ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಮತ್ತು ನಾನು ಸೋಷಿಯಲ್ ಮೀಡಿಯಾದಲ್ಲಿ ಜಾಗತಿಕ ನಾಯಕರು - ಟ್ರಂಪ್

By Sachhidananda Acharya
|
Google Oneindia Kannada News

ವಾಷಿಂಗ್ಟನ್, ಜೂನ್ 27: 'ನಾವಿಬ್ಬರು ಸಾಮಾಜಿಕ ಜಾಲತಾಣದಲ್ಲಿ ಜಾಗತಿಕ ನಾಯಕರು' ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನರೇಂದ್ರ ಮೋದಿಯವರನ್ನು ಉದ್ದೇಶಿಸಿ ಹೇಳಿದ್ದಾರೆ. ತಮ್ಮ ಕೋಟ್ಯಾಂತರ ಹಿಂಬಾಲಕರನ್ನು ಗಣನೆಗೆ ತೆಗೆದುಕೊಂಡು ಡೊನಾಲ್ಡ್ ಟ್ರಂಪ್ ಈ ಮಾತುಗಳನ್ನು ಹೇಳಿದ್ದಾರೆ.

ಇದೇ ವೇಳೆಗೆ ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ ಭೇಟಿ ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿಯೂ ಟ್ರೆಂಡ್ ಆಗಿದೆ. ಉಭಯ ನಾಯಕರ ಮುಖಾಮುಖಿ ಭೇಟಿ ಟ್ವಿಟ್ಟರಿನಲ್ಲಿ #ModiTrumpMeet ಹ್ಯಾಷ್ ಟ್ಯಾಗ್ ನಲ್ಲಿ ಟ್ರೆಂಡ್ ಆಗಿದೆ.

Modi and I are world leaders in social media - Donald Trump

"ನಾನು ಮಾಧ್ಯಮ, ಅಮೆರಿಕಾದ ಜನತೆ ಮತ್ತು ಭಾರತೀಯ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಮಯತ್ಯು ನಾನು ಸಾಮಾಜಿಕ ಜಾಲತಾಣದಲ್ಲಿ ಜಾಗತಿಕ ನಾಯಕರು ಎಂದು ಘೋಷಿಸಲು ಹೆಮ್ಮೆ ಪಡುತ್ತೇನೆ," ಎಂದು ಟೊನಾಲ್ಡ್ ಟ್ರಂಪ್ ರೋಸ್ ಗಾರ್ಡನ್ ನಲ್ಲಿ ಹೇಳಿದ್ದಾರೆ.

"ನಮಗೆ ನಂಬಿಕೆ ಇದೆ. ನಾವು ನಮ್ಮ ದೇಶಗಳಲ್ಲಿ ನೇರವಾಗಿ ನಾಗರೀಕರ ಅಹವಾಲುಗಳನ್ನು ಚುನಾಯಿತ ಪ್ರತಿನಿಧಿಗಳು ಆಲಿಸುವ ಅವಕಾಶ ಕಲ್ಪಿಸಿದ್ದೇವೆ. ಎರಡೂ ದೇಶಗಳಲ್ಲಿ ಇದು ಪ್ರಯೋಜನಕ್ಕೆ ಬಂದಿದೆ ಎಂದು ನಾನು ಭಾವುಸುತ್ತೇನೆ," ಎಂದು ಟ್ರಂಪ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣಗಳಲ್ಲಿ ಅಸಂಖ್ಯಾತ ಹಿಂಬಾಲಕರನ್ನು ಹೊಂದಿದ್ದಾರೆ. ಟ್ವಿಟ್ಟರಿನಲ್ಲಿ ಟ್ರಂಪ್ ಗೆ 3.28 ಕೋಟಿ ಫಾಲೋವರ್ಸ್ ಇದ್ದರೆ, ಮೋದಿ ಎರಡನೇ ಸ್ಥಾನದಲ್ಲಿದ್ದು 3.1 ಕೋಟಿ ಹಿಂಬಾಲಕರನ್ನು ಹೊಂದಿದ್ದಾರೆ. ಇನ್ನು ಫೇಸ್ಬುಕ್ ವಿಚಾರಕ್ಕೆ ಬಂದರೆ ಟ್ರಂಪ್ ಗೆ 2.36 ಕೋಟಿ ಫಾಲೋವರ್ಸ್ ಹಾಗೂ ಮೋದಿಗೆ 4.18 ಕೋಟಿ ಹಿಂಬಾಲಕರಿದ್ದಾರೆ.

English summary
“I’m proud to announce to the media, to the American people, and to the Indian people, that Prime Minister Modi and I are world leaders in social media. We’re believers. Giving the citizens of our countries the opportunity to hear directly from their elected officials, and for us to hear directly from them. I guess it’s worked very well in both cases” said Donald Trump in his joint statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X