ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ದಾಳಿಗೆ ಬೆಚ್ಚಿದ ಲಂಡನ್, ಹೈ ಅಲರ್ಟ್ ಘೋಷಣೆ!

ಲಂಡನ್ನಿನ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಉಗ್ರರ ದಾಳಿ, 7 ಮಂದಿ ಸಾವು, ಹಲವಾರು ಮಂದಿಗೆ ಗಾಯ, ಲಂಡನ್ ನಗರದಾದ್ಯಂತ ಹೈ ಅಲರ್ಟ್ ಘೋಷಣೆ

By ವಿಕಾಸ್ ನಂಜಪ್ಪ
|
Google Oneindia Kannada News

ಲಂಡನ್, ಜೂನ್ 04: ಲಂಡನ್ನಿನ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಉಗ್ರರ ದಾಳಿ ಸಂಭವಿಸಿದ್ದು, 7 ಮಂದಿ ಸತ್ತು, ಹಲವಾರು ಮಂದಿಗೆ ಗಾಯಗಳಾಗಿವೆ.

ಶನಿವಾರ(ಜೂನ್ 03) ರಾತ್ರಿ ನಡೆದ ಈ ದುರ್ಘಟನೆ ಬಳಿಕ ಲಂಡನ್ ನಗರದಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಉಗ್ರರನ್ನು ಸದೆಬಡಿಯಲಾಗುವುದು ಎಂದು ಪ್ರಧಾನಿ ಥೆರೆಸಾ ಮೇ ಹೇಳಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯ ಎಜ್ ಬಾಸ್ಟನ್ ನಲ್ಲಿ ಭಾನುವಾರ(ಜೂನ್ 04) ಮಧ್ಯಾಹ್ನ 3 ಗಂಟೆ(ಭಾರತೀಯ ಕಾಲಮಾನ ಪ್ರಕಾರ) ಗೆ ನಿಗದಿಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

London terror attack : Potential act of terror says May as Britain is hit again

ಲಂಡನ್ನಿನ ಬರೋ, ಲಂಡನ್ ಬ್ರಿಡ್ಜ್, ದಿ ವಾಕ್ಸ್ ಹಾಲ್ ಪ್ರದೇಶದಲ್ಲಿ ಉಗ್ರರ ದಾಳಿ ನಡೆದಿದೆ. ಪಾದಚಾರಿಗಳ ಮೇಲೆ ವಾಹನದಿಂದ ಡಿಕ್ಕಿ ಹೊಡೆಯಲಾಗಿದೆ. ಇನ್ನೊಂದೆಡೆ 'ಒಂಟಿ ತೋಳ ದಾಳಿ' ಮಾದರಿಯಲ್ಲಿ ಸಾರ್ವಜನಿಕರಿಗೆ ಚಾಕುವಿನಿಂದ ಇರಿದು ಕೊಲ್ಲಲಾಗಿದೆ. ಇದೆಲ್ಲವೂ ಇರಾಕಿ ಉಗ್ರ ಸಂಘಟನೆ ಐಎಸ್ಐಎಸ್ ಮಾದರಿಯ ದಾಳಿಗಳಾಗಿವೆ.

ಹೈ ಅಲರ್ಟ್ : ಲಂಡನ್ ನಗರದೆಲ್ಲೆಡೆ ಹೈ ಅಲರ್ಟ್ ಘೋಷಿಸಲಾಗಿದೆ. ಇದೊಂದು ಭಯೊತ್ಪಾದನಾ ಕೃತ್ಯವಾಗಿದ್ದು, ಉಗ್ರರು ದಾಳಿ ನಡೆಸಿದದ ಮೂರು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ದಾಳಿ ನಡೆಸಿದ್ದ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ನಡೆದಿದೆ ಎಂದು ಪ್ರಧಾನಿ ಥೆರೆಸಾ ಮೇ ಹೇಳಿದ್ದಾರೆ.

English summary
Scotland Yard and emergency services responded to three incidents on London Bridge and in nearby Borough Market and Vauxhall as multiple casualties were feared on Saturday night. Prime Minister Theresa May said the incident on London Bridge was being treated as a “potential act of terrorism”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X