ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮ್ಯಾಂಚೆಸ್ಟರ್ ಸ್ಫೋಟ : ಎದೆ ನಡುಗಿಸುವ ಭೀಕರ ವಿಡಿಯೋ

ಕೊಂಚಕಾಲ ಸಂಗೀತ ಕೇಳಿ ಮನಸ್ಸನ್ನು ತಿಳಿ ಮಾಡಿಕೊಳ್ಳುವುದಕ್ಕೆಂದು ತೆರಳಿದ್ದ ಹಲವರು, ತಮ್ಮ ಆತ್ಮೀಯರ ಕಳೇಬರದೊಂದಿಗೆ ಮನೆಗೆ ವಾಪಸ್ಸಾಗಬೇಕಾದ ಪರಿಸ್ಥಿತಿ ಎದುರಾಗಿದ್ದುಮ್ಯಾಂಚೆಸ್ಟರ್ ಅರೇನಾದ ದುರಂತವೇ ಸರಿ.

|
Google Oneindia Kannada News

ಮ್ಯಾಂಚೆಸ್ಟರ್ (ಇಂಗ್ಲೆಂಡ್), ಮೇ 23: ಆಗಷ್ಟೇ ಸಂಗೀತ ಸುಧೆಯಲ್ಲಿ ಮೈಮರೆತಿದ್ದವನಿಗೆ, ದೊಡ್ಡ ಶಬ್ದ ಕೇಳಿದ್ದಷ್ಟೇ ನೆನಪು. ಅದಾಗಿ ಎಷ್ಟೋ ಸಮಯದ ನಂತರ ಕಣ್ಣು ಬಿಟ್ಟು, ಅಕ್ಕ ಪಕ್ಕ ನೋಡಿದರೆ ಅಲ್ಲಿ ಜನರಿಲ್ಲ... ಬರೀ ದೇಹಗಳಷ್ಟೆ!

ಯಾವುದೋ ಯುದ್ಧ ಮುಗಿದ ಮೇಲೆ ಉಳಿವ ರಕ್ತಸಿಕ್ತ ಕಾಯಗಳಂತೆ ಬಿದ್ದಿದ್ದ ಅವುಗಳಲ್ಲಿ ಉಸಿರಾಡುತ್ತಿದ್ದವೆಷ್ಟೊ, ಉಸಿರು ಮರೆತಿದ್ದವೆಷ್ಟೋ! ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿಗಳು ಬಂದು ನನ್ನನ್ನೆತ್ತಿ ಹಾಸಿಗೆಯಲ್ಲಿ ಮಲಗಿಸಿಕೊಂಡು ಕರೆದೊಯ್ದಾಗಲೇ ತಿಳಿದಿದ್ದು ಇದು ಕನಸಲ್ಲ, ವಾಸ್ತವ ಎಂದು!

ಇದು ಇಂಗ್ಲೆಂಡಿನ ಮ್ಯಾಚೆಸ್ಟರ್ ಅರೇನಾದಲ್ಲಿ ನಡೆದ ಬಾಂಬ್ ಸ್ಫೋಟದ ಸಂತ್ರಸ್ತ ಆಂಡಿ ಎನ್ನುವವರ ಮಾತು. ಇಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ ಕುರಿತು ಪ್ರತ್ಯಕ್ಷದರ್ಶಿಗಳ, ಸಂತ್ರಸ್ತರ ಕಹಿ ಅನುಭವಗಳನ್ನು ಕೇಳಿದರೆ ಕರುಳು ಕಿವುಚುತ್ತೆ.

ಕೊಂಚಕಾಲ ಸಂಗೀತ ಕೇಳಿ ಮನಸ್ಸನ್ನು ತಿಳಿ ಮಾಡಿಕೊಳ್ಳುವುದಕ್ಕೆಂದು ತೆರಳಿದ್ದ ಹಲವರು, ತಮ್ಮ ಆತ್ಮೀಯರ ಕಳೇಬರದೊಂದಿಗೆ ಮನೆಗೆ ವಾಪಸ್ಸಾಗಬೇಕಾದ ಪರಿಸ್ಥಿತಿ ಎದುರಾಗಿದ್ದು ದುರಂತವೇ ಸರಿ.[ಮ್ಯಾಂಚೆಸ್ಟರ್ ಅರೇನಾದಲ್ಲಿ ಬಾಂಬ್ ಸ್ಫೋಟ, ಕನಿಷ್ಠ 19 ಮಂದಿ ಸಾವು]

ನಿನ್ನೆ ಬಾಂಬಿನ ಸದ್ದು, ನೂರಾರು ಜನರ ಆಕ್ರಂದನ, ಸಾವು-ನೋವಿನಿಂದ ತುಂಬಿದ್ದ ಮ್ಯಾಂಚೆಸ್ಟರ್ ಅರೇನಾದಲ್ಲಿ ಇಂದು ಸ್ಮಶಾನ ಮೌನ. ಅಳಿದವರ ಕಳೇಬರವನ್ನು ಉಳಿದವರು ಗುರುತಿಸುತ್ತಿರುವುದಲ್ಲದೆ ಬೇರೆ ಚಿತ್ರ ಸದ್ಯಕ್ಕೆ ಅಲ್ಲಿಲ್ಲ!

ನಿನ್ನೆ (ಮೇ 22, ಭಾರತೀಯ ಕಾಲಮಾನದ ಪ್ರಕಾರ ಇಂದು ಬೆಳಗ್ಗೆ) ಸಂಗೀತ ಕಾರ್ಯಕ್ರಮಕ್ಕೆಂದು ಮ್ಯಾಂಚೆಸ್ಟರ್ ಅರೇನಾಕ್ಕೆ ತೆರಳಿದ್ದ ಸುಮಾರು 20,000 ಕ್ಕೂ ಹೆಚ್ಚು ಜನರಲ್ಲಿ ಹಲವರು ಇನ್ನೂ ಪತ್ತೆಯಾಗಿಲ್ಲ. ಅವರಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಾರ್ಥನೆ ಶುರುವಾಗಿದೆ. ಹಲವರು ಕಾರ್ಯಕ್ರಮಕ್ಕೆ ತೆರಳಿದ್ದ ತಮ್ಮ ಕುಟುಂಬ ಸದಸ್ಯರ, ಸಂಬಂಧಿಕರ, ಸ್ನೇಹಿತರ ಫೋಟೊಗಳನ್ನುಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿ ಅವರ ಕುರಿತು ಮಾಹಿತಿ ಸಿಕ್ಕರೆ ತಿಳಿಸುವಂತೆ ವಿನಂತಿಸಿದ್ದಾರೆ.[ಐಎಸ್ ಐಎಸ್ ನಿಂದ ಇಂಗ್ಲೆಂಡ್ ದಾಳಿಯ ಮೃತ್ಯು ಕೇಕೆ ಸಂದೇಶ]

ವಿಡಿಯೋಗಳಲ್ಲಿ ಮ್ಯಾಂಚೆಸ್ಟರ್ ಅರೇನಾ ಘಟನೆ

ಬಾಂಬ್ ಸ್ಫೋಟದ ಶಬ್ದ ಕೇಳುತ್ತಲೇ ದಿಕ್ಕಾಪಾಲಾಗಿ ಓಡುತ್ತಿರುವ ಜನರ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಾಂಬ್ ಸ್ಫೋಟದ ತೀವ್ರತೆಗೆ ಸಾಕ್ಷಿಯಾಗಿದೆ.

ಭಯಭೀತರಾದ ಜನರು

ಬಾಂಬ್ ಸ್ಫೋಟಕ್ಕೂ ಕೆಲ ಕ್ಷಣದ ಮೊದಲು ತೆಗೆದ ವಿಡಿಯೋ ಇದು. ಈ ವಿಡಿಯೋದ ಕೊನೆಯಲ್ಲೂ, ಬಾಂಬ್ ಸ್ಫೋಟದ ಸದ್ದಿನಿಂದ ಭಯಭೀತರಾದ ಜನರ ಆಕ್ರಂದನ ಕಾಣಬಹುದು.

ವೈರಲ್ ಆಗಿದೆ ದುರಂತದ ವಿಡಿಯೋ

ಬಾಂಬ್ ಸ್ಫೋಟದದ ನಂತರ ಜನರು ತಮ್ಮ, ತಮ್ಮ ಆತ್ಮೀಯರ ಪ್ರಾಣ ಉಳಿಸಿಕೊಳ್ಳಲು ಓಡುತ್ತಿರುವ ದೃಶ್ಯ ಹೃದಯ ತಟ್ಟುವಂತಿದೆ.

ನನ್ನ ಸ್ನೇಹಿತೆ ಸುರಕ್ಷಿತವಾಗಿದ್ದಾಳಾ?

ಇವಳು ನನ್ನ ಸ್ನೇಹಿತೆ. ನಿನ್ನೆ ಮ್ಯಾಂಚೆಸ್ಟರ್ ಅರೇನಾ ಗೆ ತೆರಳಿದ್ದಳು. ಆದರೆ ಫೋನ್ ಮಾಡಿದರೆ ಆಕೆ ಸಿಕ್ಕುತ್ತಿಲ್ಲ, ಆಕೆಯ ಕಡೆಯಿಂದ ಯಾವುದೇ ಪ್ರತಿಕ್ರಿಯೆಯಿಲ್ಲ. ಆಕೆ ಕ್ಷೇಮವಾಗಿದ್ದಾಳೋ ಇಲ್ಲವೋ, ಮಾಹಿತಿ ಸಿಕ್ಕರೆ ದಯವಿಟ್ಟು ತಿಳಿಸಿ ಎಂದು, ತನ್ನ ಸ್ನೇಹಿತೆಯ ಫೋಟೋ ಹಾಕಿ, ಫ್ರೈಡಾ ಎಂಬುವವರು ಮನವಿ ಮಾಡಿದ್ದಾರೆ.

ಮಾಹಿತಿ ಸಿಗುವವರೆಗೂ ರೀಟ್ವೀಟ್ ಮಾಡಿ

ಬಾಂಬ್ ಸ್ಫೋಟದಲ್ಲಿ ಕಾಣೆಯಾದ ಹಲವರ ಫೋಟೋಗಳನ್ನು ಅಪ್ ಲೋಡ್ ಮಾಡಿರುವ ಕೀ ಎನ್ನವವರು ಇವರೆಲ್ಲರೂ ಸಿಕ್ಕಿದ್ದಾರೆ ಎಂಬ ಮಾಹಿತಿ ಸಿಗುವವರೆಗೂ ಈ ಸಂದೇಶವನ್ನು ಎಲ್ಲೆಡೆ ಕಳುಹಿಸಿ ಎಂದು ಕೋರಿದ್ದಾರೆ.

ಈ ಜೋಡಿಯ ಕ್ಷೇಮವಾಗಿದ್ದಾರಾ?

ಕ್ಲೋ ರುದರ್ಫೋರ್ಡ್ ಮತ್ತು ಲಿಯಾಮ್ ಕರಿ ಎಂಬ ಜೋಡಿಯ ಚಿತ್ರವನ್ನೂ ಹಾಕಿ, ಇವರ ಬಗ್ಗೆ ಮಾಹಿತಿ ಸಿಕ್ಕರೆ ತಿಳಿಸುವಂತೆ ಕೋರಲಾಗಿದೆ.

ಸಹಾಯವಾಣಿ

ತಮ್ಮ ಮಕ್ಕಳನ್ನು, ಆತ್ಮೀಯರನ್ನು ಹುಡುಕಾಡುತ್ತಿರುವವರಿಗಾಗಿ ಸಹಾಯವಾಣಿ ಇಲ್ಲಿದೆ. ದಯವಿಟ್ಟು ರೀಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಿ ಎಂದು ರಚೆಲ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

English summary
At least 19 persons have died and 50 injured after multiple blasts hit the Manchester Arena in England during a concert. The police are not ruling out the role of a suicide bomber. Here are the twitter statements about Manchester blast.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X