಚೂಣಿಯಲ್ಲಿರಿಸಿವೆ ಎಂದು ಮೋದಿ ಬಗ್ಗೆ ಬರೆಯಲಾಗಿದೆ.

ಮತ ಹಾಕಲು ಇಲ್ಲಿದೆ ಮಾರ್ಗ: ಟೈಮ್ ವೆಬ್ ಸೈಟ್ ಕ್ಲಿಕ್ ಮಾಡಿ ನಿಮ್ಮ ಆಯ್ಕೆ Yes ಅಥವಾ No ಬಟನ್ ಒತ್ತುವುದರ ಮೂಲಕ ದಾಖಲಿಸಿ. ಟೈಮ್ ಫೇಸ್ ಬುಕ್, ಟ್ವಿಟ್ಟರ್ ಮೂಲಕ ನಿಮ್ಮ ಅಭಿಪ್ರಾಯವನ್ನು #TIMEPOY ಟ್ಯಾಗ್ ಜೊತೆ ಹಾಕಿ ಹಂಚಿಕೊಳ್ಳಿ.

English summary
Indian Prime Minister Narendra Modi has retaken the lead in TIME’s Person of the Year poll, surpassing the protesters for Ferguson, Mo., with just four days left to vote.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X