ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ ಮೋದಿ: ಚೀನಿ ಪತ್ರಿಕೆಗಳ ಟೀಕೆ-ಟಿಪ್ಪಣಿ

By Mahesh
|
Google Oneindia Kannada News

ಬೀಜಿಂಗ್, ಮೇ 14: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮೂರು ದಿನಗಳ ಚೀನಾ ಪ್ರವಾಸ ಆರಂಭಗೊಂಡಿದೆ. ಕ್ಸಿಯಾನ್ ಪ್ರಾಂತ್ಯದಲ್ಲಿ ಸುತ್ತಾಡಿದ ನಂತರ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜೊತೆ ಕೈ ಕುಲುಕಿದ್ದಾರೆ.

ಗಡಿ ಭದ್ರತೆ, ಮೂಲ ಸೌಕರ್ಯಕ್ಕಾಗಿ ಬಂಡವಾಳ ಹೂಡಿಕೆ ಸೇರಿದಂತೆ ಹಲವಾರು ಮಹತ್ವದ ವಿಷಯಗಳ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಲಿದ್ದಾರೆ. ಈ ನಡುವೆ ಮೋದಿ ಅವರ ಚೀನಾ ಪ್ರವಾಸದ ಬಗ್ಗೆ ಇಲ್ಲಿನ ಸ್ಥಳೀಯ ಪತ್ರಿಕೆಗಳು 'ಸ್ವಾಗತಾರ್ಹ ಹೆಡ್ ಲೈನ್' ಗಳನ್ನ್ನೇನು ನೀಡಿಲ್ಲ. [ಭಾರತದಲ್ಲಿ ಜಿನ್ ಪಿಂಗ್ : ಮೊದಲ ದಿನದ ಅಪ್ಡೇಟ್ಸ್]

ಚೀನಾ ಜೊತೆಗಿನ ಗಡಿ ವಿವಾದ ಹಾಗೂ ಭದ್ರತೆಗೆ ಸಂಬಂಧಿಸಿದಂತೆ ಚರ್ಚೆ ಆರಂಭಿಸಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೊದಲ ಭೇಟಿಯಲ್ಲೇ 'ಕ್ಷುಲ್ಲಕ ತಂತ್ರಗಾರಿಕೆ' ಮಾಡುತ್ತಿದ್ದಾರೆ ಎಂದು ಚೀನಾದ ಸರಕಾರಿ ಸ್ವಾಮ್ಯದ ಪತ್ರಿಕೆ 'ಗ್ಲೋಬಲ್ ಟೈಮ್ಸ್'ನ ಅಂಕಣಗಾರೊಬ್ಬರು ಟೀಕಿಸಿದ್ದಾರೆ. [ಬಾಪೂ ಸಮಾಧಿಗೆ ನಮಿಸಿದ ಚೀನಾ ಪ್ರಥಮ ದಂಪತಿ]

ಕಮ್ಯುನಿಸ್ಟ್ ಪಕ್ಷದ ಮುಖವಾಣಿ ಗ್ಲೋಬಲ್ ಟೈಮ್ಸ್ ನಲ್ಲಿ ಅಂಕಣ ಬರೆದಿರುವ ಶಾಂಘೈ ಅಕಾಡಮಿ ಆಫ್ ಸೋಷಿಯಲ್ ಸೈನ್ಸ್‌ನ ರಾಜಕೀಯ ವಿಶ್ಲೇಷಕ ಹು ಝಿಯಾಂಗ್ ಅವರು ಮೋದಿ ಪ್ರವಾಸದ ಬಗ್ಗೆ ತಮ್ಮ ಈ ವಾರದ ಅಂಕಣದಲ್ಲಿ ಬರೆದಿದ್ದಾರೆ. [ಸಹಿ ಕಂಡ ಭಾರತ-ಚೀನಾ ದ್ವಿಪಕ್ಷೀಯ ಒಪ್ಪಂದಗಳು]

ಗ್ಲೋಬಲ್ ಟೈಮ್ಸ್ ನಲ್ಲಿ ಅಂಕಣ

ಗ್ಲೋಬಲ್ ಟೈಮ್ಸ್ ನಲ್ಲಿ ಅಂಕಣ

'ಮೋದಿಯವರಲ್ಲಿ ದೂರದೃಷ್ಟಿತ್ವವುಳ್ಳ ನಾಯಕನಿಗಿಂತ ವ್ಯವಹಾರಸ್ಥನ ಗುಣಲಕ್ಷಣಗಳು ಎದ್ದುಕಾಣುತ್ತವೆ. ಇದು ಕಳೆದ ವರ್ಷ ಅವರು ಅನುಸರಿಸಿದ ರಾಜತಾಂತ್ರಿಕ ನಡೆಗಳ ಮೂಲಕ ಸಾಬೀತಾಗಿದೆ ಎಂದಿದ್ದಾರೆ.

ಚೀನಾಡೈಲಿ. ಕಾಂ

ಚೀನಾಡೈಲಿ. ಕಾಂ

India's Prime Minister Modi visits Xi'an ಎಂಬ ಸಾಧಾರಣ ಹೆಡ್ ಲೈನ್ ನೀಡಿದೆ. ಪೂರ್ತಿ ವರದಿ ಇಲ್ಲಿ ಓದಿ

ಸೌಥ್ ಚೀನಾ ಮಾರ್ನಿಂಗ್ ಪೋಸ್ಟ್

ಸೌಥ್ ಚೀನಾ ಮಾರ್ನಿಂಗ್ ಪೋಸ್ಟ್

ಚೀನಾ ಪ್ರವಾಸದಲ್ಲಿ ಮೋದಿ ಯೋಗ ಪವರ್ ಟ್ವಿಸ್ಟ್ ನೀಡಲಿದ್ದಾರೆ ಎಂದಿದೆ. ಹೆಚ್ಚಿನ ಓದಿಗೆ ವೆಬ್ ಲಿಂಕ್

ಸಿಸಿಟಿವಿ.ಕಾಂ

ಸಿಸಿಟಿವಿ.ಕಾಂ

ಕ್ಸಿಯಾನ್ ಗೆ ಬಂದಿಳಿದ ಮೋದಿ, 3 ದಿನಗಳ ಪ್ರವಾಸ ಆರಂಭ ಎಂಬ ಶೀರ್ಷಿಕೆ ನೀಡಿದೆ. ಇನ್ನಷ್ಟು ಓದಿಗೆ ವೆಬ್ ಲಿಂಕ್

ಚೀನಾ.ಆರ್ಗ್.ಸಿಎನ್

ಚೀನಾ.ಆರ್ಗ್.ಸಿಎನ್

ಚೀನಾದ ವಾಯುವ್ಯದ ಶಾನ್ ಕ್ಸಿ ಪ್ರಾಂತ್ಯದ ರಾಜಧಾನಿ ಕ್ಸಿಯಾನ್ ಗೆ ಗುರುವಾರ ಮೋದಿ ಬಂದಿದ್ದಾರೆ. ಅಧ್ಯಕ್ಷ ಜಿನ್ ಪಿಂಗ್ ಊರಲ್ಲಿ ಮೋದಿ ಸಂಚಾರ ಎಂದು ಬರೆಯಲಾಗಿದೆ. ಇನ್ನಷ್ಟು ಓದಿಗೆ ವೆಬ್ ಲಿಂಕ್

ಶಾಂಘೈ ಡೈಲಿ.ಕಾಂ

ಶಾಂಘೈ ಡೈಲಿ.ಕಾಂ

ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಊರಿಗೆ ನರೇಂದ್ರ ಮೋದಿ ಆಗಮನ. ಇನ್ನಷ್ಟು ಓದಿಗೆ ವೆಬ್ ಲಿಂಕ್

ಪೀಪಲ್ಸ್ ಡೈಲಿ

ಪೀಪಲ್ಸ್ ಡೈಲಿ

ಮೋದಿ ಅವರನ್ನು ಸ್ವಾಗತಿಸಲು ಅಧ್ಯಕ್ಷ ಕ್ಸಿ ಬರುತ್ತಿದ್ದಾರೆ ಎಂದು ಶೀರ್ಷಿಕೆ ಇನ್ನಷ್ಟು ಓದಿಗೆ ವೆಬ್ ಲಿಂಕ್

English summary
Prime Minister Narendra Modi kicked off his three-day official trip to China on Thursday. This is his first trip to China as prime minister. PM Modi arrived in the ancient city of Xian, also the hometown of President Xi Xinping. Mr Modi will hold talks with President Xi this afternoon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X