ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್ ದಾಳಿ ಇಸ್ಲಾಮಿಕ್ ಉಗ್ರರ ಕೃತ್ಯ

ಬ್ರಿಟನ್ ಪಾರ್ಲಿಮೆಂಟ್ ಮೇಲೆ ನಡೆದ ದಾಳಿ ಇಸ್ಲಾಮಿಕ್ ಉಗ್ರರ ಕೃತ್ಯ ಎಂದು ನಂಬಿರುವುದಾಗಿ ಅಲ್ಲಿನ ಪೊಲೀಸರು ಹೇಳಿದ್ದಾರೆ.

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮಾರ್ಚ್ 23: ಬ್ರಿಟನ್ ಪಾರ್ಲಿಮೆಂಟ್ ಮೇಲೆ ನಡೆದ ದಾಳಿ ಇಸ್ಲಾಮಿಕ್ ಉಗ್ರರ ಕೃತ್ಯ ಎಂದು ನಂಬಿರುವುದಾಗಿ ಅಲ್ಲಿನ ಪೊಲೀಸರು ಹೇಳಿದ್ದಾರೆ.

ದಾಳಿಯಲ್ಲಿ ಟ್ರೆವೊರ್ ಬ್ರೂಕ್ ಅಲಿಯಾಸ್ ಅಬು ಇಝ್ಝಾದ್ದಿನ್ ಎಂಬ ಉಗ್ರ ಗುಂಡಿನ ದಾಳಿಗ ಹತನಾಗಿದ್ದಾನೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

ಲಂಡನ್ ದಾಳಿಯಲ್ಲಿ ಈಗಾಗಲೇ 5 ಜನ ಸಾವನ್ನಪ್ಪಿದ್ದು 40ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಸಾವಿಗೀಡಾದವರಲ್ಲಿ ಓರ್ವ ಪೊಲೀಸ್ ಅಧಿಕಾರಿಯೂ ಸೇರಿದ್ದಾರೆ. ಇನ್ನು ದಾಳಿ ನಡೆಸಿದ ಓರ್ವ ಉಗ್ರನನ್ನೂ ಕೊಲ್ಲಲಾಗಿದೆ. [ಲಂಡನ್ ಉಗ್ರರ ದಾಳಿಗೆ ಪೊಲೀಸ್ ಅಧಿಕಾರಿ, ಮಹಿಳೆ ಸೇರಿ 4 ಬಲಿ]

ಉಗ್ರರು ಆಕಸ್ಮಿಕವಾಗಿ ಬ್ರಿಟೀಷ್ ಸಂಸತ್ತಿನ ಮೇಲೆ ದಾಳಿ ನಡೆಸಿದ್ದಲ್ಲ ಎಂದು ಬ್ರಿಟನ್ ಪ್ರಧಾನಿ ಥೆರೆಸಾ ಮೇ ಹೇಳಿದ್ದಾರೆ. ಈ ಮೂಲಕ ಸಂಸತ್ತನ್ನೇ ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂಬುದನ್ನು ಪುನರುಚ್ಚರಿಸಿದ್ದಾರೆ.

ವಿಚಿತ್ರವೆಂದರೆ ದಾಳಿಗೆ ಯಾವುದೇ ಉಗ್ರ ಸಂಘಟನೆ ಹೊಣೆ ಹೊತ್ತುಕೊಂಡಿಲ್ಲ. ಇಲ್ಲಿ ಒಟ್ಟಾಗಿ ಉಗ್ರರು ದಾಳಿ ನಡೆಸಿಲ್ಲ ಬದಲಿಗೆ ಏಕಾಂಗಿ ಉಗ್ರ ನೇರವಾಗಿ ನುಗ್ಗಿ ದಾಳಿ ಮಾಡಿದ್ದಾನೆ.

ಥೇಮ್ಸ್ ನದಿಯ ವೆಸ್ಟ್ ಮಿನಿಸ್ಟರ್ ಬ್ರಿಡ್ಜ್ ಮೇಲೆ ಉಗ್ರನೊಬ್ಬ ಕಾರನ್ನು ಗುಂಪಾಗಿದ್ದ ಜನರ ಮೇಲೆ ಹರಿಸಿದ್ದಾನೆ. ನಂತರ ಕಾರಿನಿಂದ ಇಳಿದು ಗುಂಡು ಹಾರಿಸಲು ಆರಂಭಿಸಿದ್ದಾನೆ. ಕೇತ್ ಪಾಲ್ಮೆರ್ ಎಂಬ ಪೊಲೀಸ್ ಅಧಿಕಾರಿಗೂ ಈ ಸಂದರ್ಭ ಚುಚ್ಚಿದ್ದಾನೆ. ನಂತರ ಉಗ್ರನ್ನನು ಗುಂಡು ಹೊಡೆದು ಕೊಲ್ಲಲಾಗಿದೆ. ಇದೊಂದು ಇಸ್ಲಾಮಿಕ್ ಉಗ್ರರ ಕೃತ್ಯ ಎಂದು ಭದ್ರತಾ ಪಡೆಗಳು ಹೇಳಿವೆ. ಆದರೆ ಯಾವುದೇ ಸಂಘಟನೆಗಳ ಹೆಸರನ್ನು ಉಲ್ಲೇಖಿಸಿಲ್ಲ.

English summary
The police in UK say that they believe that the Parliament attack was Islamist-related terrorism. While several media outlets had claimed that the attacker who was also killed in the incident was Trevor Brook alias Abu Izzadeen, they later retracted the report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X