ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದಿರುಗಿದ ಉಗ್ರ ಬಾಯ್ಬಿಟ್ಟ ಸ್ಫೋಟಕ ಮಾಹಿತಿಗಳು

|
Google Oneindia Kannada News

ಮುಂಬೈ, ನ. 30: ಐಎಸ್ ಐಎಸ್ ಉಗ್ರ ಸಂಘಟನೆ ತೊರೆದು ಭಾರತಕ್ಕೆ ಹಿಂದಿರುಗಿರುವ ಯುವಕ ಅರೀಬ್ ಮಜೀದ್ ನನ್ನು ಎಂಟು ದಿನಗಳ ಕಾಲ ರಾಷ್ಟ್ರೀಯ ತನಿಖಾ ದಳ(ಎನ್ ಐಎ) ವಶಕ್ಕೆ ಒಪ್ಪಿಸಲಾಗಿದೆ. ಭಾರತದಲ್ಲಿ ದುಷ್ಕೃತ್ಯ ನಡೆಸಲು ಈತ ಹಿಂದಿರುಗಿರಬೇಕು ಎಂಬ ಅನುಮಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

ವಿಚಾರಣೆ ವೇಳೆ ಭಾರತೀಯ ಗುಪ್ತಚರ ದಳಕ್ಕೆ ಅನೇಕ ಮಾಹಿತಿಗಳನ್ನು ಮಜೀದ್ ನೀಡಿದ್ದಾನೆ. ಮಜೀದ್ ಮತ್ತಿತರ ಸಿವಿಲ್ ಇಂಜಿನಿಯರ್ ವಿದ್ಯಾರ್ಥಿಗಳಿಗೆ ಇರಾಕ್ ನಲ್ಲಿ ಅತಿ ಕೆಟ್ಟದಾದ ಕೆಲಸ ವಹಿಸಲಾಗುತ್ತಿತ್ತು. ಕಟ್ಟು ನಿಟ್ಟಿನ ಮೇಲ್ವಿಚಾರಣೆ ನಡೆಸಲಾಗುತ್ತಿತ್ತು ಎಂದು ಹೇಳಿದ್ದಾನೆ. ಅಲ್ಲದೇ ಇರಾಕ್ ನಲ್ಲಿ ಅನುಭವಿಸಿದ ಕಷ್ಟಗಳ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ.[ಐಎಸ್ಐಎಸ್ ಸೇರಿದವರಿಗೆ ದೇಶಕ್ಕೆ ಮರಳೋ ಆಸೆ]

terrorism

ಒನ್ ಇಂಡಿಯಾಕ್ಕೆ ಈ ಬಗ್ಗೆ ಹೇಳಿಕೆ ನೀಡಿರುವ ಗುಪ್ತಚರದಳದ ಅಧಿಕಾರಿಗಳು, ಸುಮ್ಮನೆ ಯುದ್ಧ ಮಾಡುವಂತೆ ಆತನನ್ನು ಪ್ರೇರೇಪಿಸಲಾಗುತ್ತಿತ್ತು. ಕೆಲವು ಬಾರಿ ಆತ ಗಾಯಗೊಂಡು ನರಳುತ್ತಿದ್ದರೂ ಸಹಾಯಕ್ಕೆ ಯಾರೂ ಬಂದಿಲ್ಲ ಎಂದು ತಿಳಿಸಿದ್ದಾರೆ.

ಇದನ್ನು ಮಜೀದ್ ಮಾತಿನಲ್ಲೇ ಹೇಳುವುದಾದರೆ, ನನಗೆ ಯಾರಾದರೂ ಸಹಾಯ ಮಾಡುತ್ತಾರೆ ಎಂದುಕೊಂಡಿದ್ದೆ, ಆದರೆ ನನ್ನ ಬಳಿಗೆ ಯಾರೂ ಸುಳಿಯಲಿಲ್ಲ, ಗಾಯಗೊಂಡು ನರಳುತ್ತಿದ್ದವನಿಗೆ ಸಾವು ಸಮೀಪಿಸಿದಂತೆ ಕಾಣಿತ್ತಿತ್ತು. ಭಾರತಕ್ಕೆ ಬಂದ ನಂತರ ನಿಜವಾದ ಬದುಕು ಅಂದರೆ ಎನು? ಎಂಬುದು ಅರಿವಾಗಿದೆ. ನರಕದಿಂದ ಸ್ವರ್ಗಕ್ಕೆ ಬಂದಂತಾಗಿದೆ ಎಂದು ಹೇಳುತ್ತಾನೆ.[ಒಂದು ಕೈಯಲ್ಲಿ ಎಕೆ47, ಮತ್ತೊಂದು ಕೈಯಲ್ಲಿ ಮಗು!]

ಈ ಪ್ರಕರಣದಿಂದ ನಾನು ಸಾಕಷ್ಟು ನೊಂದಿದ್ದೇನೆ. ನನ್ನ ಸ್ನೇಹಿತರ ಜತೆಗೂಡಿ ಮಾಸ್ಕೋಕ್ಕೆ ತೆರಳಬೇಕು ಅಂದು ಕಳೆದ ವರ್ಷ ಅಂದುಕೊಂಡಿದ್ದೆ. ಸಿರಿಯಾದಲ್ಲಿನ ಹಿಂಸಾಚಾರವನ್ನು ಕಣ್ಣಾರೆ ಕಂಡಿದ್ದೇನೆ. ಪ್ರಪಂಚದಲ್ಲಿ ಇಸ್ಲಾಮಿಕ್ ಕೌನ್ಸಿಲ್ ವೊಂದನ್ನು ಸ್ಥಾಪಿಸಬೇಕೆನ್ನುವುದು ಐಎಸ್ ಐಎಸ್ ನ ಮೂಲ ಉದ್ದೇಶ. ಧರ್ಮದ ಹೆಸರಿನಲ್ಲಿ ಜಗಳ, ಕಿತ್ತಾಟ ಆದೇಶದಲ್ಲಿ ಸಾಮಾನ್ಯವಾಗಿಬಿಟ್ಟಿದೆ ಎಂದು ಹೇಳಿದ್ದಾನೆ.

ಉಗ್ರ ಸಂಘಟನೆ ಸೇರಿದ್ದು ಯಾಕೆ?
ನಾನು ಏನನ್ನಾದರೂ ಸಾಧಿಸಬೇಕು ಎಂದುಕೊಂಡಿದ್ದೆ. ಅದಕ್ಕೆ ತಕ್ಕುದಾದ ಅವಕಾಶಗಳು ಸಿಗುತ್ತಿರಲಿಲ್ಲ. ಐಎಸ್ ಐಎಸ್ ಸಂಘಟನೆಗೆ ಯುವಕರನ್ನು ಸೇರಿಸುವ ಏಜೆನ್ಸಿಯೊಂದಿದೆ ಎಂಬುದು ನನಗೆ ಗೊತ್ತಿರಲಿಲ್ಲ. ಓದಿನ ಜತೆಗೆ ದಿನದ ಅನೇಕ ಗಂಟೆಗಳನ್ನು ಅಂತರ್ಜಾಲದೊಂದಿಗೆ ಕಳೆಯುತ್ತಿದ್ದೆ. ಸಾವಿರಾರು ಜಾಲತಾಣಗಳನ್ನು ವೀಕ್ಷಿಸಿದ ನಂತರ ಐಎಸ್ ಐಎಸ್ ನ ಸೇರುವ ನಿರ್ಧಾರ ಮಾಡಿದೆ ಎಂದು ಮಜೀದ್ ಹೇಳುತ್ತಾನೆ.

ಭಾರತದೊಂದಿಗೂ ಸಂಬಂಧ ಇಟ್ಟುಕೊಂಡಿದ್ದೆ
ಮಹಾರಾಷ್ಟ್ರದ ಭೀವಂಡಿಯ ವ್ಯಕ್ತಿಯೊಬ್ಬನೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದೆ. ಯಾವುದೋ ಅಂತರ್ಜಾಲ ತಾಣದ ಮೂಲಕ ಆತನೊಂದಿಗೆ ಸಂವಹನ ನಡೆಸುತ್ತಿದ್ದೆ. ಆದರೆ ಆತ ಸುಲಭವಾಗಿ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಅವನಿಗೆ ಈ ಬಗ್ಗೆ ಹೇಳಿರಲಿಲ್ಲ. ನಿನ್ನ ಮನೆಯ ಹಣಕಾಸು ಸ್ಥಿತಿ ಸುಧಾರಿಸುತ್ತೇವೆ, ನಮ್ಮೊಂದಿಗೆ ಕೈ ಜೋಡಿಸು ಎಂದು ತಿಳಿಸಿದ್ದೆ. ಅಲ್ಲದೇ ಪ್ರಯಾಣಕ್ಕೂ ಸಕಲ ಸಿದ್ಧತೆ ಮಾಡಿಕೊಡುವ ಭರವಸೆ ನೀಡಿದ್ದೆ ಎಂದು ಮಜೀದ್ ಹೇಳುತ್ತಾನೆ.

ಇದರ ಅರ್ಥ ಭಾರತದಿಂದ ಆತ ಮತ್ತಷ್ಟು ಯುವಕರನ್ನು ಉಗ್ರಗಾಮಿ ಸಂಘಟನೆಗೆ ಸೇರಿಸುವನಿದ್ದ. ಒಟ್ಟಿನಲ್ಲಿ ಹಿಂದಿರುಗಿರುವ ಉಗ್ರ ಸಂಘಟನೆ ತೊರೆದಿರುವುದಾಗಿ ಹೇಳಿದ್ದಾನೆ. ತನಿಖೆಯ ನಂತರವ ನಿಜವಾದ ಉದ್ದೇಶ ಏನಿತ್ತು ಎಂಬುದು ಬಯಲಿಗೆ ಬರಲಿದೆ.

English summary
Areef alias Areeb Majid the youth who joined the ISIS only to return disillusioned has been giving a lot of information to the National Investigating Agency. Majeed a civil engineering students was assigned odd jobs in Iraq and when he landed in the Hind camp in Iraq, due to his background he was told to supervise construction work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X