ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಯಾರಿಸ್‌ ಉಗ್ರರ ದಾಳಿಯ ಹೊಣೆಹೊತ್ತ ಐಎಸ್‌ಐಎಸ್

By ವಿಕಾಸ್ ನಂಜಪ್ಪ
|
Google Oneindia Kannada News

ಪ್ಯಾರೀಸ್, ನವೆಂಬರ್ 14 : ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು, 150ಕ್ಕೂ ಅಧಿಕ ಜನರನ್ನು ಹತ್ಯೆ ಮಾಡಲಾಗಿದೆ. ಐದಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆದಿದೆ. ಐಎಸ್‌ಐಎಸ್ ಉಗ್ರರು ಈ ದಾಳಿಯ ಹೊಣೆ ಹೊತ್ತುಕೊಂಡಿದ್ದಾರೆ.

ಬಟಾಕ್ಲಾನ್ ಆರ್ಟ್ ಸೆಂಟರ್‌ನಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದ ಮೇಲೆ ದಾಳಿ ನಡೆಸಿದ ಉಗ್ರರು 100ಕ್ಕೂ ಅಧಿಕ ಜನರನ್ನು ಒತ್ತೆಯಾಳಾಗಿ ಇಟ್ಟುಕೊಂಡು, ನಂತರ ಅವರನ್ನು ಕೊಂದು ಹಾಕಿದ್ದಾರೆ. ಉಗ್ರರ ದಾಳಿಯ ನಂತರ ಫ್ರಾನ್ಸ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. [ಪ್ಯಾರಿಸ್ ವಾರ ಪತ್ರಿಕೆ ಮೇಲೆ ಉಗ್ರರ ದಾಳಿ]

paris

ಸಂಗೀತ ಕಾರ್ಯಕ್ರಮ, ರೆಸ್ಟೋರೆಂಟ್, ಪುಟ್ಬಾಲ್ ಸ್ಟೇಡಿಯಂ ಸೇರಿದಂತೆ ಐದಕ್ಕೂ ಹೆಚ್ಚು ಕಡೆ ಭಯೋತ್ಪಾದಕ ದಾಳಿ ನಡೆದಿದೆ. ಪುಟ್ಬಾಲ್ ಪಂದ್ಯ ನೋಡುತ್ತಿದ್ದ ಫ್ರಾನ್ಸ್‌ ಅಧ್ಯಕ್ಷ ಫ್ರಾಂಕೋಯಿಸ್‌ ಹೊಲಾಂಡೆ ಅವರು ದಾಳಿಯಿಂದ ಪಾರಾಗಿದ್ದಾರೆ. ಒಟ್ಟು 6 ಭಯೋತ್ಪಾದಕರನ್ನು ಪೊಲೀಸರು ಕೊಂದು ಹಾಕಿದ್ದಾರೆ. [ಉಗ್ರರ ವಿರುದ್ಧ ಹೋರಾಟ: ಫ್ರಾನ್ಸಿಗೆ ಸಾಧ್ಯ, ಭಾರತಕ್ಕೆ ಸಾಧ್ಯವಿಲ್ಲವೇ?]

ಮನಬಂದಂತೆ ಗುಂಡು ಹಾರಿಸಿದರು : ಪ್ಯಾರಿಸ್‌ನ ಸ್ಟೇಡೆ ಡಿ ಫ್ರಾನ್ಸ್ ಕ್ರೀಡಾಂಗಣದಲ್ಲಿ ಫ್ರಾನ್ಸ್ ಮತ್ತು ಜರ್ಮನಿ ನಡುವೆ ಫುಟ್ಬಾಲ್ ಪಂದ್ಯ ನಡೆಯುತ್ತಿದ್ದ ವೇಳೆ, ಸುಮಾರು 7 ಜನ ಬಂದೂಕುಧಾರಿಗಳು, ಕ್ರೀಡಾಂಗಣದ ಹೊರಗೆ ಬಾಂಬ್ ಸ್ಫೋಟಿಸಿದ್ದಾರೆ. ನಂತರ ಹತ್ತಿರದ ರೆಸ್ಟೋರೆಂಟ್‌ಗೆ ನುಗ್ಗಿ ಮನ ಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಇಬ್ಬರು ಭಯೋತ್ಪಾದಕರು ತಮ್ಮನ್ನು ತಾವೇ ಸ್ಫೋಟಿಸಿಕೊಂಡಿದ್ದಾರೆ.

terror attack

ಪ್ಯಾರಿಸ್ ಮೇಲಿನ ಉಗ್ರರ ದಾಳಿಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ, ಇಂಗ್ಲೆಂಡ್ ಪ್ರಧಾನಿ ಡೇವಿಡ್ ಕೆಮರೂನ್ ಖಂಡಿಸಿದ್ದಾರೆ. ಭಯೋತ್ಪಾದನೆ ವಿರುದ್ಧ ಹೋರಾಡಲು ಫ್ರಾನ್ಸ್‌ಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಅಮೆರಿಕ ಘೋಷಿಸಿದೆ.

2015ರ ಆರಂಭದಲ್ಲಿ ಪ್ಯಾರಿಸ್‍ನ ಚಾರ್ಲಿ ಹೆಬ್ಡೋ ಪತ್ರಿಕಾ ಕಚೇರಿ ನಂತರ ಪ್ಯಾರಿಸ್‍ನ ರೆಸ್ಟೋರೆಂಟ್ ಒಂದರ ಮೇಲೆ ಉಗ್ರರು ದಾಳಿ ನಡೆದಿತ್ತು. ಕೆಲವು ದಿನಗಳ ಹಿಂದೆ ಫ್ರಾನ್ಸ್ ಐಎಸ್‌ಐಎಸ್ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿತ್ತು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಉಗ್ರರು ಈ ದಾಳಿ ನಡೆಸಿದ್ದಾರೆ.

france
English summary
At least 150 persons were dead in multiple shootings in Paris, France. France declare a national state of emergency after terror attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X