ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಟ್ರೇಲಿಯಾದ 29ನೇ ಪ್ರಧಾನಿಯಾಗಿ ಮಾಲ್ಕಂ ಅಧಿಕಾರ ಸ್ವೀಕಾರ

By Mahesh
|
Google Oneindia Kannada News

ಕ್ಯಾನ್ ಬೆರಾ, ಸೆ. 15: ಆಸ್ಟ್ರೇಲಿಯಾದಲ್ಲಿ ನಡೆದ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಆಂತರಿಕ ಚುನಾವಣೆಯಲ್ಲಿ ಹಾಲಿ ಪ್ರಧಾನಿ ಟೋನಿ ಅಬೊಟ್ ಅವರನ್ನು ಸೋಲಿಸಿ ಮಾಲ್ಕಂ ಟರ್ನ್ಸ್ ಬುಲ್ಸ್ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ.

ಸೋಮವಾರ ನಡೆದ ಚುನಾವಣೆಯಲ್ಲಿ ಮಾಲ್ಕಂ ಟರ್ನ್‌ಬುಲ್ಸ್ ವಿರುದ್ಧ ಅಬೋಟ್ ಸೋತಿದ್ದ ಅಬೊಟ್ ಅವರು ಅಧಿಕಾರಕ್ಕೇರಿದ ಕೇವಲ ಎರಡು ವರ್ಷಗಳ ಅವಧಿಯಲ್ಲಿಯೇ ಪ್ರಧಾನಿ ಪಟ್ಟವನ್ನು ತ್ಯಜಿಸಬೇಕಾಯಿತು. ಗವರ್ನರ್ ಜನರಲ್ ಪೀಟರ್ ಕೊಸ್ ಗ್ರೋವ್ ಅವರು ಮಾಲ್ಕಂ ಅವರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ದೇಶದ 29ನೇ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ 60 ವರ್ಷ ವಯಸ್ಸಿನ ಮಾಲ್ಕಂ ಅವರು ಹೊಸ ಮಾದರಿಯ ಕನ್ಸರ್ವೇಟಿವ್ ಆಡಳಿತವನ್ನು ನೀಡುವ ಭರವಸೆ ನೀಡಿದ್ದಾರೆ. ಮಲ್ಟಿ ಮಿಲಿಯನೇರ್, ಮಾಜಿ ಬ್ಯಾಂಕರ್ ಟರ್ನ್ ಬುಲ್ ಅವರಿಗೆ ವಿದೇಶಾಂಗ ಸಚಿವರಾದ ಜೂಲಿ ಬಿಷಪ್ ಅವರ ಬೆಂಬಲವೂ ಸಿಕ್ಕಿದೆ.

Malcom Turnbull
ರಾಜಕೀಯ ಅಸ್ಥಿರತೆ: ಮಾಜಿ ಲಿಬರಲ್ ಪಾರ್ಟಿ ನಾಯಕ ಹಾಗೂ ಸಂಪರ್ಕ ಖಾತೆ ಸಚಿವ ಮಾಲ್ಕಂ ಟರ್ನ್‌ಬುಲ್‌ರನ್ನು ಅಬೊಟ್‌ರ ಸ್ಥಾನಕ್ಕೆ ಬದಲಾಯಿಸುವ ಬಗ್ಗೆ ನಡೆದ ಚುನಾವಣೆಯಲ್ಲಿ ಅಬೊಟ್ 54-44 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.

2 ವರ್ಷಗಳ ಕನ್ಸರ್ವೇಟಿವ್ ಸಮ್ಮಿಶ್ರ ಸರಕಾರದಲ್ಲಿ ಉಂಟಾದ ನಾಯಕತ್ವ ಬದಲಾವಣೆಯು ಆಸ್ಟ್ರೇಲಿಯಾದಲ್ಲಿ ತೀವ್ರ ರಾಜಕೀಯ ಸಂಚಲನಕ್ಕೆ ಕಾರಣವಾಗಿತ್ತು. 25 ವರ್ಷಗಳ ಸತತ ಆರ್ಥಿಕ ಅಭಿವೃದ್ಧಿಯ ಹೊರತಾಗಿಯೂ ನಾಯಕತ್ವ ಬದಲಾವಣೆಯು ಆಸ್ಟ್ರೇಲಿಯಾದಲ್ಲಿ ಮುಂದುವರಿಯುತ್ತಿರುವ ರಾಜಕೀಯ ಅಸ್ಥಿರತೆಗೆ ಸಾಕ್ಷಿಯಾಗಿದೆ.

ಹೊಸ ನಾಯಕತ್ವದ ಹಿನ್ನೆಲೆಯಲ್ಲಿ ಸಂಪುಟದಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆಯಿದೆ. ಟರ್ನ್‌ಬುಲ್‌ರ ವಿರುದ್ಧ ಅಬೊಟ್‌ರಿಗೆ ಬಹಿರಂಗವಾಗಿಯೇ ಬೆಂಬಲ ಘೋಷಿಸಿದ್ದ ಸಚಿವ ಜೋ ಹ್ಯಾಕಿ, ಹಣಕಾಸು ಸಚಿವ ಮಥಿಯಾಸ್ ಕೊರ್ಮಾನ್, ರಕ್ಷಣಾ ಸಚಿವ ಕೆವಿನ್ ಆಅಂಡ್ರೂಸ್ ಹಾಗೂ ಉದ್ಯೋಗ ಸಚಿವ ಎರಿಕ್ ಅಬ್ಟೆಝ್‌ರ ತಲೆದಂಡವಾಗುವ ಸಾಧ್ಯತೆ ಹೆಚ್ಚಿದೆ.

ಭಾರತಕ್ಕೆ ಯುರೇನಿಯಂ ಮಾರಾಟ ಮಾಡಲು ಈ ಹಿಂದಿನ ಪ್ರಧಾನಿ ಅಬೊಟ್ ಅವರು ಒಪ್ಪಂದ ಮಾಡಿಕೊಂಡಿದ್ದರು. ಸೆಪ್ಟೆಂಬರ್ 2014ರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಟೋನಿ ಅವರು ಡೀಲ್ ಗೆ ಸಹಿ ಹಾಕಿದ್ದರು. ಈ ಬಗ್ಗೆ ಟರ್ನ್ ಬುಲ್ ಯಾವ ನಿರ್ಣಯ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ. (ಪಿಟಿಐ)

English summary
Malcolm Turnbull was on Tuesday(Sept 15) sworn in as Australia’s new Prime Minister, becoming the country’s fifth premier in eight years after an internal revolt in the ruling Liberal Party forced Tony Abbott to quit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X