ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧ್ಯಕ್ಷರಾಗಿ 24 ಗಂಟೆ ಕಳೆಯುವುದರೊಳಗೆ ಟ್ರಂಪ್ ಗೆ ಉಗ್ರರ ಬೆದರಿಕೆ!

ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಐಎಸ್ ಐಸ್ ಉಗ್ರರ ನಿರ್ಮೂಲನೆ ಮಾಡುವುದಾಗಿ ಎಚ್ಚರಿಸಿದ್ದ ಡೊನಾಲ್ಡ್ ಟ್ರಂಪ್ ವಿರುದ್ಧ ಉಗ್ರರನ್ನು ಬೆಂಬಲಿಸುವ ಕೆಲ ಸಂಘಟನೆಗಳಿಂದ ಟ್ವೀಟರ್ ನಲ್ಲಿ ಬೆದರಿಕೆ.

|
Google Oneindia Kannada News

ವಾಷಿಂಗ್ಟನ್, ಜನವರಿ 21: ಅಮೆರಿಕದ 45ನೇ ಅಧ್ಯಕ್ಷರಾಗಿ ಶುಕ್ರವಾರವಷ್ಟೇ ಪ್ರಮಾಣ ವಚನ ಸ್ವೀಕರಿಸಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಈ ಐತಿಹಾಸಿಕ ಸಾಧನೆ ಮಾಡಿದ 24 ಗಂಟೆಗಳು ಕಳೆಯುವುದರೊಳಗೇ ಐಎಸ್ಐಎಸ್ ಉಗ್ರರಿಂದ ಬೆದರಿಕೆ ಬಂದಿದೆ.

ಅಮೆರಿಕದ ಅಧ್ಯಕ್ಷರಾಗಿ ತಮ್ಮ ಅಧಿಕಾರಾವಧಿ ಆರಂಭಿಸಿರುವ ಟ್ರಂಪ್ ಅವರಿಗೆ ಮುಂದಿನ ದಿನಗಳು ಬಲು ಸವಾಲಿನದ್ದಾಗಿರಲಿವೆ ಎಂದು ಟ್ವೀಟರ್ ನಲ್ಲಿ ಅಲ್ ಖೈದಾ ಹಾಗೂ ಐಎಸ್ ಐಎಸ್ ಉಗ್ರ ಸಂಘಟನೆಗಳನ್ನು ಬೆಂಬಲಿಸುತ್ತಿರುವ ಕೆಲ ಗುಂಪುಗಳು ಬೆದರಿಕೆಯೊಡ್ಡಿವೆ ಎಂದು ಮೇರಿಲ್ಯಾಂಡ್ ನಲ್ಲಿ ಎಸ್ಐಟಿಇ ಇಂಟಲಿಜೆಂಟ್ಸ್ ಗ್ರೂಪ್ ನ ಕಾರ್ಯಕಾರಿ ನಿರ್ದೇಶಕಿಯಾಗಿರುವ ರಿಟಾ ಕಟ್ಜ್ ತಿಳಿಸಿದ್ದಾರೆ.

Islamic State's warning to US President Donald Trump

ಟ್ರಂಪ್ ಅವರ ಬಿಳಿಗೂದಲಿಗೆ ಬೆಂಕಿ ಇಡುತ್ತೇವೆ ಎಂದು ಟ್ವೀಟ್ ಮಾಡಿರುವ ಕೆಲವರು, ಅಮೆರಿಕ ಅಧ್ಯಕ್ಷರಾಗಿ ಟ್ರಂಪ್ ಮಾಡಿದ ಮೊದಲ ಭಾಷಣವು ಪಾಶ್ಚಿಮಾತ್ಯರ ಹಾಗೂ ಇಸ್ಲಾಂ ಧರ್ಮೀಯರ ನಡುವಿನ ಯುದ್ಧದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ ಎಂದಿದ್ದಾರೆ.

ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಟ್ರಂಪ್ ಮಾಡಿದ ತಮ್ಮ ಮೊದಲ ಭಾಷಣದಲ್ಲಿ ಐಎಸ್ ಉಗ್ರರನ್ನು ಭೂಮಿಯಿಂದಲೇ ಮೂಲೋಚ್ಛಾಟನೆ ಮಾಡುವುದಾಗಿ ಹೇಳಿದ್ದರು.

ಯಾವುದೀ ಎಸ್ಐಟಿಇ ಇಂಟಲಿಜೆಂಟ್ಸ್ ಗ್ರೂಪ್?: ಮೇರಿಲ್ಯಾಂಡ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಸ್ಐಟಿಇ ಇಂಟಲಿಜೆಂಟ್ಸ್ ಗ್ರೂಪ್, ಅಮೆರಿಕದ ಹಿತಾಸಕ್ತಿಗೆ ಧಕ್ಕೆ ತರುವಂಥ ಲೈನ್ ವ್ಯವಹಾರಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಸಂಸ್ಥೆಯಾಗಿದೆ.

English summary
Within 24 hours after the presidential address, several social media groups having IS and al-Qaeda affiliations Gives warning to the president.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X