ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟರ್ಕಿ: ಸರಣಿ ಸ್ಫೋಟಕ್ಕೆ ತತ್ತರಿಸಿದ ಶಾಂತಿಯುತ ಮೆರವಣಿಗೆ

By Mahesh
|
Google Oneindia Kannada News

ಅಂಕಾರಾ, ಅ.10: ಟರ್ಕಿಯ ರಾಜಧಾನಿ ಅಂಕಾರಾದಲ್ಲಿ ಆಯೋಜನೆಗೊಂಡಿದ್ದ ಶಾಂತಿಯುತ ಮೆರವಣಿಗೆಯನ್ನು ಗುರಿಯನ್ನಾಗಿಸಿಕೊಂಡು ನಡೆಸಲಾದ ಬಾಂಬ್ ಸ್ಫೋಟಕ್ಕೆ 20ಕ್ಕೆ ಹೆಚ್ಚು ಜನ ಬಲಿಯಾಗಿದ್ದಾರೆ. 12ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಅಂಕಾರಾದ ರೈಲು ನಿಲ್ದಾಣದ ಬಳಿ ಮತ್ತೊಂದು ಬಾಂಬ್ ಸ್ಫೋಟದಿಂದ ಜನತೆ ತತ್ತರಿಸಿದ್ದಾರೆ. ಇದೊಂದು ಆತ್ಮಾಹುತಿ ಬಾಂಬ್ ದಾಳಿಯಾಗಿದೆ.ಎರಡು ಸ್ಫೋಟಕ್ಕೂ ಇರಾಕಿ ಉಗ್ರ ಸಂಘಟನೆ ಐಎಸ್ಐಎಸ್ ಕಾರಣ ಎಂದು ಅಂದಾಜಿಸಲಾಗಿದೆ.

Many killed in Turkey twin blasts

ಐಎಸ್ಐಎಸ್ ವಿರುದ್ಧ ತನ್ನ ನಿಲುವು ಪ್ರಕಟಿಸದಿದ್ದ ಟರ್ಕಿ, ಇತ್ತೀಚೆಗೆ ಐಎಸ್ಐಎಸ್ ವಿರುದ್ಧ ಹೋರಾಟಕ್ಕೆ ಯುಎಸ್ ಪಡೆಗಳಿಗೆ ನೆರವು ನೀಡುವುದಾಗಿ ಘೋಷಿಸಿತ್ತು.

ಅತ್ತ ರಷ್ಯಾದ ಪಡೆಗಳು ಇರಾಕಿ ಉಗ್ರ ಸಂಘಟನೆಗಳ ಮೇಲೆ ವೈಮಾನಿಕ ದಾಳಿ ನಡೆಸಿ ನೂರಾರು ಉಗ್ರರನ್ನು ಕೊಂದು ಹಾಕುತ್ತಿದೆ.

ಸರ್ಕಾರದ ವಿರುದ್ಧ ಕುರ್ದಿಶ್ ಪ್ರತ್ಯೇಕಾವಾದಿಗಳು ಶನಿವಾರ ಬೆಳಗ್ಗೆ ಶಾಂತಿಯುತ ಪ್ರತಿಭಟನಾ ಮೆರವಣಿಗೆ ಆರಂಭಕ್ಕೂ ಮುನ್ನ ಬಾಂಬ್ ಸ್ಫೋಟ ಸಂಭವಿಸಿದೆ.

ಸ್ಫೋಟದ ನಂತರ ರಸ್ತೆಯಲ್ಲಿ ಬಿದ್ದಿದ್ದ ರಕ್ತಸಿಕ್ತ ಶವಗಳ ಮೇಲೆ ಪಾರ್ಟಿಯ ಬಾವುಟಗಳನ್ನು ಹೊದೆಸಲಾಗಿದೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

English summary
At least 20 people were killed and dozens more injured on Saturday when two explosions rocked the Turkish capital of Ankara, a media report said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X