ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಮಾರ್ಟ್ ಸಿಟಿ,ಬುಲೆಟ್ ರೈಲು ಕೊರಿಯಾ ಜತೆ ಡೀಲ್

By Mahesh
|
Google Oneindia Kannada News

ನವದೆಹಲಿ,ಮೇ 18: ಚೀನಾ, ಮಂಗೋಲಿಯಾ ಪ್ರವಾಸದ ನಂತರ ದಕ್ಷಿಣ ಕೊರಿಯಾಕ್ಕೆ ಪ್ರಧಾನಿ ನರೇಂದ್ರ ಮೋದಿ ಕಾಲಿಟ್ಟಿದ್ದಾರೆ. ಭಾರತ ಹಾಗೂ ದಕ್ಷಿಣ ಕೂರಿಯಾ ನಡುವೆ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವಾರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಸ್ಮಾರ್ಟ್ ಸಿಟಿನಿಂದ ಬುಲೆಟ್ ಟ್ರೈನ್ ತನಕ ಹಲವು ಯೋಜನೆಗಳಿಗೆ ಅಂಕಿತ ಬಿದ್ದಿದೆ.

ವರೆಗಿನ ಪ್ರಧಾನಿ ಮೋದಿಯವರ ಹಲವು ಮಹತ್ವಾಕಾಂಕ್ಷೆ ಯೋಜನೆಗಳ ಅನುಷ್ಠಾನಕ್ಕೆ ಬೆಂಬಲವಾಗಿ 10 ಶತಕೋಟಿ ಡಾಲರ್ ಮೊತ್ತದ ನಿಧಿಯೊಂದನ್ನು ಸ್ಥಾಪಿಸುವುದಾಗಿ ಭಾರತದಲ್ಲಿರುವ ದಕ್ಷಿಣ ಕೊರಿಯ ರಾಯಭಾರಿ ಜೂನ್ ಗ್ಯೂ ಲೀ ಹೇಳಿದ್ದಾರೆ.

List of agreements signed between India and South Korea
ಭಾರತ ಹಾಗೂ ದಕ್ಷಿಣ ಕೊರಿಯಾ ನಡುವಿನ ಒಪ್ಪಂದಗಳ ಪಟ್ಟಿ ಹೀಗಿದೆ:
* ಆದಾಯ ತೆರಿಗೆಗೆ ಸಂಬಂಧಿಸಿದಂತೆ ಡಬ್ಬಲ್ ಟ್ಯಾಕ್ಸೇಷನ್ ಹಾಗೂ ತೆರಿಗೆ ತಪ್ಪಿಸಿಕೊಳ್ಳುವಿಕೆ ತಡೆಗಟ್ಟಲು ಒಪ್ಫಂದ.
* ದೃಶ್ಯ ಹಾಗೂ ಶ್ರವ್ಯ ಮಾಧ್ಯಮದಲ್ಲಿ ಸಹಕಾರಕ್ಕೆ ಪರಸ್ಪರ ಒಪ್ಪಂದ.
* ಭಾರತದ ರಾಷ್ಟ್ರೀಯ ಭದ್ರತಾ ನಿಯೋಗ ಹಾಗೂ ಕೊರಿಯನ್ ರಿಪಬ್ಲಿಕ್ ರಾಷ್ಟ್ರೀಯ ಭದ್ರತಾ ಪಡೆ ನಡುವೆ ಒಪ್ಪಂದ.
* ಇಂಧನ, ವ್ಯಾಪಾರ, ಕೈಗಾರಿಕಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಹಕಾರ, ಎಲೆಕ್ಟ್ರಿಕ್ ಹಾಗೂ ಹೊಸ ಇಂಧನ ಉತ್ಪಾದನೆ ಉತ್ತೇಜನಕ್ಕಾಗಿ ಒಪ್ಪಂದ.
* ಭಾರತದ ಯುವಜನ ಖಾತೆ ಹಾಗೂ ಕ್ರೀಡಾ ಖಾತೆ ಹಾಗೂ ಕೊರಿಯಾದ ಲಿಂಗ ಸಮಾನತೆ ಹಾಗೂ ಕೌಟುಂಬಿಕ ಖಾತೆ ನಡುವೆ ಸಹಕಾರಕ್ಕೆ ಒಪ್ಪಂದ.

* ರಾಷ್ಟ್ರೀಯ ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಂಪರ್ಕ ಕುರಿತಂತೆ ಸಹಕಾರಕ್ಕಾಗಿ ಒಪ್ಪಂದ.
* ಜಲಯಾನ, ಹಡಗು ನಿರ್ಮಾಣ, ಶಿಪ್ಪಿಂಗ್, ಸರಕು ಸಾಗಣೆ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಉಭಯ ದೇಶಗಳ ನಡುವೆ ಒಪ್ಪಂದ.
(ಒನ್ ಇಂಡಿಯಾ ಸುದ್ದಿ)

English summary
Prime Minister Narendra Modi on Monday said that India and South Korea have agreed to expand their defence and security cooperation and that he has invited South Korean companies to invest in the manufacture of defence equipment in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X