ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಯಾರೀಸ್ : ರಿಕ್ಕಿ ಕೇಜ್ ಆಲ್ಬಂ ಬಿಡುಗಡೆ ಮಾಡಿದ ಮೋದಿ

By Mahesh
|
Google Oneindia Kannada News

ಪ್ಯಾರೀಸ್, ಡಿ.01: ಪರಿಸರ ಜಾಗೃತಿ ಮೂಡಿಸುವ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ರಿಕ್ಕಿತೇಜ್ ಅವರ ಮ್ಯೂಸಿಕ್ ಆಲ್ಬಂ 'ಶಾಂತಿ ಸಂಸಾರ" ವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಫ್ರಾಂಕಯಿಸ್ ಹೊಲಾಂಡೆ ಅವರು ಲೋಕಾರ್ಪಣೆ ಮಾಡಿದ್ದಾರೆ.

ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಹವಾಮಾನ ಬದಲಾವಣೆ (ವೈಪರೀತ್ಯ) ಶೃಂಗಸಭೆಯಲ್ಲಿ ಈ ವಿಶಿಷ್ಟ ಆಲ್ಬಂ ಬಿಡುಗಡೆಯಾಗಿದೆ. ಈ ಆಲ್ಬಂನಲ್ಲಿ ಸಂಸ್ಕೃತ ಶ್ಲೋಕಗಳಿದ್ದು, ಈ ಆಲ್ಬಂಗೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಹಾಗೂ ಹಾಲಿವುಡ್ ತಾರೆ ಫ್ರಾನ್ಸಿಸ್ ಫಿಷರ್ ಮತ್ತು ಬಾಫ್ನಾ ಪ್ರಶಸ್ತಿ ವಿಜೇತರಾದ ರೋಸಾವಾ ಅರ್ಕ್ವೆಟ್ ಧ್ವನಿ ನೀಡಿದ್ದಾರೆ. [ಮೋದಿ ಜೊತೆಗೆ ರಿಕ್ಕಿ ಕೇಜ್ ದಂಪತಿ ಸೆಲ್ಫಿ ಚಿತ್ರ]

Modi, Hollande launch Grammy winner Ricky Kej’s new album

ಕಳೆದ ಸೆಪ್ಟೆಂಬರ್‌ನಲ್ಲಿ ತಾವು ಮೋದಿ ಅವರನ್ನು ಭೇಟಿ ಮಾಡಿದ ಸಂದರ್ಭ ಅವರಾಡಿದ ಮಾತುಗಳೇ ನನ್ನ ಪತಿ ಈ ಆಲ್ಬಂ ನಿರ್ಮಾಣ ಮಾಡಲು ಪ್ರೇರಣೆಯಾಯಿತು ಎಂದು ವರ್ಷಾ ಕೇಜ್ ಹೇಳಿದ್ದಾರೆ. ಪ್ರಕೃತಿಯನ್ನು ಕೊಂಡಾಡುತ್ತಾ ವಿವಿಧ ಜಗತ್ತಿನ ಸಂಸ್ಕೃತಿಯನ್ನು ಪರಿಚಯಿಸುವ ಈ ಆಲ್ಬಂನಲ್ಲಿ ಸುಮಾರು 300ಕ್ಕೂ ಅಧಿಕ ಸಂಗೀತಗಾರರು ಕಾರ್ಯ ನಿರ್ವಹಿಸಿದ್ದಾರೆ.

English summary
Prime Minister Narendra Modi and French President Francois Hollande have launched Grammy-award winner Ricky Kej’s new music album at the Paris climate change conference. The album is titled Shanti Samsara and is described as world music for environmental consciousness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X