ಐಎಸ್ ಮುಖ್ಯಸ್ಥ ಅಲ್ ಬಗ್ದಾದಿ ಫಿನಿಷ್, ಶೀಘ್ರವೇ ಹೊಸ ಉತ್ತರಾಧಿಕಾರಿ

Posted By:
Subscribe to Oneindia Kannada

ಬಾಗ್ದಾದ್, ಜುಲೈ 11: ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಪರಮೋಚ್ಚ ನಾಯಕ ಅಲ್ ಬಗ್ದಾದಿ ಮೃತಪಟ್ಟಿದ್ದಾನೆ ಎಂದು ಆ ಸಂಘಟನೆಯೇ ಘೋಷಿಸಿದೆ ಎಂಬ ವಿಚಾರವನ್ನು ಮಂಗಳವಾರ ಮಾಧ್ಯಮಗಳು ವರದಿ ಮಾಡಿವೆ.

ಐಸಿಸ್ ಮುಖ್ಯಸ್ಥ ಅಬು ಬಕರ್ ಅಲ್ ಬಗ್ದಾದಿ ಹತ್ಯೆ?

ಸದ್ಯದಲ್ಲೇ ಬಗ್ದಾದಿ ಉತ್ತರಾಧಿಕಾರಿಯನ್ನು ಘೋಷಿಸುವುದಾಗಿ ಉಗ್ರಗಾಮಿಗಳ ಗುಂಪು ಹೇಳಿಕೊಂಡಿದೆ. ಪಶ್ಚಿಮ ಮೊಸುಲ್ ನ ತಲ್ ಅಫಾರ್ ನಲ್ಲಿ ಮಾಧ್ಯಮಗಳಿಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಇಸ್ಲಾಮಿಕ್ ಸ್ಟೇಟ್, ಬಗ್ದಾದಿ ಸಾವಿನ ಮಾಹಿತಿಯನ್ನು ಖಚಿತ ಪಡಿಸಿದ್ದು, ಹೆಚ್ಚಿನ ಮಾಹಿತಿ ನೀಡಿಲ್ಲ.

Islamic State confirms al-Baghdadi is dead

ಒಂಬತ್ತು ತಿಂಗಳ ಸತತ ಹೋರಾಟದ ನಂತರ ಮೊಸುಲ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಇರಾಕಿನ ಪ್ರಧಾನ ಮಂತ್ರಿ ಹೈದರ್ ಅಲ್-ಅಬಾದಿ ಅವರು ಅಧಿಕೃತವಾಗಿ ಘೋಷಣೆ ಮಾಡಿದ ನಂತರ ಬಗ್ದಾದಿ ಸಾವಿನ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ.

ಇರಾಕ್ ನ ಉತ್ತರಕ್ಕೆ ನಾನೂರು ಕಿಲೋಮೀಟರ್ ದೂರದಲ್ಲಿರುವ ಮೊಸುಲ್ ಅನ್ನು ಮೂರು ವರ್ಷದ ಹಿಂದೆ ಇಸ್ಲಾಮಿಕ್ ಸ್ಟೇಟ್ ವಶಕ್ಕೆ ಪಡೆದಿತ್ತು. ಮುಂದಿನ ಖಲೀಫನ ನೇತೃತ್ವದಲ್ಲಿ ಹೋರಾಟ ಮುಂದುವರಿಸಲಾಗುವುದು ಎಂದು ಐಎಸ್ ಉಗ್ರಗಾಮಿಗಳು ಹೇಳಿಕೊಂಡಿದ್ದಾರೆ.

English summary
The Islamic State militant group declared that, supreme leader Abu Bakr al-Baghdadi has died, the media reported on Tuesday in Tal Afar, Iraq.
Please Wait while comments are loading...