ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭುವನ ಸುಂದರಿ ಸ್ಪರ್ಧೆಯಲ್ಲಿ 'ಹಾರ್ವೆ' ಮಾಡಿದ ಎಡವಟ್ಟು!

|
Google Oneindia Kannada News

ಲಾಸ್ ವೇಗಾಸ್, ಡಿಸೆಂಬರ್, 21: ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಎಡವಟ್ಟಾಗಿದೆ. ಸುರಸುಂದರಿಯಾಗಿ ಹೊರಹೊಮ್ಮಿದ್ದ ಸ್ಪರ್ಧಾಳುವಿಗೆ ಹಾಕಬೇಕಿದ್ದ ಕಿರೀಟವನ್ನು ಮತ್ತೊಬ್ಬರಿಗೆ ಹಾಕಿದ್ದು ವಿವಾದ ಎಬ್ಬಿಸಿದೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಸಹ #MissUniverse2015ಟ್ರೆಂಡಿಂಗ್. ಭುವನ ಸುಂದರಿ ಕಿರೀಟಕ್ಕಾಗಿ ಅಮೆರಿಕಾ, ಕೊಲಂಬಿಯಾ, ರಷ್ಯಾ, ಭಾರತ, ಆಫ್ರಿಕಾ ಸೇರಿದಂತೆ ಸುಮಾರು 80 ದೇಶಗಳ ಸುಂದರಿಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಇದಕ್ಕೆಲ್ಲ ಕಾರಣ ಮಾಡಿಕೊಟ್ಟವರು ಅಮೆರಿಕದ ಖ್ಯಾತ ಕಾಮಿಡಿಯನ್ ಸ್ಟೀವ್ ಹಾರ್ವೆ. ವಿಜೇತರ ಹೆಸರನ್ನು ತಪ್ಪಾಗಿ ಹೇಳಿದ್ದೇ ಗೊಂದಲಕ್ಕೆ ದಾರಿಮಾಡಿಕೊಟ್ಟಿದೆ. ನಂತರ ಹಾರ್ವೆ ಕ್ಷಮಾಪಣೆ ಕೇಳಿದರೂ ಅಷ್ಟು ಹೊತ್ತಿಗೆ ಎಲ್ಲ ಮುಗಿದು ಹೋಗಿತ್ತು.

ಮೊದಲು ಮಿಸ್ ಕೊಲಂಬಿಯಾದ ಗ್ಯುಟಿರ್ರೆಝಾ ಅವರನ್ನು 2015ರ ಮಿಸ್ ಯುನಿವರ್ಸ್ ಎಂದು ಘೋಷಣೆ ಮಾಡಲಾಯಿತು. ಆಕೆಗೆ ಕಿರೀಟವನ್ನು ತೊಡಿಸಲಾಯಿತು. ಆಕೆ ಸಂಭ್ರಮದಿಂದ ಕುಣಿದಾಡಿದ್ದು ಆಯಿತು. ಆದರೆ ಇದಾದ ಮೇಲೆ ಮಿಸ್ ಫಿಲಿಪೈನ್ಸ್ ಸುಂದರಿ ಪಿಯಾ ಅಲೋಂಜೋ ಅವರನ್ನು ವಿನ್ನರ್ ಎಂದು ಘೋಷಣೆ ಮಾಡಲಾಯಿತು.[ಭದ್ರಾವತಿಯ ಆಶಾ ಭಟ್ ಜಗಮೆಚ್ಚಿದ ಸುಂದರಿ]

ಸಾಮಾಜಿಕ ತಾಣದಲ್ಲಿ ಇದು ಜೋಕ್ ಗಳನ್ನು ಹುಟ್ಟುಹಾಕಿದೆ. ಕಿರೀಟವನ್ನು ಮೊದಲ ರನ್ನರ್ ಅಪ್ ಗೆ ನೀಡಿಯೂ ಆಗಿತ್ತು. ನಂತರ ಇಬ್ಬರು ಸುಂದರಿಯರು ಕ್ಷಮಾಪಣೆಯನ್ನು ಕೇಳಿದರು. ಫಿಲಿಪೈನ್ಸ್ ಅಭಿಮಾನಿಗಳು ಇದರಿಂದ ಕೊಂಚ ಉದ್ವೇಗಕ್ಕೆ ಒಳಗಾಗಿದ್ದು ಕಂಡು ಬಂತು. ಒಟ್ಟಿನಲ್ಲಿ ಒಮ್ಮೆ ನಗೆಪಾಟಲಿಗೆ ಈಡಾದ ಭುವನ ಸುಂದರಿ ಸ್ಪರ್ಧೆ ಸುತ್ತ ನೀವು ಒಂದು ರೌಂಡ್ ಹಾಕಿಕೊಂಡು ಬನ್ನಿ....ಪುಣ್ಯಾತ್ಮ ಸ್ಟೀವ್ ಹಾರ್ವೆ ಅದ್ಯಾಕೆ ತಪ್ಪು ಹೆಸರು ಹೇಳಿದನೋ ಅವನನ್ನೇ ಕೇಳಬೇಕು!

ರನ್ನರ್ ಅಪ್ ಗೆ ಕಿರೀಟ

ರನ್ನರ್ ಅಪ್ ಗೆ ಕಿರೀಟ

ಮೊದಲು ಮಿಸ್ ಕೊಲಂಬಿಯಾ ಗ್ಯುಟಿರ್ರೆಝಾ ಅವರನ್ನು ಮಿಸ್ ಯೂನಿವರ್ಸ್ ಎಂದು ಘೋಷಣೆ ಮಾಡಲಾಯಿತು. ಆದರೆ ನಂತರ ಆಕೆ ಕಿರೀಟವನ್ನು ವಾಪಸ್ ನೀಡಬೇಕಾಯಿತು

ನಿಜವಾದ ಮಿಸ್ ಯುನಿವರ್ಸ್

ನಿಜವಾದ ಮಿಸ್ ಯುನಿವರ್ಸ್

ಇದಾದ ಮೇಲೆ ಮಿಸ್ ಫಿಲಿಪೈನ್ಸ್ ಸುಂದರಿ ಪಿಯಾ ಅಲೋಂಜೋ ಅವರನ್ನು ವಿನ್ನರ್ ಎಂದು ಘೋಷಣೆ ಮಾಡಲಾಯಿತು. ಈಕೆ 2015ರ ಭುವನ ಸುಂದರಿಯಾಗಿ ಹೊರಹೊಮ್ಮಿದಳು.

ಸಮಾಧಾನ ಹೇಳಿದ ಇತರ ಸ್ಪರ್ಧಿಗಳು

ಸಮಾಧಾನ ಹೇಳಿದ ಇತರ ಸ್ಪರ್ಧಿಗಳು

ಪ್ರಶಸ್ತಿ ಅಥವಾ ಕಿರೀಟ ಬರದಿದ್ದರೂ ಬೇಸರವಾಗಲ್ಲ. ಆದರೆ ಒಮ್ಮೆ ನೀಡಿ ನಂತರ ನೀನು ಜಯಶಾಲಿಯಲ್ಲ ಅಂದರೆ ಎಂಥವರಿಗೂ ಬೇಸರವಾಗುತ್ತದೆ. ಕೊಲಂಬಿಯಾದ ಸುಂದರಿಯನ್ನು ಸಮಾಧಾನಪಡಿಸಿದ ಇತರ ಸ್ಪರ್ಧಿಗಳು.

ವಿಡಿಯೋ ನೋಡಿಕೊಂಡು ಬನ್ನಿ

ಮಿಸ್ ಯುನಿವರ್ಸ್ ಸ್ಪರ್ಧೆಯ ಫೈನಲ್ ನಲ್ಲಿ ನಡೆದ ಪ್ರಮಾದದ ವಿಡಿಯೋ ನೋಡಿಕೊಂಡು ಬನ್ನಿ..

ಕ್ಷಮೆ ಕೇಳಲು ಸಮಯ ಮೀರಿದೆ

ಕ್ಷಮಾಪಣೆ ಕೇಳಲು ಸಮಯ ಮೀರಿದ. ಆದರೆ ಏನೂ ಮಾಡುವಂತಿಲ್ಲ. ಸ್ವತಃ ಹಾರ್ವೆ ಹೇಳಿದ ಮಾತುಗಳು ಟ್ವಿಟ್ಟರ್ ನಲ್ಲಿ ಮೂಡಿದ್ದು ಹೀಗೆ.

ಪ್ರತಿಕ್ರಿಯೆ ಹೀಗಿತ್ತಾ!

ಮೊದಲಿ ಕಿರೀಟ ಕೈ ತಪ್ಪಿ ಹೋಯಿತೆಂದು ನೊಂದುಕೊಂಡಿದ್ದ ಫಿಲಿಪೈನ್ಸ್ ಸುಂದರಿಗೆ ಪ್ರಶಸ್ತಿ ಒಲಿದ ಮೇಲೆ ಈ ರೀತಿಯ ಪ್ರತಿಕ್ರಿಯೆ ನೀಡಿದಳೆ!

ಈತನೇ ಸ್ಟೀವ್ ಹಾರ್ವೆ

ವಿಜೇತರ ಹೆಸರನ್ನು ತಪ್ಪಾಗಿ ಹೇಳಿ ಕೊನೆಗೆ ಕ್ಷಮೆ ಕೇಳಿದ ಸ್ಟೀವ್ ಹಾರ್ವೆ ಇವರೆ. ಪ್ರಮಾದಕ್ಕೆ ಎಡೆಮಾಡಿಕೊಟ್ಟು ನಂತರ ಕ್ಷಮೆ ಕೇಳಿದ ಹಾರ್ವೆ.

English summary
Shock and disbelief have erupted online after the wrong Miss Universe winner was crowned. Miss Colombia Ariadna Gutierrez was announced winner of the 2015 beauty pageant before organisers revealed she was actually the first runner-up. Miss Philippines Pia Alonzo Wurtzbach was later declared the winner. Here some interesting Tweets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X