ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತಾರಾಷ್ಟ್ರೀಯ ಕೋರ್ಟ್ ತೀರ್ಪಿಗೆ ಪಾಕಿಸ್ತಾನ ಅಸಮಾಧಾನ

ಕುಲದೀಪ್ ಜಾಧವ್ ಗೆ ನೀಡಿದ್ದ ಗಲ್ಲು ಶಿಕ್ಷೆಯನ್ನು ತಡೆ ಹಿಡಿದಿರುವ ಅಂತಾರಾಷ್ಟ್ರೀಯ ಕೋರ್ಟ್ ನ ಮಧ್ಯಂತರ ತೀರ್ಪಿಗೆ ಬಗ್ಗೆ ಪಾಕಿಸ್ತಾನ ಬೇಗುದಿ.

|
Google Oneindia Kannada News

ನವದೆಹಲಿ, ಮೇ 18: ಕುಲಭೂಷಣ್ ಜಾಧವ್ ಬಗ್ಗೆ ಅಂತಾರಾಷ್ಟ್ರೀಯ ನ್ಯಾಯಾಲಯ ನೀಡಿರುವ ತೀರ್ಪಿನ ಬಗ್ಗೆ ಪಾಕಿಸ್ತಾನ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಪಾಕಿಸ್ತಾನದಲ್ಲಿ ಗೂಢಚರ್ಯೆ ನಡೆಸಿದ ಆರೋಪದ ಮೇರೆಗೆ ಭಾರತೀಯ ಕುಲಭೂಷಣ್ ಜಾಧವ್ ಗೆ ಪಾಕಿಸ್ತಾನ ಸೇನಾ ನ್ಯಾಯಾಲಯ ನೀಡಿದ್ದ ಗಲ್ಲು ಶಿಕ್ಷೆಗೆ ಅಂತಾರಾಷ್ಟ್ರೀಯ ನ್ಯಾಯಾಲಯ ಗುರುವಾರ (ಮೇ 18) ತನ್ನ ಮಧ್ಯಂತರ ಆದೇಶದಲ್ಲಿ ತಡೆ ನೀಡಿದೆ.[ಜಾಧವ್ ಗೆ ಜಯ ತಂದಿತ್ತ ವಕೀಲ ಹರೀಶ್ ಸಾಳ್ವೆ ಪರಿಚಯ]

Pakistan flag

ಇದು ಪಾಕಿಸ್ತಾನದ ಅಸಮಾಧಾನಕ್ಕೆ ಕಾರಣ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ನಫೀಸ್ ಝಕಾರಿಯಾ ಅವರು, ''ಅಂತಾರಾಷ್ಟ್ರೀಯ ನ್ಯಾಯಾಲಯದ ಮಧ್ಯಂತರ ಆದೇಶವನ್ನು ಒಪ್ಪಿಕೊಳ್ಳಲಾಗದು. ನಮ್ಮ ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಅಂತಾರಾಷ್ಟ್ರೀಯ ಕೋರ್ಟ್ ನಿರ್ಧಾರ ಕೈಗೊಳ್ಳುವುದಾದರೂ ಹೇಗೆ?'' ಎಂದು ಪ್ರಶ್ನಿಸಿದರು.[ಜಾಧವ್ ನೇಣು ತಡೆ : ಕೋರ್ಟಿನ 10 ಪ್ರಮುಖ ಹೇಳಿಕೆ]

ಅಲ್ಲದೆ, ಭಾರತವು ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಪ್ರಪಂಚದ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.[ಸಾವು ಗೆದ್ದ ಕುಲಭೂಷಣ್ ಜಾಧವ್ ಗೆ ಟ್ವಿಟ್ಟಿಗರ ಅಭಿನಂದನೆ]

English summary
The Pakistan government on Thursday expressed its dissatisfaction over the International Court of Justice's verdict on Kulbhushan Jadhav's death sentence case and said it would soon present more evidence on the matter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X