ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್ 'ದಂಪತಿ' ಸ್ಮೃತಿ-ಶ್ವೇತಾ ಕಂಗ್ರಾಟ್ಸ್!

By Mahesh
|
Google Oneindia Kannada News

ಹೈದರಾಬಾದ್, ಮೇ.26: ಸ್ಮೃತಿ-ಶ್ವೇತಾ ಇಬ್ಬರಿಗೆ ದಂಪತಿ ಎನ್ನಬೇಕೇ? ದಂಪತ್ನಿ ಎನ್ನಬೇಕೇ? ಎಂಬ ಚರ್ಚೆ ಆಮೇಲೆ ಇರಲಿ, ಭಾರತೀಯ ಮೂಲದ ಯುವತಿಯರಿಬ್ಬರು 2005ರಲ್ಲಿ ಮೊದಲ ಭೇಟಿಯಾಗಿ 2015ರಲ್ಲಿ ಮದುವೆಯಾಗಿದ್ದಾರೆ. ಇಲ್ಲಿನ ಗೂಗಲ್ ಕಚೇರಿ ಸಿಬ್ಬಂದಿಯಾಗಿದ್ದ ಇಬ್ಬರು ತಂತ್ರಜ್ಞರು ಭಾರತದ ಕಟ್ಟು ಪಾಡು, ಸಮಾಜದ ನಿಯಮಾವಳಿಗಳಿಗೆ ಬೇಸತ್ತು ಅಮೆರಿಕಕ್ಕೆ ಹಾರಿ ವಿವಾಹ ಬಂಧನಕ್ಕೊಳಪಟ್ಟಿದ್ದಾರೆ.

ಅವರಿಬ್ಬರ ಪ್ರೇಮಕ್ಕೆ ಅವರ ಕುಟುಂಬದವರಿಂದಲೇ ಅನುಮತಿ ಸಿಗಲಿಲ್ಲ. ಕೆಲವು ಗೆಳೆಯ-ಗೆಳತಿಯರ ಬೆಂಬಲ ಬಿಟ್ಟರೆ ಮಿಕ್ಕವರು ಅನ್ಯಗ್ರಹ ಜೀವಿಗಳಂತೆ ಇವರನ್ನು ಕಂಡಿದರು. ಭಾರತದಲ್ಲೇ ಮದುವೆಯಾಗಲು ಶತಪ್ರಯತ್ನ ಮಾಡಿದರೂ ಆಗಲಿಲ್ಲ. ನೋಂದಣಿ ಕಚೇರಿಗೆ ಅಲೆದಾಟ ತಪ್ಪಲಿಲ್ಲ. [ಸಲಿಂಗಿ ಅಯ್ಯರ್ ಮದ್ವೆಗೆ ಗಂಡು ಬೇಕಿದೆ]

Lesbian couple at Google Hyderabad breaks social taboos, gets married

ಕೊನೆಗೂ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಸಿಟಿ ಹಾಲ್ ನಲ್ಲಿ ಸ್ಮೃತಿ ನಾರಾಯಣ್ ಹಾಗೂ ಶ್ವೇತಾ ಪೈ ಅವರಿಗೆ ಕಲ್ಯಾಣ ಯೋಗ ಕೂಡಿ ಬಂದಿದೆ. ಗೂಗಲ್ ಉದ್ಯೋಗಿಗಳಾದ ಶ್ವೇತಾ ಮತ್ತು ಸ್ಮೃತಿ ಸಲಿಂಗ ಹಕ್ಕುಗಳಿಗಾಗಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ಬೆಂಗಳೂರಿನಲ್ಲೂ ಎಲ್ ಜಿಬಿಟಿಗಳ ಹೋರಾಟದಲ್ಲಿ ಪಾಲ್ಗೊಂಡಿದ್ದರು. [ಸಲಿಂಗರತಿ ಕಾನೂನು ಬಾಹಿರವಲ್ಲ, ದಿಲ್ಲಿ ಕೋರ್ಟ್]

ಬೆಂಗಳೂರಿನ ಎಲ್ ಜಿಬಿಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ನಮ್ಮಿಬ್ಬರ ಸಂಬಂಧದ ಬಗ್ಗೆ ಸ್ಥಳೀಯ ಕಾರ್ಯಕರ್ತರಿಬ್ಬರಲ್ಲಿ ಹೇಳಿಕೊಂಡಿದ್ದೆವು. ಅವರಿಬ್ಬರು ನಮಗೆ ಬೆಂಬಲ ನೀಡಿದ್ದರಿಂದ ನಾವು ಇಂದು ಮದುವೆಯಾಗಲು ಧೈರ್ಯ ಮೂಡಿತು ಎಂದು ಶ್ವೇತಾ ಪೈ ಹೇಳಿದ್ದಾರೆ.

ಮುಂಬೈನ ಸಲಿಂಗ ಹೋರಾಟಗಾರ ಹರೀಶ್ ಅಯ್ಯರ್ ತನ್ನ 'ಮದುವೆಗೆ ಗಂಡು ಬೇಕಿದೆ' ಎಂದು ಜಾಹೀರಾತು ನೀಡಿ ಸುದ್ದಿಯಾಗಿದ್ದರು. ಈ ಜಾಹೀರಾತಿಗೆ ಅರ್ಧ ಡಜನ್ ರಿಪ್ಲೇ ಕೂಡಾ ಬಂದಿತ್ತು. ಅದರೆ, ಇನ್ನೂ ಮದುವೆ ಮಾತುಕತೆ ತನಕ ವಿಷಯ ಮುಂದುವರೆದಿಲ್ಲ. ಭಾರತದಲ್ಲಿ ಸಲಿಂಗಿಗಳ ಮದುವೆಗೆ ಇನ್ನೂ ಮಾನ್ಯತೆ ಸಿಕ್ಕಿಲ್ಲ. ಐರ್ಲೆಂಡ್ ನಲ್ಲಿ ಇತ್ತೀಚೆಗೆ ಸಲಿಂಗಿಗಳ ಮದುವೆಗೆ ಕಾನೂನು ಜಾರಿಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
They met in 2005, fell in love and finally got married in 2015. Ten long years, despite several ups and downs in their relationship, the young couple supported each other and finally received a legal acknowledgement in the society.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X