ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಬೂಲ್: ಸಂಸತ್ತಿನ ಮೇಲೆ ಉಗ್ರರ ದಾಳಿ, 6ಜನ ಬಲಿ

By Mahesh
|
Google Oneindia Kannada News

ಕಾಬೂಲ್, ಜೂ.22: ತಾಲಿಬಾನ್ ಉಗ್ರರು ಸೋಮವಾರ ಮಧ್ಯಾಹ್ನ ಸರಣಿ ಆತ್ಮಾಹುತಿ ದಾಳಿ ನಡೆಸಿ ಅಫ್ಘಾನಿಸ್ತಾನ ಬೆಚ್ಚುವಂತೆ ಮಾಡಿದ್ದಾರೆ. ಸಂಸತ್ ಭವನ ಸೇರಿದಂತೆ ಆರು ಕಡೆಗಳಲ್ಲಿ ಬಾಂಬ್ ಸ್ಫೋಟ ಕೇಳಿ ಬಂದಿದೆ. ಸದ್ಯದ ಮಾಹಿತಿ ಪ್ರಕಾರ ಈ ಘಟನೆಯಲ್ಲಿ ಆರು ಜನ ಮೃತಪಟ್ಟಿದ್ದಾರೆ.

ಸಂಭಾವ್ಯ ದಾಳಿಯ ನಿರೀಕ್ಷೆ ಇದ್ದ ಕಾರಣ ಸಂಸತ್ ಭವನದಿಂದ ಎಲ್ಲರನ್ನು ಹೊರಕ್ಕೆ ಕಳಿಸಲಾಗಿತ್ತು. ಹೀಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

Kabul : Afghan parliament under attack

ಇರಾಕಿ ಉಗ್ರರಿಗಿಂತ ತಮ್ಮ ಪ್ರಾಬಲ್ಯ ಹೆಚ್ಚಿನ ಪ್ರಮಾಣದಲ್ಲಿದೆ ಎಂಬುದನ್ನು ಸಾಬೀತುಪಡಿಸಲು ತಾಲಿಬಾನಿ ಉಗ್ರರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. [ಚಿತ್ರಗಳಲ್ಲಿ ಸಂಸತ್ ದಾಳಿ ಹುತಾತ್ಮರಿಗೆ ನಮನ]

ಅಫ್ಘಾನಿಸ್ತಾನದ ನೂತನ ರಕ್ಷಣಾ ಸಚಿವ ಮಸೂಮ್ ಸ್ತಾನೆಕ್ಜಾಯಿ ಅವರನ್ನು ಸಂಸದರಿಗೆ ಪರಿಚಯಿಸುವ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಆದರೆ, ಮುನ್ನಚ್ಚರಿಕೆ ಕ್ರಮಗಳನ್ನು ಅನುಸರಿಸಿದ್ದರಿಂದ ಭಾರಿ ಪ್ರಾಣಹಾನಿ ತಪ್ಪಿಸಲಾಗಿದೆ.

ಇರಾಕಿ ಉಗ್ರ ಪಡೆ ಐಎಸ್ಐಎಸ್ ಗೆ ಅಫ್ಘಾನಿಸ್ತಾನಕ್ಕೆ ಕಾಲಿಡದಂತೆ ತಾಲಿಬಾನಿ ಉಗ್ರರು ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಇದಾದ ಬಳಿಕ ತಾಲಿಬಾನಿಗಳು ಈ ಕೃತ್ಯಕ್ಕೆ ಮುಂದಾಗಿದ್ದಾರೆ.

English summary
A series of explosions and gunfire have hit the Afghan parliament in Kabul, with reports of gunmen attacking the building, reports Al Jazeera.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X